ಬೆಳ್ತಂಗಡಿ: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಮಗಳು ಕಾಣೆಯಾಗಿದ್ದಳೆಂದು ಕತೆ ಕಟ್ಟಿದ್ದ ಸುಜಾತ ಭಟ್ ನೆರವಿಗೆ ಈಗ ಮಹಿಳಾ ಆಯೋಗ ಮುಂದೆ ಬಂದಿದೆ.
ಧರ್ಮಸ್ಥಳಕ್ಕೆ ಸ್ನೇಹಿತರ ಜೊತೆ ಬಂದಿದ್ದ ನನ್ನ ಮಗಳು ಅನನ್ಯಾ ಭಟ್ ಕಾಣೆಯಾಗಿದ್ದಳು ಎಂದು ಸುಜಾತ ಭಟ್ ದೂರು ನೀಡಿದ್ದರು. ಆದರೆ ಈಗ ಎಸ್ಐಟಿ ತನಿಖೆ ವೇಳೆ ಸುಜಾತ ಭಟ್ ತಾನು ಇದುವರೆಗೆ ಹೇಳಿದ್ದೆಲ್ಲವೂ ಸುಳ್ಳು, ಅನನ್ಯ ಭಟ್ ಎನ್ನುವ ಮಗಳಿಲ್ಲ ಎಂದು ಸತ್ಯ ಒಪ್ಪಿಕೊಂಡಿದ್ದರು. ಇದಾದ ಬಳಿಕ ಸುಜಾತ ಭಟ್ ಗೆ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಟೀಕೆ ವ್ಯಕ್ತವಾಗುತ್ತಿದೆ.
ಮಾಧ್ಯಮಗಳೂ ಅವರನ್ನು ಪದೇ ಪದೇ ಈ ಬಗ್ಗೆ ಪ್ರಶ್ನೆ ಕೇಳುತ್ತಿರುವುದು ಅವರನ್ನು ರೊಚ್ಚಿಗೆಬ್ಬಿಸಿದೆ. ಈ ಹಿನ್ನಲೆಯಲ್ಲಿ ಮಹಿಳಾ ಆಯೋಗ ಪೊಲೀಸರಿಗೆ ಪತ್ರ ಬರೆದು ಆಕೆಗೆ ಭದ್ರತೆ ಒದಗಿಸುವಂತೆ ಮನವಿ ಮಾಡಿದೆ. ಸುಜಾತ ಭಟ್ ಗೆ ಮಾನಸಿಕ ಕಿರುಕುಳವಾಗುತ್ತಿದೆ. ಮಹಿಳೆ ನಿರ್ಭೀತಿಯಿಂದ ಹೇಳಲು ಅವಕಾಶ ಕೊಡಬೇಕು. ಹೀಗಾಗಿ ಆಕೆಗೆ ಸೂಕ್ತ ಭದ್ರತೆ ಒದಗಿಸಿ ಎಂದು ಹೇಳಿದೆ.