ಮನೆಯಲ್ಲಿ ಹೂವಿನ ಗಿಡ ಒಂದಿದ್ದರೆ ಆ ಮನೆಯ ಅಂದ ಆಕರ್ಷಕವಾಗಿರುತ್ತೆ. ಅಲ್ಲದೆ ಹೂವು ಮನೆಯ ವಾತಾವರಣ ಶಾಂತ ಹಾಗೂ ಶುದ್ಧವಾಗಿರಿಸುವುದರಿಂದ ಮನಸ್ಸಿಗೆ ಹಿತ ನೀಡುವುದು. ಹೀಗಾಗಿ ಪ್ರತಿಯೊಬ್ಬರು ಮನೆಯಲ್ಲಿ ಹೂವಿನ ಗಿಡ ಇಡಲು ಬಯಸುತ್ತಾರೆ.
ಅಂತಹ ಹೂವುಗಳಲ್ಲಿ ಚೆಂಡು ಹೂವು ಕೂಡ ಒಂದು. ಹಿಂದೂ ಧರ್ಮದಲ್ಲಿ ಹಳದಿ ಮತ್ತು ಕಿತ್ತಳೆ ಬಣ್ಣದ ಚೆಂಡು ಹೂವುಗಳು ವಿಶೇಷ ಮಹತ್ವವನ್ನು ಹೊಂದಿವೆ. ಚೆಂಡು ಹೂವಿನ ಗಿಡ ಅನೇಕರ ಮನೆಯಲ್ಲಿ ಇರುತ್ತದೆ. ಈ ಹೂವು ಅನೇಕ ಬಣ್ಣಗಳಲ್ಲಿ ಸಹ ಬರುತ್ತದೆ. ಇದೊಂಥಹ ಬಹಳ ವಿಶೇಷವಾದ ಹೂವು ಎನ್ನಬಹುದು.
ವಾಸ್ತು ಶಾಸ್ತ್ರದ ಪ್ರಕಾರ, ಈ ಹೂವು ಮನೆಗೆ ಆಹ್ಲಾದಕರ ಶಕ್ತಿಯನ್ನು ತುಂಬುತ್ತದೆ. ಈ ಹೂವು ಮನೆಯಲ್ಲಿ ಇದ್ದರೆ ನಿಮ್ಮ ಆರ್ಥಿಕ ಸಮಸ್ಯೆಗಳು ನಿವಾರಣೆ ಆಗುತ್ತದೆ. ಯಾವುದಾದರೂ ಕಷ್ಟದಿಂದ ಪರದಾಡುತ್ತಿದ್ದರೆ ಅದಕ್ಕೆ ಸಹ ಪರಿಹಾರ ಸಿಗುತ್ತದೆ. ನಂಬಿಕೆಗಳ ಪ್ರಕಾರ ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿ ಈ ಗಿಡವನ್ನ ನೆಡಬೇಕು. ಇಡಲು ದಿಕ್ಕನ್ನು ಸೂಚಿಸಲಾಗಿದೆ.
ವಾಸ್ತು ನಿಯಮದ ಪ್ರಕಾರ ಈ ಹೂವಿನ ಗಿಡವನ್ನು ಇಟ್ಟರೆ ತುಂಬಾ ಶುಭ ಫಲಗಳು ಸಿಗುತ್ತವೆ. ತಪ್ಪಾದ ಸ್ಥಳದಲ್ಲಿ ಇರಿಸುವುದು ಅಶುಭವಾಗಿದೆ. ಹೀಗಾಗಿ ವಾಸ್ತು ಶಾಸ್ತ್ರದ ಪ್ರಕಾರ ಮಾರಿಗೋಲ್ಡ್ ಹೂವುಗಳನ್ನು ಮನೆಯ ಸರಿಯಾದ ದಿಕ್ಕಿನಲ್ಲಿ ನೆಡುವುದು ಬಹಳ ಮುಖ್ಯ. ನೀವು ಅದನ್ನು ತಪ್ಪಾದ ಸ್ಥಳ ಅಥವಾ ದಿಕ್ಕಿನಲ್ಲಿ ಇಟ್ಟುಕೊಂಡರೆ ಅದು ಮನೆಯಲ್ಲಿ ಅನೇಕ ತೊಂದರೆಗಳನ್ನು ಹೆಚ್ಚಿಸಬಹುದು.
ವಾಸ್ತು ಪ್ರಕಾರ ಮಾರಿಗೋಲ್ಡ್ ಹೂವಿನ ಸಸ್ಯವನ್ನು ಯಾವಾಗಲೂ ಈಶಾನ್ಯ ದಿಕ್ಕಿನಲ್ಲಿ ನೆಡಬೇಕು. ಇದಲ್ಲದೆ ಈ ಶುಭ ಸಸ್ಯವನ್ನು ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿ ನೆಡಬಹುದು. ಇದನ್ನು ಮಾಡುವುದರಿಂದ ನಕಾರಾತ್ಮಕ ಶಕ್ತಿ ಮನೆಯಿಂದ ದೂರವಾಗುತ್ತದೆ. ಬದಲಿಗೆ ಸಕಾರಾತ್ಮಕ ಶಕ್ತಿಯನ್ನು ಮನೆಗೆ ಆಹ್ವಾನಿಸಬಹುದು. ಅಲ್ಲದೆ ಈ ಸಸ್ಯ ಸುತ್ತಮುತ್ತಲಿನ ಪರಿಸರವನ್ನು ಸಹ ಶುದ್ಧೀಕರಿಸುತ್ತದೆ.
ಚೆಂಡು ಹೂವು ವಿಷ್ಣು ಹಾಗೂ ಲಕ್ಷ್ಮೀ ದೇವಿಯ ನೆಚ್ಚಿನ ಹೂವಾಗಿರುವುದರಿಂದ ಮನೆಯಲ್ಲಿ ಈ ಗಿಡವನ್ನು ಇಡುವಾಗ ಎಚ್ಚರಿಕೆ ವಹಿಸಬೇಕು. ಈ ಗಿಡದ ಎಲೆಗಳು ಒಣಗಿದರೆ ಅದನ್ನು ಕೂಡಲೆ ಸ್ವಚ್ಚಗೊಳಿಸುವುದು ತುಂಬಾ ಮುಖ್ಯ. ಜೊತೆಗೆ ಒಣಗಿದ ಗಿಡ ಇಡುವುದು ಕೂಡ ಮಂಗಳಕರವಲ್ಲ. ಇದರಿಂದ ಮನೆಯಲ್ಲಿ ನಾನಾ ಸಮಸ್ಯೆಗಳು ಎದುರಾಗುತ್ತವೆ. ಜೊತೆಗೆ ಇದನ್ನು ಪಶ್ಚಿಮ ದಿಕ್ಕಿನಲ್ಲಿ ಎಂದಿಗೂ ಇಡಬಾರದು.
ಅರಿಯದೇ ಇಟ್ಟರೆ ಮೊದಲು ಆ ಸ್ಥಾನವನ್ನು ಬದಲಾಯಿಸಿ. ಪಶ್ಚಿಮ ಸೂರ್ಯ ಮುಳುಗುವ ದಿಕ್ಕಾಗಿರುವುದರಿಂದ ಮನೆಯಲ್ಲಿ ಸಂಪತ್ತು ಕೈ ತಪ್ಪುವ ಸಾಧ್ಯತೆ ಇದೆ. ಹೀಗಾಗಿ ಚೆಂಡು ಹೂವಿನ ಗಿಡವನ್ನು ಬೆಳೆಸುವಾಗ ಸರಿಯಾದ ದಿಕ್ಕಿನಲ್ಲಿ ಮಾತ್ರ ಬೆಳೆಸಬೇಕು. ಮಾರಿಗೋಲ್ಡ್ ಹೂವನ್ನು ಮನೆಯಲ್ಲಿ ಸರಿಯಾದ ಸ್ಥಳದಲ್ಲಿ ಇಡುವುದು ನಕಾರಾತ್ಮಕ ಶಕ್ತಿಯನ್ನು ದೂರವಿರಿಸುತ್ತದೆ.
ಅಲ್ಲದೆ ಅದರ ಸುವಾಸನೆ ಸುತ್ತಮುತ್ತಲಿನ ವಾತಾವರಣವನ್ನು ಸಕಾರಾತ್ಮಕವಾಗಿರುತ್ತದೆ. ಜೊತೆಗೆ ಮಾರಿಗೋಲ್ಡ್ ಹೂವನ್ನು ಮನೆಯಲ್ಲಿ ಸರಿಯಾದ ದಿಕ್ಕಿನಲ್ಲಿ ಇರಿಸಿದರೆ, ಅದು ಲಕ್ಷ್ಮಿ ಮತ್ತು ವಿಷ್ಣು ದೇವಿಯ ಅನುಗ್ರಹವನ್ನು ನೀಡುವುದಲ್ಲದೆ ಮನೆಯಲ್ಲಿ ಸಂತೋಷ, ಸಮೃದ್ಧಿ ಮತ್ತು ಶಾಂತಿ ಯಾವಾಗಲೂ ನೆಲೆಸುವುದು. ಈ ಹೂವುಗಳನ್ನು ಪೂಜೆಯಲ್ಲೂ ಬಳಸಬಹುದು. ಈ ಹೂವನ್ನು ಪೂಜೆಗೆ ಬಳಕೆ ಮಾಡುವುದರಿಂದ ಹಣದ ಬಿಕ್ಕಟ್ಟು ದೂರವಾಗಲಿದೆ. ಸಂಪತ್ತಿನ ಪ್ರಯೋಜನ ಸಿಗಲಿದೆ.