ಬೆಂಗಳೂರು: ಧರ್ಮಸ್ಥಳ ಕೇಸ್ RSS vs RSS ನಡುವಿನ ಜಗಳ ಅಂತ ಬಿಜೆಪಿ ನಾಯಕರ ವಿರುಧ್ಧ ಸಚಿವ ಪ್ರಿಯಾಂಕ್ ಖರ್ಗೆ ಕಿಡಿಕಾರಿದ್ದಾರೆ. ಬಿಜೆಪಿಯಿಂದ ʻಧರ್ಮಸ್ಥಳ ಚಲೋʼ ಮಾಡ್ತಿರೋ ಬಗ್ಗೆ ವಿಕಾಸಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ತೀವ್ರ ವಾಗ್ದಾಳಿ ನಡೆಸಿದರು.
ಧರ್ಮಸ್ಥಳ ಕೇಸ್ ನಲ್ಲಿ ಬಿಜೆಪಿ ಅವರೇ SIT ಆಗಬೇಕು, ತನಿಖೆ ಆಗಬೇಕು ಅಂತ ಹೇಳಿದ್ರು. SIT ಆದ ಮೇಲೆ ಇವರು ಯಾವುದೇ ಹೇಳಿಕೆ ಕೊಟ್ಟಿರಲಿಲ್ಲ. ಈಗ ತನಿಖೆ ನಡೆಯೋವಾಗ ಜ್ಞಾನೋದಯ ಆಗಿದೆಯೋ ಅಥವಾ ಯಾರಾದ್ರು ಒತ್ತಡ ಹಾಕಿದ್ದಾರೋ ಗೊತ್ತಿಲ್ಲ, ಒಟ್ನಲ್ಲಿ ಮಾತಾಡ್ತಿದ್ದಾರೆ. ಧಮಸ್ಥಳ ಕೇಸ್ RSS vs RSS ಜಗಳ ಅಂತ ಕಿಡಿಕಾರಿದರು.
ಷಡ್ಯಂತ ಆಗಿದೆ ಅಂತ ಹೇಳ್ತಿರೋದು, ಷಡ್ಯಂತ ಮಾಡಿರೋದು ಯಾರು? ಬಿಜೆಪಿ ಅವರು ತಿಮರೋಡಿ, ಗಿರಿಶ್ ಮಟ್ಟಣ್ಣನವರ್ ಬಗ್ಗೆ ಮಾತಾಡ್ತಿದ್ದಾರೆ. ಇವರೆಲ್ಲ ಯಾರ ಕೂಸುಗಳು? ಯಾರ ಗರಡಿಯಲ್ಲಿ ಬೆಳೆದ ವ್ಯಕ್ತಿಗಳು ಇವರು. ಇವೆರೆಲ್ಲ BJP, RSS ವ್ಯಕ್ತಿಗಳೇ. ಮಟ್ಟಣ್ಣನವರ್ ಬಿಜೆಪಿ ಯುವ ಮೋರ್ಚಾದಲ್ಲಿ ಇದ್ದವರು. ಮರೆತು ಹೋಗಿದೆಯಾ? ಬಿಜೆಪಿ ಸ್ಥಳೀಯ ಮುಖಂಡರಿಗೆ ಇದು ಗೊತ್ತಿದೆ ಅಂತ ಹೇಳ್ತಿದ್ದಾರೆ. ಹೇಳಲಿ ಹಾಗಾದ್ರೆ. ತಿಮರೋಡಿ RSS ವ್ಯಕ್ತಿ, RSSಗೆ ಗೊತ್ತಿಲ್ಲದೇ ಇವೆಲ್ಲಾ ನಡೆಯುತ್ತದೆಯಾ? RSS ಜಗಳವನ್ನ ತನಿಖೆ ತಂದು ಹಚ್ಚೋದು ಸರಿಯಲ್ಲ ಅಂತ ಬಿಜೆಪಿ, RSS ವಿರುದ್ಧ ಕಿಡಿಕಾರಿದರು.