ಕೇಂದ್ರ ಸರ್ಕಾರವು ಸ್ವಂತ ಉದ್ಯಮ ಮಾಡುವ ಯುವಕರು ಹಾಗೂ ಮಹಿಳೆಯರಿಗೆ ಒಂದು ಉತ್ತಮ ಅವಕಾಶ ನೀಡಿದೆ, PMFME – Prime minister Formalisation of Micro Food Processing Enterprises ಯೋಜನೆಯಡಿ ಆಹಾರ ಸಂಸ್ಕರಣ ಕ್ಷೇತ್ರದಲ್ಲಿ ಸ್ವಂತ ಉದ್ಯಮ ಆರಂಭಿಸಲು ಈ ಯೋಜನೆಯಲ್ಲಿ ಗರಿಷ್ಟ 15 ಲಕ್ಷದವರೆಗೆ ಸಹಾಯಧನ ನೀಡಲಾಗುತ್ತದೆ.
PMFME ಯೋಜನೆ :
ಗ್ರಾಮೀಣ ಹಾಗೂ ನಗರ ಭಾಗದಲ್ಲಿನ ಸಣ್ಣ ಸಣ್ಣ ಆಹಾರ ಸಂರಕ್ಷಣಾ ಘಟಕಗಳನ್ನು ಸಂಘಟಿತ ಕ್ಷೇತ್ರಕ್ಕೆ ತರಲು, ಗ್ರಾಮೀಣ ಮಟ್ಟದಲ್ಲೂ ಹೆಚ್ಚು ಉದ್ಯೋಗ ಸೃಷ್ಟಿಸಲು, ಹಾಗೂ ಸ್ಥಳೀಯ ಉದ್ಯಮಕ್ಕೆ ಬೆಂಬಲ ನೀಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.
ಪ್ರಧಾನ ಮಂತ್ರಿ ಸೂಕ್ಷ್ಮ ಆಹಾರ ಸಂಸ್ಕರಣ ಉದ್ದಿಮೆಗಳ ಔಪಚಾರಿಕರಣ ಯೋಜನೆಯಡಿಯಲ್ಲಿ ಹಾಗೂ ರಾಜ್ಯ ಸರ್ಕಾರದ ಸಹಯೋಗದೊಂದಿಗೆ ಗರಿಷ್ಟ 15 ಲಕ್ಷದ ವರೆಗೆ ಆರ್ಥಿಕ ನೆರವು ದೊರೆಯಲಿದೆ.
ಯಾರು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು
ಈ ಯೋಜನೆಯಡಿಯಲ್ಲಿ ಆಹಾರ ಸಂಸ್ಕರಣಾ ಘಟಕಗಳ ಸ್ಥಾಪನೆಗೆ ಹಾಗೂ ಅದರ ಮುಂದುವರಿಕೆಗೆ ಸರ್ಕಾರವು 15 ಲಕ್ಷದ ವರೆಗೆ ಸಹಾಯ ಧನ ನೀಡಲಿದ್ದು,
ಸ್ವಂತ ಉದ್ದಿಮೆದಾರರು, ಸ್ವಸಹಾಯ ಸಂಘಗಳು, ರೈತ ಉತ್ಪಾದಕ ಸಂಘಗಳು, ಈ ಯೋಜನೆಯಡಿಯಲ್ಲಿ ಹೊಸ ಉದ್ಯಮ ಸ್ಥಾಪನೆಗೆ ಹಾಗೂ ವಿಸ್ತರಣೆಗೆ ಈ ಯೋಜನೆ ಸಹಾಯಕವಾಗಿದೆ.
PMFME ಯೋಜನೆಯ ಉಪಯೋಗಗಳು
ಈ ಯೋಜನೆಯ ಮೂಲಕ ರೈತ ಉತ್ಪಾದಕರ ಸಂಸ್ಥೆಗಳು, ಸ್ವ ಸಹಾಯ ಗುಂಪುಗಳು, ಆಹಾರ ಸಂಸ್ಕರಣ ಉದ್ಯಮಿಗಳು, ಸಹಕಾರಿ ಸಂಘಗಳು, ಇತರೆ ಸಂಸ್ಥೆಗಳು ಯಾವುದೇ ರೀತಿಯ ಹೊಸ ಆಹಾರ ಉತ್ಪನ್ನಗಳ ಘಟಕ ಸ್ಥಾಪನೆ ಹಾಗೂ ಅಭಿವೃದ್ದಿಗೆ ಸಹಾಯಕವಾಗಲಿದೆ
ಇನ್ನು ಈ ಯೋಜನೆಯ ಮೂಲಕ ಸಂಗ್ರಹಣೆ, ಸಂಸ್ಕರಣೆ, ಶೇಖರಣೆ, ಪ್ರಯೋಗಾಲಯ, ಪ್ಯಾಕೇಜಿಂಗ್ ಇತ್ಯಾದಿ ಘಟಗಳನ್ನು ಸ್ಥಾಪಿಸಲು ಅವಕಾಶವಿದೆ.
PMFME ಯೋಜನೆ ಅಡಿಯಲ್ಲಿ 15 ಲಕ್ಷ ಸಹಾಯಧನ ಪಡೆಯುವುದು ಹೇಗೆ?
ಈ ಯೋಜನೆಯಡಿಯಲ್ಲಿ ಸಿರಿಧಾನ್ಯ, ಬೆಲ್ಲ, ಬೇಕರಿ ಉತ್ಪನ್ನಗಳು, ಎಣ್ಣೆ ಮಿಲ್, ಮೆಣಸಿನ ಪುಡಿ ಘಟಕಗಳು, ಹಣ್ಣಿನ ಉತ್ಪನ್ನಗಳ ಘಟಕಗಳು, ಮಸಾಲೆ, ತೆಂಗಿನ ಉತ್ಪನ್ನಗಳು, ಕೋಳಿ ಉತ್ಪನ್ನಗಳು, ಸಮುದ್ರ ಉತ್ಪನ್ನಗಳು ಸೇರಿದಂತೆ ಇನ್ನೂ ಕೆಲವಾರು ಆಹಾರ ಉತ್ಪಾದನಾ, ಸಂಸ್ಕರಣಾ ಘಟಕಗಳನ್ನು ಆರಂಭಿಸಬಹುದಾಗಿದೆ.
ಆಹಾರ ಸಂರಕ್ಷಣಾ ಘಟಕಗಳ ಉದ್ದಿಮೆ ಸ್ಥಾಪನೆಗೆ ಶೇ.50 ರಷ್ಟು ಸಹಾಯಧನ ನೀಡಲಾಗುತ್ತದೆ, ಗರಿಷ್ಟ 15 ಲಕ್ಷದ ವರೆಗೆ ಸಹಾಯಧನ ಪಡೆಯಬಹುದಾಗಿದೆ.
ಅರ್ಜಿ ವಿಧಾನ ಹೇಗೆ ?
ಈ ಯೋಜನೆಗೆ ನೀವು ಆನ್ಲೈನ್ ಅಥವಾ offline ಮೂಲಕ ಎರಡು ಕಡೆಯಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಸಲು ಮೊದಲಿಗೆ PMFME ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕು.
ನಂತರ ನಿಮ್ಮ ಅರ್ಜಿ ವಿವರ ತುಂಬಿಸಿ, ನಿಮ್ಮ ವಿವರ ಲಗತ್ತಿಸಿ ಅರ್ಜಿ ಸಲ್ಲಿಸಬಹುದಾಗಿದೆ.
ಇನ್ನು ನಿಮ್ಮ ಜಿಲ್ಲೆಯ ಜಿಲ್ಲಾ ಸಂಪನ್ಮೂಲ ವ್ಯಕ್ತಿ (DRP) ನಿಮಗೆ ಅರ್ಜಿ ಸಿದ್ದಪಡಿಸಲು ಸಹಾಯ ಮಾಡುತ್ತಾರೆ,
ನಿಮ್ಮ ಆಯ್ಕೆಯ ಬಳಿಕ ಪ್ರತಿಷ್ಠಿತ ಆಹಾರ ಘಟಕಗಳ ತಂತ್ರಜ್ಞಾನಗಳ ಬಗ್ಗೆ ಉಚಿತ ತರಬೇತಿ ಕೂಡ ನೀಡಲಾಗುತ್ತದೆ
ಹೆಚ್ಚಿನ ಮಾಹಿತಿಗಾಗಿ ನೀವು ನಿಮ್ಮ ಹತ್ತಿರದ ಕೃಷಿ ಇಲಾಖೆಯನ್ನು ಸಂಪರ್ಕಿಸಬಹುದಾಗಿದೆ, ಅಥವಾ PMFME Karnataka ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ವಿವರ ಪಡೆಯಬಹುದಾಗಿದೆ.