ನಿಮಗೆ ಗೃಹಲಕ್ಷ್ಮಿ ಯೋಜನೆಯ ಹಣ ಬರುತ್ತಿಲ್ಲ ವೇ? ಹಾಗಾದರೆ ಈ ಕೆಳಗಿನ ವಿಷಯಗಳಿಂದ ನಿಮ್ಮ ಖಾತೆಗೆ ಹಣ ಬರುತ್ತಿಲ್ಲ ಹಾಗೂ ಅದಕ್ಕೆ ಪರಿಹಾರದ ಒಂದು ಸಣ್ಣ ಮಾಹಿತಿ ಇಲ್ಲಿದೆ.
ಗೃಹಲಕ್ಷ್ಮಿ ಹಣ ಬರುತ್ತಿಲ್ಲ ವೇ ಇಲ್ಲಿದೆ ಮುಖ್ಯ ಕಾರಣಗಳು
ಇನ್ನೂ ಒಂದು ಕಂತಿನ ಹಣ ಬಂದಿಲ್ಲವೆಂದಾದರೆ ಇದು ನಿಮ್ಮ ಅರ್ಜಿಯಲ್ಲಿ ತೊಂದರೆಗಳಿದ್ದಲ್ಲಿ, ನಿಮ್ಮ ಆಧಾರ್, ಮೊಬೈಲ್ ಸಂಖ್ಯೆ ತಪ್ಪಾಗಿದ್ದಲ್ಲಿ , ಆಧಾರ್ ಬ್ಯಾಂಕ್ ಖಾತೆ ಲಿಂಕ್ ಆಗದೇ ಇದ್ದರೆ ಈ ಸಮಸ್ಯೆ ಉಂಟಾಗುತ್ತದೆ.
ಗೃಹಲಕ್ಷ್ಮಿ ಹಣವು ಸರ್ಕಾರದಿಂದ ನೇರವಾಗಿ ಮಹಿಳೆಯರ ಖಾತೆಗೆ DBT ಮೂಲಕ ಜಮೆಯಾಗುವುದರಿಂದ, ನಿಮ್ಮ ಆಧಾರ್ ಖಾತೆಗೆ ಯಾವುದೇ ಬ್ಯಾಂಕ್ ಖಾತೆ ಜೋಡಣೆಯಾಗದಿದಲ್ಲಿ ಹಣ ಬರುವುದಿಲ್ಲ,
ಅಥವಾ ನಿಮ್ಮ ಬ್ಯಾಂಕ್ ಖಾತೆ inactive ಅಥವಾ ಸ್ಥಗಿತಗೊಂಡಿದ್ದಲ್ಲಿ ಹಣ ಬರುವುದಿಲ್ಲ.
ನಿಮ್ಮ ಹೆಸರು ಆಧಾರ್, ಬ್ಯಾಂಕ್, ಹಾಗೂ ನೀಡಿರುವ ಅರ್ಜಿಯಲ್ಲಿ ಒಂದೇ ಆಗಿರಬೇಕು
ಇನ್ನು ನಿಮಗೆ ಹಣ ಬರುತ್ತಿದ್ದು, ನಂತರ ಸ್ಥಗಿತಗೊಂಡಿದ್ದಲ್ಲಿ ನೀವು ಅಥವಾ ನಿಮ್ಮ ಕುಟುಂಬದಲ್ಲಿ ಸರ್ಕಾರಿ ಉದ್ಯೋಗ ಅಥವಾ ತೆರಿಗೆ ಪಾವತಿ ಮಾಡುತ್ತಿದ್ದಲ್ಲಿ ಹಣ ಬರುವುದಿಲ್ಲ
ಇನ್ನು ಈಗಾಗಲೇ 21 ಕಂತುಗಳ ರೂಪದಲ್ಲಿ ಗೃಹಲಕ್ಷ್ಮಿ ಹಣ ಜಮೆ ಮಾಡಲಾಗಿದ್ದು, ಕೊನೆಯ ಜೂನ್ ಕಂತನು ಆಗಸ್ಟ್ 8ರಂದು ಜಮೆ ಮಾಡಲಾಗಿದ್ದು, ಹಾಗೂ ಇದರ ಹಿಂದಿನ ಕಂತು ಜೂನ್ 14ರಂದು ಜಮೆ ಮಾಡಲಾಗಿದೆ, ನಿಮಗೆ ಈ ಅಥವಾ ಇದರ ಹಿಂದಿನ ಕಂತಿನ ಹಣ ಜಮೆಯಾಗದಿದ್ದಲ್ಲಿ ನಿಮ್ಮ ಹಣ ಸ್ಥಗಿತಗೊಂಡಿರಬಹುದು, ತಕ್ಷಣ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ.
ಗೃಹಲಕ್ಷ್ಮಿ ಯೋಜನೆಯ ಹಣ ಪಡೆಯಲು ಇರುವ ಪರಿಹಾರಗಳು
ನಿಮ್ಮ ಖಾತೆಗೆ ಯಾವುದೇ ಹಣ ಜಮೆಯಾಗುತ್ತಿಲ್ಲವೆಂದಾದರೆ ನೀವು ಮೊದಲು ಮೇಲೆ ಹೇಳಿದ ಎಲ್ಲಾ ನಿಯಮಗಳು ಪಾಲನೆಯಾಗಿದೆಯೇ ಖಚಿತ ಪಡಿಸಿಕೊಳ್ಳಿ.
ಇದು DBT ಪಾವತಿಯಾದುದರಿಂದ ನಿಮ್ಮ ಎಲ್ಲಾ ಬ್ಯಾಂಕ್ / ಪೋಸ್ಟ್ ಖಾತೆ ಪರಿಶೀಲಿಸಿ.
ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆಯಾಗಿದೆಯೇ ಖಚಿತಪಡಿಸಿಕೊಳ್ಳಿ.
ನಿಮಗೆ ಹಣ ಬಂದಿರುವ ವಿವರಕ್ಕಾಗಿ DBT Karnataka ಆ್ಯಪ್ ಮೂಲಕ ಲಾಗಿನ್ ಆಗಿ ಚೆಕ್ ಮಾಡಿಕೊಳ್ಳಿ.
ಇನ್ನು ನಿಮ್ಮ ಹಣ ಬಂದಿಲ್ಲವೆಂದಿದ್ದರೆ ನಿಮ್ಮ ಹತ್ತಿರದ ಅಂಗನವಾಡಿ ಕಾರ್ಯಕರ್ತೆಯನ್ನು ಭೇಟಿಯಾಗಿ ನಿಮ್ಮ ಆಧಾರ್ ಸಂಖ್ಯೆ ನೀಡಿ ಖಚಿತಪಡಿಸಿಕೊಳ್ಳಿ, ಅಥವಾ ನಿಮ್ಮ ಹತ್ತಿರದ ತಾಲೂಕು ಮಹಿಳಾ ಇಲಾಖೆಗೆ ಭೇಟಿ ನೀಡಿ ನಿಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ
ಒಟ್ಟಾರೆ ಗೃಹಲಕ್ಷ್ಮೀ ಹಣವು ರಾಜ್ಯದ ಮಹಿಳೆಯರಿಗೆ ಸರ್ಕಾರವು ಪ್ರತಿ ತಿಂಗಳ ಒಳಗಾಗಿ ಹಣ ಜಮೆ ಮಾಡುತ್ತಿಲ್ಲ, ಆದರಿಂದ ಗಾಬರಿ ಬೇಡ ಸರ್ಕಾರ ಹಂತ ಹಂತವಾಗಿ ಆಯಾ ವಲಯಕ್ಕೆ ಪ್ರತ್ಯೇಕ ಹಣ ಜಮೆ ಮಾಡುವುದರಿಂದ ಹಣ ಜಮೆ ಪ್ರಕ್ರಿಯೆ ಮಾಡುತ್ತಿದ್ದು, ಒಂದುವೇಳೆ ನಿಮಗೆ ಆಗಸ್ಟ್ ಆರಂಭದಲ್ಲಿ ಹಣ ಬಂದಿದ್ದರೆ ಸದ್ಯದಲ್ಲೇ ನಿಮಗೆ ಮುಂದಿನ ಕಂತಿನ ಹಣ ಕೂಡ ಜಮೆ ಆಗಲಿದೆ.