ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ದರ್ಶನ್ ಅರೆಸ್ಟ್ ಆಗಿದ್ದರು. ಆ ಬಳಿಕ ಅವರಿಗೆ ಜಾಮೀನು ಸಿಕ್ಕಿತು. ಸುಪ್ರೀಂಕೋರ್ಟ್ ದರ್ಶನ್ ಅವರ ಜಾಮೀನನ್ನು ರದ್ದು ಮಾಡಿತು. ಹೀಗಾಗಿ, ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಅವರನ್ನು ಇಡಲಾಗಿದೆ.
ಪ್ರಕರಣದ ಚಾರ್ಜ್ ಫ್ರೇಮ್ ಹಿನ್ನೆಲೆ ಎಲ್ಲಾ ಆರೋಪಿಗಳ ಹಾಜರು ಪಡೆದ ನ್ಯಾಯಾಧೀಶರು ದರ್ಶನ್, ಪವಿತ್ರಾಗೌಡ ಸೇರಿ ಏಳು ಮಂದಿ ಹಾಜರಾದವರ ಹಾಜರಿ ಪಡೆದಿದ್ದಾರೆ. ಟ್ರಯಲ್ ನಿಗದಿ ಸಂಬಂಧ ವಿಚಾರಣೆ ಮಾಡಿದ್ದಾರೆ.
ವಿಡಿಯೋ ಕಾನ್ಫರೆನ್ಸ್ ಮೂಲಕ ದರ್ಶನ್ ಪವಿತ್ರಾಗೌಡ ಕೋರ್ಟ್ ಮುಂದೆ ಹಾಜರಾಗಿದ್ದು ಈ ವೇಳೆ ಕೋರ್ಟ್ ನಿಂದ ಆದೇಶ ಮಾಡಿ ಪಾಯಿಸನ್ ಕೋಡಿ ಎಂದ ದರ್ಶನ್ ಕೇಳಿದ್ದು, ಬಟ್ಟೆಗಳು ಸ್ಮೆಲ್ ಇವೆ. ಇದರ ಬದಲು ಸ್ವಲ್ಪ ಪಾಯಿಸನ್ ಕೊಡಿ ಎಂದಿದ್ದಾರೆ.
ನಟ ದರ್ಶನ್ ಅವರಿಗೆ ಈ ಬಾರಿ ಜೈಲಿನಲ್ಲಿ ಯಾವುದೇ ಸವಲತ್ತು ಸಿಗುತ್ತಿಲ್ಲ. ಇದರಿಂದ ಅವರು ಹೈರಾಣವಾಗಿ ಹೊಗಿದ್ದಾರೆ. ಈ ಕಾರಣದಿಂದಲೇ ದರ್ಶನ್ ಅವರು ಜಡ್ಜ್ ಎದುರು ಬೇಡಿಕೆ ಇಟ್ಟಿದ್ದಾರೆ ಹಾಗೆಲ್ಲಾ ಆಗಲ್ಲ. ಜೈಲು ಅಧಿಕಾರಿಗಳಿಗೆ ಡೈರೆಕ್ಷನ್ ಕೊಡ್ತೀವಿ ಎಂದು ಜಡ್ಜ್ ಹೇಳಿದ್ದಾರೆ.


































