ಚಿತ್ರದುರ್ಗ: ಮಾದಿಗರ ಧೀರ್ಘಕಾಲದ ಹೋರಾಟದ ಫಲ, ಸಿದ್ದರಾಮಯ್ಯ ಸರ್ಕಾರ ಒಳಮೀಸಲಾತಿ ನೀಡಿರುವುದು ನಮ್ಮೆಲ್ಲರಿಗೂತೃಪ್ತಿಇದೆ.ಆದರೆ, ಕೆಲಗೊಂದಲದ ಮಾತುಗಳು ಸಮಾಜದಲ್ಲಿ ಹರಿದಾಡುತ್ತಿದ್ದು, ಅದಕ್ಕೆಅಂತ್ಯ ಹಾಡುವ ಕೆಲಸ ಮಾಡಬೇಕೆಂದು ಮಾಜಿ ಸಚಿವ ಹೆಚ್.ಆಂಜನೇಯ ಆಗ್ರಹಿಸಿದರು.
ನಗರದದುರ್ಗದ ಸಿರಿ ಸಭಾಂಗಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸುಪ್ರೀಂಕೋರ್ಟ್ತೀರ್ಪುತಕ್ಷಣವೇರಾಜ್ಯದಲ್ಲಿ ಒಳಮೀಸಲಾತಿ ಜಾರಿಗೆಸಿದ್ದರಾಮಯ್ಯ ಸರ್ಕಾರಎಲ್ಲರೀತಿಯಕ್ರಮಕೈಗೊಂಡರು.ಎ.ಬಿ.ಸಿ. ಗುಂಪುಗಳನ್ನಾಗಿಸಿ ಮೀಸಲಾತಿ ಹಂಚಿಕೆ ಮಾಡಿದ್ದಾರೆ.ನಮಗೆ ಶೇ.7 ಸಿಗಬೇಕಿತ್ತು.ಆದರೆ, ಹಸಿವನಲ್ಲಿದ್ದ ನಮಗೆ ಅನ್ನ ಸಿಕ್ಕಷ್ಟೇ ಸಂತಸವಾಗಿದೆ.ಈ ಕಾರಣಕ್ಕೆ ವಿಜಯೋತ್ಸವ ಆಚರಿಸಿದ್ದೇವೆ, ಕೃತಜ್ಞತೆ ಸಲ್ಲಿಸಿದ್ದೇವೆ ಎಂದರು.
ಮುಖ್ಯವಾಗಿ ನೌಕರರ ಭಡ್ತಿ ನೀತಿಯಲ್ಲಿಒಳಮೀಸಲಾತಿ ಅನ್ವಯಿಸುವುದಿಲ್ಲವೆಂಬ ಗೊಂದಲದ ಮಾತುಗಳು ಹರಿದಾಡುತ್ತಿವೆ. ಇದನ್ನುಸರ್ಕಾರ ಸರಿಪಡಿಸಬೇಕು.ಇಲ್ಲದಿದ್ದರೇ ಒಳಮೀಸಲಾತಿ ಅರ್ಥವೇಕಳೆದುಕೊಳ್ಳುತ್ತದೆ ಎಂದು ಹೇಳಿದರು.
ಎಕೆ, ಎಡಿ, ಎಎ ಗುಂಪನ್ನು ಎ ಮತ್ತು ಬಿ ಗುಂಪಿಗೆ ಹಂಚಿಕೆ ಮಾಡಿರುವುದು ಕೂಡ ಬಹಳಷ್ಟು ಗೊಂದಲ ಆಗಿದೆ.ಜೊತೆಗೆ ವಿದ್ಯಾವಂತರುಕೂಡ ಈ ವಿಷಯದಲ್ಲಿಗೊಂದಲದಲ್ಲಿ ಮುಳುಗಿದ್ದಾರೆ. ಮಾದಿಗ ಮತ್ತುಛಲವಾದಿ ಎರಡು ಗುಂಪಿನಲ್ಲಿಜಾತಿ ಗುರುತಿಸಿಕೊಳ್ಳದ ಎಕೆ, ಎಡಿ, ಎಎ ಲಾಭ ಪಡೆಯಲಿದ್ದಾರೆ.ಎನ್ನಲಾಗುತ್ತಿದೆ. ಈ ರೀತಿಆಗದರೀತಿ ಜಾತಿಗುರುತಿಸಿಕೊಳ್ಳದ 4,74,954 ಮಂದಿ
ವಿವರನ್ನು ಸಾರ್ವನಿಕವಾಗಿ ಪ್ರಕಟಿಸಬೇಕು.ಜೊತೆಗೆಅವರು ಮೂಲ ಜಾತಿ ಗುರುತಿಸಿಕೊಂಡು ಎ ಅಥವಾ ಬಿ ಗುಂಪಿನಲ್ಲಿ ಮೀಸಲಾತಿ ಸೌಲಭ್ಯ ಪಡೆಯಬೇಕು.ಈ ಸಂಬಂಧ ಸುತ್ತೋಲೆ ಹೊರಡಿಸಬೇಕೆಂದು ಆಗ್ರಹಿಸಿದರು.
ಪರಿಶಿಷ್ಟ ಜಾತಿಯಲ್ಲಿನಆದಿಕರ್ನಾಟಕ, ಆದಿದ್ರಾವಿಡ ವರ್ಗಗಳಿಗೆ ಜಾತಿ ಪ್ರಮಾಣ ಪತ್ರನೀಡುವ ಸಂದರ್ಭಅವರ ವಂಶವೃಕ್ಷಜಾಲಾಟ ನಡೆಸಬೇಕು.ಇಲ್ಲದಿದ್ದರೆಮೀಸಲಾತಿಗೆಕನ್ನ ಹಾಕುವ ಗ್ಯಾಂಗ್‌ತನ್ನಕೃತ್ಯವನ್ನುಮುAದುವರಿಸಬಹುದುಎಂದು ಆತಂಕ ವ್ಯಕ್ತಪಡಿಸಿದರು.
ಈ ಸಂಬಂಧ ಡಿಸಿ, ತಹಸೀಲ್ದಾರ್ ಅವರಿಗೆಜಾತಿಪ್ರಮಾಣ ಪತ್ರ ವಿತರಣೆ ವೇಳೆ ವಂಶವೃಕ್ಷದಜೊತೆಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕೆಂದು ಸೂಚಿಸಬೇಕು.ಜೊತೆಗೆರಾಜ್ಯದಲ್ಲಿ ಖಾಲಿ ಇರುವ
ಹುದ್ದೆಗಳೆಷ್ಟು, ನೇಮಕಾತಿ ಪ್ರಕ್ರಿಯೆಯಲ್ಲಿರುವುದುಎಷ್ಟೆಂದುಕೂಲಂಕಷವಾಗಿ ಸಾರ್ವನಿಕವಾಗಿ ಪ್ರಕಟಿಸಬೇಕುಎಂದು ಆಗ್ರಹಿಸಿದರು. ನಮಗೆಲ್ಲ ಸಮಾಧಾನವಾಗಿದ್ದರೇ, ಅಲೆಮಾರಿ ಸಮುದಾಯಗಳಿಗೆ
ಅನ್ಯಾಯವಾಗಿದೆ.ಇದುಅತ್ಯಂತ ನೋವಿನ ವಿಷಯ.ಆದ್ದರಿಂದ ಅಲೆಮಾರಿಗಳ ವಿಷಯದಲ್ಲಿ ಲಂಬಾಣಿ, ಭೋವಿ, ಛಲವಾದಿ, ಮಾದಿಗ ಸಮುದಾಯತಾಯಿಹೃದಯದಲ್ಲಿಚಿಂತನೆ ನಡೆಸಬೇಕು.ಅವರಿಗೆ ಮಮಕಾರದಜೊತೆಗೆ ನ್ಯಾಯಕೊಡಿಸುವ ಕೆಲಸ ಮಾಡಬೇಕು.ಅವರಿಗೆಶೇ.1 ಮೀಸಲಾತಿಕಲ್ಪಿಸಲು ಸರ್ಕಾರಬದ್ಧತೆ ಪ್ರದರ್ಶಿಸಬೇಕೆಂದು ಒತ್ತಾಯಿಸಿದರು.
ಅಲೆಮಾರಿಗಳು ಮುಖ್ಯವಾಹಿನಿಗೆ ಬರಲು ವಿಶೇಷ ಪ್ಯಾಕೇಜ್, ನಿಗಮ ಸ್ಥಾಪನೆ,ವಿವಿಧ ಸೌಲಭ್ಯಗಳನ್ನು ಕಲ್ಪಿಸಲುತಕ್ಷಣವೇ ಸರ್ಕಾರ ಮುಂದಾಗಬೇಕು.ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ತಂದಿದ್ದು, ಸ್ಪಂದನೆದೊರೆತಿದೆಎAದರು.
ಪತ್ರಿಕಾಗೋಷ್ಠಿಯಲ್ಲಿ ಲಿಡ್ಕರ್ ಮಾಜಿಅಧ್ಯಕ್ಷ ಓ.ಶಂಕರ್, ವಕೀಲ ರವೀಂದ್ರ, ಕಾಂಗ್ರೆಸ್‌ಎಸ್‌ಟಿಘಟಕದತಾಲೂಕುಅಧ್ಯಕ್ಷ ಅನಿಲ್‌ಕೋಟಿ, ಎಲ್‌ಐಸಿ ಈರಣ್ಣಯ್ಯ, ದಾದಾಪೀರ್‌ಇತರರಿದ್ದರು.