ಬೆಂಗಳೂರು: ಎಬಿವಿಪಿ ರಥಯಾತ್ರೆಯಲ್ಲಿ ಭಾಗಿಯಾಗಿಲ್ಲ. ನಾನು ಪಕ್ಕಾ ಕಾಂಗ್ರೆಸಿಗ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ಸ್ಪಷ್ಟನೆ ನೀಡಿದ್ದಾರೆ.
ಗುರುವಾರ ಬೆಂಗಳೂರಿನ ನಿವಾಸದಲ್ಲಿ ಮಾತನಾಡಿದ ಅವರು, ದಾರಿಯಲ್ಲಿ ಬರುವಾಗ ರಾಣಿ ಅಬ್ಬಕ್ಕ ಮೆರವಣಿಗೆ ಬರ್ತಾ ಇತ್ತು. ಸ್ಥಳೀಯ ಶಾಸಕ ಷಡಕ್ಷರಿ ನಾನು ಒಟ್ಟಿಗೆ ಇದ್ದವು. ರಾಣಿ ಅಬ್ಬಕ್ಕ ಮೆರವಣಿಗೆ ಹೋಗುವಾಗ ಹೂ ಹಾಕಿ ಬಂದಿದ್ದೇವೆ ಅಷ್ಟೇ. ನಾನು ಎಬಿವಿಪಿ ಕಾರ್ಯಕ್ರಮದಲ್ಲಿ ಭಾಗಿಯಾಗಿಲ್ಲ ಎಂದರು.
ನನಗೇನು ತೊಂದರೆ ಇಲ್ಲ. ನನ್ನ ಸೈದ್ದಾಂತಿಕ ಬದ್ಧತೆಯನ್ನು ಯಾರು ಪ್ರಶ್ನೆ ಮಾಡೋ ಹಾಗಿಲ್ಲ. ಐ ಯಾಮ್ ಎ ಟ್ರೂ ಕಾಂಗ್ರೆಸ್ ಮ್ಯಾನ್ ಎಂದು ತಿರುಗೇಟು ನೀಡಿದರು.
ಐ ಡೈ ಆಸ್ ಎ ಕಾಂಗ್ರೆಸ್ ಮೆನ್. ನಮಗೂ ರಾಜಕೀಯ ವಿರೋಧಿಗಳು ಇರುತ್ತಾರೆ, ಅವರು ಮಾಡುತ್ತಿರಬಹುದು. ಪಕ್ಷದ ಒಳಗೂ ಇರಬಹುದು ಹೊರಗೂ ಇರಬಹುದು. ಇಂತಹ ಚೀಪ್ ಗಿಮಿಕ್ ಎಲ್ಲಾ ಜನಕ್ಕೆ ಗೊತ್ತಾಗುತ್ತೆ. ಪರಮೇಶ್ವರ್ ಏನು ಅಂತ ಇಡೀ ರಾಜ್ಯದಲ್ಲಿ ಜನರಿಗೆ ಗೊತ್ತಿದೆ ಎಂದು ತಿರುಗೇಟು ನೀಡಿದರು.
ಕಳೆದ 35 ವರ್ಷಗಳಿಂದ ನನ್ನ ರಾಜಕೀಯ ಏನು ಅನ್ನೋದು ಗೊತ್ತಿದೆ. ನಾನು ಅದನ್ನ ಪದೇ ಪದೇ ಸಾಬೀತು ಮಾಡಬೇಕಾಗಿಲ್ಲ ಎಂದು ಇದೇ ಸಂದರ್ಭದಲ್ಲಿ ಟೀಕಾಕಾರರಿಗೆ ಉತ್ತರ ನೀಡಿದರು.