ಹೆಚ್ಚುತ್ತಿರುವ ಸೈಬರ್ ವಂಚನೆ ಪ್ರಕರಣಗಳಿಗೆ ಕಡಿವಾಣ ಹಾಕಲು ಹೈಕೋರ್ಟ್ ಸೂಚನೆ ಮೇರೆಗೆ ದೇಶದ ಮೊದಲ ಸೈಬರ್ ಕಮಾಂಡ್ ಸೆಂಟರ್ ಕರ್ನಾಟಕದಲ್ಲಿ ಸ್ಥಾಪನೆಯಾಗಿದೆ.
ಸೆಪ್ಟೆಂಬರ್ 8 ರಂದು ದೇಶದಲ್ಲೇ ಮೊದಲ ಸೈಬರ್ ಕಮಾಂಡ್ ಸೆಂಟರ್ ಅನ್ನು ಬೆಂಗಳೂರಲ್ಲಿ ತೆರೆಯಲಾಗಿದೆ. ಪ್ರಣಬ್ ಮೊಹಂತಿಯವರನ್ನ ಡಿಐಜಿಯಾಗಿ ಕಮಾಂಡ್ ಸೆಂಟರ್ಗೆ ನೇಮಕ ಮಾಡಲಾಗಿದೆ. ಸೈಬರ್ ಭದ್ರತೆ, ಸೈಬರ್ ಅಪರಾಧ, ಹಿಂಬಾಲಿಸುವುದು, ಮಹಿಳೆಯರು ಮತ್ತು ಮಕ್ಕಳ ಮೇಲಿನ ಆನ್ಲೈನ್ ಅಪರಾಧಗಳು, ಡಿಜಿಟಲ್ ಬಂಧನ ಸೇರಿದಂತೆ ಸೈಬರ್ ವಂಚನೆಗಳು, ಡೀಪ್ಫೇಕ್ಗಳು, ಗುರುತಿನ ಕಳ್ಳತನ, ಹ್ಯಾಕಿಂಗ್, ಡೇಟಾ ಉಲ್ಲಂಘನೆ, ಔಟ್ರೀಚ್, ತಪ್ಪು ಮಾಹಿತಿ ಇತ್ಯಾದಿಗಳನ್ನು ಪರಿಶೀಲಿಸುವ ನಿಟ್ಟಿನಲ್ಲಿ ಸಮಗ್ರ ಸೈಬರ್ ಕಮಾಂಡ್ ಅನ್ನು ಸ್ಥಾಪಿಸಲಾಗಿದೆ. ಸೈಬರ್ ಫ್ರಾಡ್ ಪತ್ತೆಗೆ ಸಿದ್ದವಾಗಿರುವ ಕಮಾಂಡ್ ಸೆಂಟರ್ನಲ್ಲಿ ನಾಲ್ಕು ವಿಂಗ್ಗಳು ಕಾರ್ಯನಿರ್ವಹಣೆ ಮಾಡಲಿವೆ. 1. ಸೈಬರ್ ಕ್ರೈಂ ವಿಂಗ್: ಸೈಬರ್ ಅಪರಾಧಗಳನ್ನ ಪತ್ತೆ ಮಾಡಿ, ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತದೆ. 2. ಸೈಬರ್ ಸೆಕ್ಯೂರಿಟಿ ವಿಂಗ್: ಬ್ಯಾಂಕ್ ಖಾತೆ, ಸಾಮಾಜಿಕ ಜಾಲತಾಣ, ಸಾಫ್ಟ್ವೇರ್ ಹ್ಯಾಕ್ ಮಾಡುವವರನ್ನ ಪತ್ತೆ ಮಾಡುತ್ತದೆ. 3. ಐಡಿಟಿಯು ವಿಂಗ್: ಸೈಬರ್ ಅಪರಾಧಿಗಳ ಸ್ಥಳ ಪತ್ತೆ ಮಾಡುವುದು, ಸಾಮಾಜಿಕ ಜಾಲತಾಣಗಳ ಸಂಸ್ಥೆಗಳಿ0ದ ಮಾಹಿತಿ ಪಡೆಯುವುದು. ಐಪಿ ಅಡ್ರೆಸ್ ಪತ್ತೆ ಮಾಡುತ್ತೆ 4. ತರಬೇತಿ, ಸಾಮರ್ಥ್ಯ ವೃದ್ಧಿ ಮತ್ತು ಜನಜಾಗೃತಿ ದಳ: ಸೈಬರ್ ಕಮಾಂಡ್ ಸೆಂಟರ್ ಅಧಿಕಾರಿಗಳಿಗೆ ತರಬೇತಿ ನೀಡುವುದು. ಟೆಕ್ನಿಕಲ್ ಜ್ಞಾನ ವೃದ್ಧಿ ಮಾಡುವುದು. ಹೊಸ ತಂತ್ರಜ್ಞಾನಗಳ ತಿಳುವಳಿಕೆ ನೀಡುವುದು. ಮತ್ತು ಸಾರ್ವಜನಿಕರು ಮತ್ತು ವಿಧ್ಯಾರ್ಥಿಗಳಿಗೆ ಸೈಬರ್ ಅಪರಾಧ ಅರಿವು ಮೂಡಿಸುವ ಕೆಲಸ ಮಾಡುತ್ತದೆ. ಈಗಾಗಲೇ ಸೈಬರ್ ಪ್ರಕರಣ ದಿನೇ ದಿನೇ ಹೆಚ್ಚಾಗುತ್ತಿದ್ದು, ಈ ಹಿನ್ನಲೆಯಲ್ಲಿ ರಾಜ್ಯದಲ್ಲಿ ಇತ್ಯರ್ಥವಾಗದೇ ಉಳಿದ 16 ಸಾವಿರ ಪ್ರಕರಣಗಳಲ್ಲಿ ಕೆಲವು ಪ್ರಕರಣವಾದರೂ ಇತ್ಯರ್ಥವಾಗಲಿದೆ.