ಬಹುಭಾಷಾ ನಟಿ ವೇದಿಕಾ ಅವರು ಸರಿ ಸುಮಾರು ಕಳೆದ 20 ವರ್ಷಗಳಿಂದ ಚಿತ್ರರಂಗದಲ್ಲಿದ್ದಾರೆ. ಈಗಲೂ ಕೂಡ ಅವರು ಬೇಡಿಕೆಯನ್ನು ಹೊಂದಿದ್ದಾರೆ.
ಈಚೆಗೆ ಅವರ ಬಿಕಿನಿ ಫೋಟೋಗಳು ಸಖತ್ ವೈರಲ್ ಆಗಿವೆ. ಮೂಲತಃ ಕನ್ನಡತಿಯಾದ ಬಹುಭಾಷಾ ತಾರೆ ವೇದಿಕಾ ಅವರು ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾರೆ. ಇತ್ತೀಚೆಗೆ ಒಂದಷ್ಟು ಬಿಕಿನಿ ಫೋಟೋಗಳನ್ನು ಹಂಚಿಕೊಂಡಿದ್ದರು ವೇದಿಕಾ. ಆ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇದೀಗ ಏಜಿಯನ್ ಸಮುದ್ರದಲ್ಲಿ ಕಡುನೀಲಿ ಬಣ್ಣದ ಬಿಕಿನಿ ತೊಟ್ಟು ಫೋಟೋಗಳಿಗೆ ಪೋಸ್ ಕೊಟ್ಟಿರುವ ನಟಿ ಪಡ್ಡೆಗಳ ಎದೆಗೆ ಬೆಂಕಿ ಹಚ್ಚಿದ್ದಾರೆ.
ಅಲ್ಲದೇ ಸೂರ್ಯ ನನ್ನ ಏಕೈಕ ಫಿಲ್ಟರ್ ಅಂತ ಬರೆದುಕೊಂಡಿದ್ದಾರೆ. ಸದ್ಯ ವೇದಿಕಾ ಅವರಿಗೆ 37 ವರ್ಷ ಎನ್ನಲಾಗುತ್ತಿದೆ. ಇನ್ನೂ ಮದ್ವೆಯಾಗದ ನಟಿ ತನ್ನ ದೇಹ ಸೌಂದರ್ಯನ್ನು ಕಾಪಾಡಿಕೊಳ್ಳುವಲ್ಲಿ ಹೆಚ್ಚಿನ ಕಾಳಜಿ ವಹಿಸುತ್ತಾರೆ.