ಚಿನ್ನ ಖರೀದಿದಾರರಿಗೆ ನಿಜಕ್ಕೂ ಇದು ಖುಷಿಯ ವಿಚಾರ. ದಸರಾಗೂ ಮುನ್ನ ಚಿನ್ನಾಭರಣ ಖರೀದಿಸುವವರಿಗೆ ಇಲ್ಲಿದೆ ಗುಡ್ನ್ಯೂಸ್.
ಕಳೆದ ವಾರ ಭಾರೀ ಏರಿಕೆ ಕಂಡಿದ್ದ ಚಿನ್ನದ ದರವು ಈ ವಾರ ನಿರಂತರವಾಗಿ ಕಡಿಮೆಯಾಗುತ್ತಿದೆ. ನಿನ್ನೆಯೂ ಚಿನ್ನದ ದರದಲ್ಲಿ ಇಳಿಕೆ ಕಂಡಿತ್ತು. ಇಂದು ಕೂಡ ದರ ಮತ್ತೆ ಕಡಿಮೆಯಾಗಿದೆ. ಹಾಗಾಗಿ ಚಿನ್ನ ಖರೀದಿಗೆ ಇದೇ ಒಳ್ಳೆಯ ಸಮಯ ಎಂದು ಹೇಳಲಾಗುತ್ತಿದೆ. ಹಬ್ಬಕ್ಕೂ ಮುನ್ನ ಚಿನ್ನದ ದರ ಕಡಿಮೆಯಾಗಿರುವುದರಿಂದ ಖರೀದಿದಾರರಲ್ಲಿ ಸಂತಸ ಮನೆಮಾಡಿದೆ.
ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್ ಬಂಗಾರದ ಬೆಲೆ (ಹತ್ತು ಗ್ರಾಂ) ರೂ. 1,01,900 ಆಗಿದೆ.ಇಂದು ಮಾರುಕಟ್ಟೆಯಲ್ಲಿ ಪ್ರತಿ ಗ್ರಾಂ 18 ಕ್ಯಾರಟ್ ಆಭರಣ ಚಿನ್ನದ ಬೆಲೆ – ರೂ. 8,338 ಆಗಿದ್ದು, 22 ಕ್ಯಾರಟ್ ಆಭರಣ ಚಿನ್ನದ ಬೆಲೆ – ರೂ. 10,190 ಆಗಿದೆ. 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) – ರೂ. 11,117 ಆಗಿದೆ. ಅದೇ ಎಂಟು ಗ್ರಾಂ (8GM) 18 ಕ್ಯಾರಟ್ ಆಭರಣ ಚಿನ್ನದ ಬೆಲೆ – ರೂ. 66,704 ಆಗಿದ್ದು, 22 ಕ್ಯಾರಟ್ ಆಭರಣ ಚಿನ್ನದ ಬೆಲೆ – ರೂ. 81,520 ಆಗಿದೆ. 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) – ರೂ. 88,936 ಆಗಿದೆ.
ಇನ್ನು ಹತ್ತು ಗ್ರಾಂ (10GM)18 ಕ್ಯಾರಟ್ ಆಭರಣ ಚಿನ್ನದ ಬೆಲೆ – ರೂ. 83,380 ಆಗಿದ್ದು, 22 ಕ್ಯಾರಟ್ ಆಭರಣ ಚಿನ್ನದ ಬೆಲೆ – ರೂ. 1,01,900 ಆಗಿದೆ. 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) – ರೂ. 1,11,170. ನೂರು ಗ್ರಾಂ (100GM)18 ಕ್ಯಾರಟ್ ಆಭರಣ ಚಿನ್ನದ ಬೆಲೆ – ರೂ. 8,33,800 ಆಗಿದೆ. ಇಂದು ಮಾರುಕಟ್ಟೆಯಲ್ಲಿ ಪ್ರತಿ ಕೆಜಿ ಬೆಳ್ಳಿ ದರ ರೂ. 1,31,000 ಆಗಿದೆ. ಬೆಂಗಳೂರು ನಗರದಲ್ಲಿ ಬೆಲೆಯಲ್ಲಿ ಇಳಿಕೆಯಾಗಿದೆ. ಇಂದು ಪ್ರತಿ 10gm, 100gm, 1000gm (1ಕೆಜಿ) ಬೆಳ್ಳಿ ಬೆಲೆಗಳು ಕ್ರಮವಾಗಿ ರೂ. 1,348 ರೂ. 13,480 ಹಾಗೂ ರೂ. 1,34,800 ಗಳಾಗಿವೆ.