ಬೆಂಗಳೂರು: ಸಸಿಲಿಕಾನ್ ಸಿಟಿ ಜನರಿಗೆ ಮತ್ತೊಂದು ವೈರಲ್ ಫಿವರ್ ಟೆನ್ಶನ್ ಶುರುವಾಗಿದೆ. ಹೊಟ್ಟೆ ನೋವು, ಜ್ವರ, ಕರುಳು ಬೇನೆ, ಟೈಫಾಯಿಡ್, ವೈರಲ್ ಹೆಪಟೈಟಿಸ್ ನೋವಿನಂತಹ ಲಕ್ಷಣಗಳು ಕಂಡು ಬರ್ತಿವೆ. ಕರುಳು ಬೇನೆ, ಫುಡ್ ಪಾಯ್ಸನ್, ಟೈಫಾಯಿಡ್ ಜ್ವರ ಹಾಗೂ ವೈರಲ್ ಹೆಪಟೈಟಿಸ್ ಪ್ರಕರಣಗಳು ಹೆಚ್ಚಾಗ್ತಿದೆ. ಕೇವಲ 10 ದಿನದಲ್ಲಿ 5,500ಕ್ಕೂ ಹೆಚ್ಚು ಕೇಸ್ ದಾಖಲಾಗಿವೆ.
ಮತ್ತೊಂದ್ಕಡೆ 231 ಸಾರಿ, 274 ಇನ್ಫ್ಲುಯೆನ್ಸ ಕೇಸ್ಗಳು ಪತ್ತೆಯಾಗಿವೆ. ಆದ್ದರಿಂದ ಆರೋಗ್ಯ ಇಲಾಖೆ ಹೈ ಅಲರ್ಟ್ ಆಗಿದೆ. ಜ್ವರ, ಕರುಳು ಬೇನೆ, ಟೈಫಾಯಿಡ್, ವೈರಲ್ ಹೆಪಟೈಟಿಸ್‌ನಂತಹ ಲಕ್ಷಣ ಕಂಡು ಬಂದ್ರೆ ಎಚ್ಚರಿಕೆ ವಹಿಸಬೇಕಿದೆ. ಅಲ್ದೇ ಸೂಕ್ತ ಚಿಕಿತ್ಸೆ ಪಡೆಯುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಡಯೆರಿಯಾ ಸಮಸ್ಯೆ ಎದುರಾಗಬೇಕು ಎಂದರೆ ಅದು ಕರುಳಿನಲ್ಲಿ ಉಂಟಾಗಿರುವ ಸೋಂಕು ಕಾರಣವಾಗುತ್ತದೆ.
ವೈರಸ್ ನಿಂದ ಅಥವಾ ಕುಡಿಯುವ ನೀರು, ಸೇವಿಸುವ ಆಹಾರದಿಂದ ಈ ಸಮಸ್ಯೆ ಎದುರಾಗಬಹುದು ಎಂದು ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆ ನಿರ್ದೇಶಕ ಡಾ.ಸಂಜಯ್ ಎಚ್ಚರಿಕೆ ನೀಡಿದ್ದಾರೆ.