ಚಿಕ್ಕಮಗಳೂರು: ಪತ್ನಿಯ ಜೊತೆಗೆ ಸೆಲ್ಫಿ ತೆಗೆದುಕೊಳ್ಳುವಾಗ ಪ್ರಪಾತಕ್ಕೆ ಬಿದ್ದು ಶಿಕ್ಷಕ ಸಾವನ್ನಪ್ಪಿದ ಘಟನೆ ಕೆಮ್ಮಣ್ಣು ಗುಂಡಿಯಲ್ಲಿ ನಡೆದಿದೆ.
ಸಂತೋಷ್(40) ಮೃತಪಟ್ಟ ಶಿಕ್ಷಕ ಎಂದು ಹೇಳಲಾಗಿದೆ. ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಕೆಮ್ಮಣ್ಣುಗುಂಡಿಯಲ್ಲಿ ಘಟನೆ ನಡೆದಿದೆ. ತರೀಕೆರೆಯ ಲಕ್ಷ್ಮಿಸಾಗರ ಶಾಲೆಯ ಶಿಕ್ಷಕರನಾಗಿದ್ದ ಸಂತೋಷ್ ಪ್ರವಾಸಕ್ಕೆ ಬಂದಿದ್ದಾಗ ಪತ್ನಿಯೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಪ್ರಪಾತಕ್ಕೆ ಬಿದ್ದು ಮೃತಪಟ್ಟಿದ್ದಾರೆ. ಲಿಂಗದಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಪ್ರಪಾತದಿಂದ ಶವವನ್ನು ಮೇಲೆ ತಂದಿದ್ದಾರೆ.