72 ವರ್ಷದ ಉಕ್ರೇನಿಯನ್ ವರನೊಬ್ಬ 27 ವರ್ಷದ ಯುವತಿಯನ್ನು ಹಿಂದೂ ಪದ್ದತಿಗಳ ಪ್ರಕಾರ ಸಾಂಪ್ರದಾಯಿಕವಾಗಿ ಮದುವೆಯಾಗಿದ್ದಾರೆ.
ಸ್ಟಾನಿಸ್ಲಾವ್-ಅನ್ನೆಲಿನಾ ದಂಪತಿ ಹಿಂದೂ ವೈದಿಕ ಆಚರಣೆಗಳ ಪ್ರಕಾರ ಏಳು ಸುತ್ತುಗಳನ್ನು ಹಾಕುವ ಮೂಲಕ ಜೀವನ ಸಂಗಾತಿಗಳಾಗಲು ನಿರ್ಧರಿಸಿದರು.
4 ವರ್ಷದ ಲಿವ್ ಇನ್ ರಿಲೇಶನ್ ಶಿಪ್
ಈ ದಂಪತಿಗಳು ಮದುವೆಗೂ ಮುನ್ನ ಉಕ್ರೇನ್ನಲ್ಲಿ ನಾಲ್ಕು ವರ್ಷಗಳಿಂದ ಲಿವ್-ಇನ್ ಸಂಬಂಧ ಹೊಂದಿದ್ದರು. 72 ವರ್ಷದ ಸ್ಟಾನಿಸ್ಲಾವ್ ಮತ್ತು ಅನ್ನೆಲಿನಾ ಇಬ್ಬರೂ ಮೊದಲ ಬಾರಿಗೆ ಭಾರತಕ್ಕೆ ಭೇಟಿ ನೀಡಿದಾಗ, ಇಲ್ಲಿನ ಸಂಸ್ಕೃತಿ ಮತ್ತು ಸಂಪ್ರದಾಯಗಳಿಂದ ಪ್ರಭಾವಿತರಾಗಿ ತಮ್ಮ ವಿವಾಹವನ್ನು ಹಿಂದೂ ಧರ್ಮದ ಅನುಗುಣವಾಗಿ ನಡೆಸಲು ತೀರ್ಮಾನಿಸಿದ್ದರು.
ಹೀಗಾಗಿ ಜೋದ್ಪುರದ ಖಾಸ್ ಬಾಗ್ನಲ್ಲಿ ಸಾಂಪ್ರದಾಯಿಕ ಶೈಲಿಯಲ್ಲಿ ಮದುವೆಯಾಗಿದ್ದಾರೆ. ನಂತರ ವಧು-ವರರು ವರ್ಣರಂಜಿತ ಹೂಮಾಲೆಗಳನ್ನು ವಿನಿಮಯ ಮಾಡಿಕೊಂಡರು. ವೇದ ಮಂತ್ರಗಳ ಜತೆಗೆ ವರನು ವಧುವಿನ ಹಣೆಗೆ ಸಿಂದೂರ (ಕುಂಕುಮ) ಹಚ್ಚಿದರು. ನಂತರ ಮಂಗಳಸೂತ್ರವನ್ನು ಕಟ್ಟಿದನು. ಇದೀಗ ದಂಪತಿಗಳ ಮದುವೆ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.