ಬೆಂಗಳೂರು : ರಾಜ್ಯದಲ್ಲಿ ಖಾಲಿ ಇರುವ 600 ‘ಸ್ಟಾಫ್ ನರ್ಸ್’ ಹುದ್ದೆಗಳ ಭರ್ತಿಗೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಮಂಜೂರಾಗಿ ಖಾಲಿ ಇರುವ ಶುಶೂಷಾಧಿಕಾರಿ ಹುದ್ದೆಗಳನ್ನು ಗುತ್ತಿಗೆ (Contract) ಆಧಾರದ ಮೇಲೆ ಭರ್ತಿ ಮಾಡಲು ಸರ್ಕಾರ ಅನುಮತಿ ನೀಡಿ ಆದೇಶ ಹೊರಡಿಸಿದೆ.
ಮೇಲೆ ಓದಲಾದ ಕ್ರಮಾಂಕ(1)ರಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಒಂದು ಸಾರ್ವಜನಿಕ ಸೇವಾ ನಿರತ ಇಲಾಖೆಯಾಗಿದ್ದು, ಶುಶೂಷಾಧಿಕಾರಿ ಹುದ್ದೆಗಳನ್ನು ಒಳಗೊಂಡಂತೆ ವಿವಿಧ ವೃಂದದ ಅರೆ ವೈದ್ಯಕೀಯ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಆಡಳಿತಾತ್ಮಕ ಅನುಮತಿಯನ್ನು ಕೋರುತ್ತಾ, ನೇರ ನೇಮಕಾತಿ ಮೂಲಕ ಅನುಮತಿ ನೀಡಿ ಭರ್ತಿ ಮಾಡುವವರೆಗೆ ಅಥವಾ ಒಂದು ವರ್ಷದ ಅವಧಿಗೆ ಸದರಿ ಖಾಲಿ ಹುದ್ದೆಗಳನ್ನು ಗುತ್ತಿಗೆ /ಹೊರಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಲು ಅನುಮತಿ ನೀಡುವಂತೆ ಕೋರಿರುತ್ತಾರೆ.
ಆಯುಕ್ತಾಲಯದ ದಿನಾಂಕ: 01/09/2023ರ ಪ್ರಸ್ತಾವನೆಗೆ ಸಂಬಂಧಿಸಿದಂತೆ ಮೇಲೆ ಓದಲಾದ ಕ್ರಮಾಂಕ(2)ರಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಮಂಜೂರಾಗಿ ಖಾಲಿ ಇರುವ 1205 ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಹಾಗೂ 300 ಆರೋಗ್ಯ ನಿರೀಕ್ಷಣಾಧಿಕಾರಿಗಳ ಹುದ್ದೆಗಳನ್ನು ಕೆಲವೊಂದು ಷರತ್ತಿಗೊಳಪಟ್ಟು ನೇರ ನೇಮಕಾತಿ ಮುಖಾಂತರ ಭರ್ತಿ ಮಾಡಿಕೊಳ್ಳಲು ಸರ್ಕಾರವು ಅನುಮತಿ ನೀಡಿ ಆದೇಶಿಸಲಾಗಿದೆ.
ಅದೇ ರೀತಿಯಾಗಿ ಮೇಲೆ ಓದಲಾದ ಕ್ರಮಾಂಕ (3)ರಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಎದುರಾಗಿ 400 ಕಿರಿಯ ಪ್ರಯೋಗ ಶಾಲಾ ತಾಂತ್ರಿಕ ಅಧಿಕಾರಿ ಹಾಗೂ 400 ಫಾರ್ಮಸಿಸ್ಟ್ ಹುದ್ದೆಗಳನ್ನು ಕೆಲವೊಂದು ಷರತ್ತಿಗೊಳಪಟ್ಟು ಗುತ್ತಿಗೆ ಆಧಾರದ ಮೇಲೆ ಒಂದು ವರ್ಷದ ಅವಧಿಗೆ ಮಾತ್ರ ಭರ್ತಿ ಮಾಡಿಕೊಳ್ಳಲು ಅನುಮತಿ ನೀಡಿ ಆದೇಶಿಸಲಾಗಿದೆ.
ಮುಂದುವರೆದು, ಸಾರ್ವಜನಿಕರಿಗೆ/ಜನ ಸಮುದಾಯಕ್ಕೆ ಉತ್ತಮ ಆರೋಗ್ಯ ಸೇವೆಯನ್ನು ಸಕಾಲದಲ್ಲಿ ನೀಡಲು ಅನುಕೂಲವಾಗುವಂತೆ ಇಲಾಖೆಯಲ್ಲಿ ಮಂಜೂರಾಗಿ ಪ್ರಸ್ತುತ ಖಾಲಿ ಇರುವ ಶುಶೂಷಾಧಿಕಾರಿ ವೃಂದದಲ್ಲಿನ ತೀವ್ರ ಅಗತ್ಯವಿರುವ ಖಾಲಿ ಸ್ನಾನ/ ಹುದ್ದೆಗಳನ್ನು ಆಧ್ಯತೆ ಮೇಲೆ ಭರ್ತಿ ಮಾಡಲು ಇಲಾಖೆಯಲ್ಲಿ ಖಾಲಿ ಇರುವ ಶುಶೂಷಾಧಿಕಾರಿ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಂಡಲ್ಲಿ ತಗಲುವ ಆರ್ಥಿಕ ವೆಚ್ಚದ ವಿವರವನ್ನು ಈ ಕೆಳಕಂಡಂತೆ ಆಯುಕ್ತಾಲಯದಿಂದ ಮಾಹಿತಿ ಸ್ವೀಕರಿಸಲಾಗಿದ್ದು, ಸದರಿ ವೆಚ್ಚವನ್ನು ರಾಜ್ಯ ವಲಯದ ಲೆಕ್ಕಶೀರ್ಷಿಕೆ: 2210-01-110-1-22 ರ ಉಪಲೆಕ್ಕ ಶೀರ್ಷಿಕೆ:034 (ಗುತ್ತಿಗೆ/ಹೊರಗುತ್ತಿಗೆ) ಅಡಿ ಭರಿಸಬಹುದಾಗಿದೆ ಎಂದು ಸಹ ತಿಳಿಸಿರುತ್ತಾರೆ.