ಮೈಸೂರು : ದಸರಾ ಸಂಭ್ರಮದ ನಡುವೆಯೇ ಚಾಮುಂಡಿ ಬೆಟ್ಟದ ಶಿವಾರ್ಚಕರು ನಿಧಾನರಾಗಿದ್ದಾರೆ. ಶಿವಾರ್ಚಕ ವಿ ರಾಜು ನಿಧನ ಹಿನ್ನೆಲೆ ಚಾಮುಂಡಿ ತಾಯಿಯ ದರ್ಶನಕ್ಕೆ ನಿರ್ಬಂಧ ಹೇರಲಾಗಿದೆ.
ಇಂದು ಬೆಳಿಗ್ಗೆಯಿಂದ ಮಧ್ಯಾಹ್ನದ ವರೆಗೂ ದೇವಿಕ್ಕೆ ಸಾರ್ವಜನಿಕರಿಗೆ ಅವಕಾಶವಿಲ್ಲ. ತಡರಾತ್ರಿ ಚಾಮುಂಡಿ ಬೆಟ್ಟದ ಶಿವಾರ್ಚಕ ವಿ ರಾಜು ನಿಧನ ಹಿನ್ನಲೆ ಇಂದು ಬೆಳಿಗ್ಗೆಯಿಂದ ಮಧ್ಯಾಹ್ನದ ವರೆಗೂ ದೇವಿ ದರ್ಶನ ಬಂದ್ ಮಾಡಲಾಗಿದೆ.
ಮಧ್ಯಾಹ್ನ ಸಂಸ್ಕಾರ ಮುಗಿದ ಬಳಿಕ ದೇವಿ ದರ್ಶನಕ್ಕೆ ಅವಕಾಶ ನೀಡಲಾಗುತ್ತೆ. ನವರಾತ್ರಿ ಹಿನ್ನೆಲೆ ಚಾಮುಂಡಿ ಬೆಟ್ಟಕ್ಕೆ ಭಕ್ತ ಸಾಗರವೇ ಹರಿದು ಬರ್ತಿದೆ. ಇಂದು ದಿಢೀರ್ ದೇವಿ ದರ್ಶನಕ್ಕೆ ನಿರ್ಬಂಧ ಹಿನ್ನೆಲೆ ಸಾರ್ವಜನಿಕರಿಗೂ ತೊಂದರೆಯಾಗಲಿದೆ.