ಉತ್ತರ ಕನ್ನಡದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ವಿವಿಧ 70 ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಅಧಿಕೃತ ವೆಬ್‌ಸೈಟ್ ವಿಳಾಸ ಮೂಲಕ https://uttarakannada.nic.in ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಹುದ್ದೆಯ ವಿವರಗಳು: ಸಂಸ್ಥೆಯ ಹೆಸರು: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉತ್ತರ ಕನ್ನಡ (DHFWS)ಖಾಲಿ ಹುದ್ದೆಗಳ ಹೆಸರು: ಮೆಡಿಕಲ್ ಆಫೀಸರ್ , ಸ್ಪೆಷಲಿಸ್ಟ್ ಡಾಕ್ಟರ್ ಹುದ್ದೆಗಳ ಸಂಖ್ಯೆ: 70 ಉದ್ಯೋಗ ಸ್ಥಳ: ಉತ್ತರ ಕನ್ನಡ ವೇತನ: 60,000-1,30,000 ರೂ/ ಮಾಸಿಕ
ಖಾಲಿ ಹುದ್ದೆಗಳ ವಿವರ : ಸ್ಪೆಷಲಿಸ್ಟ್ ಡಾಕ್ಟರ್ – 39,. ಛೀಫ್ ಮೆಡಿಕಲ್ ಆಫೀಸರ್ – 29, ಜಿಸಿ ಮೆಡಿಕಲ್ ಆಫೀಸರ್ – 2 ವಿದ್ಯಾರ್ಹತೆ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಸೂಚನೆ ಮಾನದಂಡಗಳಿಗೆ ಅನುಗುಣವಾಗಿ ನೇಮಕಾತಿ ವಿಧಾನ: ಮೆರಿಟ್ ಲಿಸ್ಟ್, ಸಂದರ್ಶನ ಅರ್ಜಿ ಸಲ್ಲಿಸಲು 9 ಅಕ್ಟೊಬರ್ 2025 ಕೊನೆಯ ದಿನಾಂಕ.