ಪ್ರತಿ ದಿನ ಈರುಳ್ಳಿ ಮತ್ತು ಬೆಲ್ಲ ತಿಂದರೆ ಹಾರ್ಟ್ ಪ್ರಾಬ್ಲಮ್ ಬರಲ್ಲ ಎಂದು ಹೇಳುತ್ತಾರೆ. ಆದರೆ ಹಸಿ ಈರುಳ್ಳಿ ನಮ್ಮ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತದೆ. ಅಷ್ಟು ಪ್ರಮಾಣದಲ್ಲಿ ಇದರಲ್ಲಿ ಔಷಧೀಯ ಗುಣಗಳು ಅಡಗಿವೆ ಎಂದು ಹೇಳುತ್ತಾರೆ.
ಈರುಳ್ಳಿ ಹೆಚ್ಚುವಾಗ ಕಣ್ಣಿನಲ್ಲಿ ನೀರು ಬರುವುದು ಬಿಟ್ಟರೆ ಇದರಿಂದ ಆರೋಗ್ಯಕ್ಕೆ ಯಾವುದೇ ತೊಂದರೆ ಇಲ್ಲ. ಹಸಿ ಈರುಳ್ಳಿ ಸೇವನೆಯಿಂದ ಹಲವಾರು ಆರೋಗ್ಯ ಪ್ರಯೋಜನಗಳನ್ನು ನಾವು ನಿರೀಕ್ಷೆ ಮಾಡಬಹುದು ಎಂದು ಹೇಳಲಾಗಿದೆ. ನಿಯಮಿತವಾಗಿ ಆಗಾಗ ಹಸಿ ಈರುಳ್ಳಿ ತಿನ್ನುವುದರಿಂದ ನಮ್ಮ ದೇಹಕ್ಕೆ ಶಕ್ತಿ ಸಿಗುತ್ತದೆ ಮತ್ತು ಇನ್ನಿತರ ಪ್ರಯೋಜನಗಳು ಕೂಡ ಸಿಗುತ್ತವೆ.
ಹಸಿ ಈರುಳ್ಳಿ ತನ್ನಲ್ಲಿ ವಿಟಮಿನ್ ಸಿ ಪ್ರಮಾಣವನ್ನು ಹೇರಳವಾಗಿ ಹೊಂದಿದೆ. ಹೀಗಾಗಿ ಇದು ನಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಕೆಲಸ ಮಾಡುತ್ತದೆ. ವಿಶೇಷವಾಗಿ ಈಗಿನ ಚಳಿಗಾಲದಲ್ಲಿ ವೈರಸ್ ಹಾಗೂ ಇನ್ನಿತರ ರೋಗಾಣುಗಳಿಂದ ನಮಗೆ ಎದುರಾಗುವ ಅನೇಕ ಆರೋಗ್ಯ ಸಮಸ್ಯೆಗಳ ವಿರುದ್ಧ ರಕ್ಷಣೆ ಕೊಡುತ್ತದೆ.ಈರುಳ್ಳಿ ತನ್ನಲ್ಲಿ ಸಿಹಿ ಸೂಚ್ಯಂಕವನ್ನು ಕಡಿಮೆ ಹೊಂದಿರುವ ಕಾರಣ ದಿಂದ ಬ್ಲಡ್ ಶುಗರ್ ಲೆವೆಲ್ ಅನ್ನು ತಕ್ಷಣ ನಮ್ಮ ದೇಹದಲ್ಲಿ ಏರಿಕೆ ಮಾಡುವುದಿಲ್ಲ. ಸಕ್ಕರೆ ಕಾಯಿಲೆ ಇರುವವರಿಗೆ ಈರುಳ್ಳಿ ಸೇವನೆ ಮಾಡು ವುದು ಬಹಳ ಅನುಕೂಲಕರ. ಊಟ ಮಾಡಿದ ತಕ್ಷಣ ಇದ್ದಕ್ಕಿದ್ದಂತೆ ಬ್ಲಡ್ ಶುಗರ್ ಲೆವೆಲ್ ಏರಿಕೆ ಆಗುವ ಸಾಧ್ಯತೆ ಇದರಿಂದ ತಪ್ಪುತ್ತದೆ.
ಈರುಳ್ಳಿ ತನ್ನಲ್ಲಿ ಆಂಟಿ ಆಕ್ಸಿಡೆಂಟ್ ಅಂಶಗಳನ್ನು ಅಪಾರವಾಗಿ ಹೊಂದಿರುವ ಕಾರಣದಿಂದ ನಮ್ಮ ದೇಹದಲ್ಲಿ ಕೊಲೆಸ್ಟ್ರಾಲ್ ಪ್ರಮಾಣ ವನ್ನು ಇದು ಕಡಿಮೆ ಮಾಡಬಲ್ಲದು.
ಮುಖ್ಯವಾಗಿ ನಮ್ಮ ಹೃದಯದ ಆರೋಗ್ಯವನ್ನು ಉತ್ತೇಜಿಸುವ ಕೆಲಸವನ್ನು ಇದು ಮಾಡುತ್ತದೆ. ನಮ್ಮ ಬ್ಲಡ್ ಶುಗರ್ ಲೆವೆಲ್, ರಕ್ತದ ಒತ್ತಡ ಮತ್ತು ದೇಹದಲ್ಲಿ ರಕ್ತ ಸಂಚಾರವನ್ನು ಉತ್ತೇಜಿಸಿ ಹೃದಯಾಘಾತ ಅಥವಾ ಹೃದಯದ ಸಮಸ್ಯೆಗಳನ್ನು ದೂರ ಮಾಡುತ್ತದೆ.ಹಸಿ ಈರುಳ್ಳಿ ತನ್ನಲ್ಲಿ ವಿಟಮಿನ್ ಸಿ ಪ್ರಮಾಣದ ಜೊತೆಗೆ ವಿಟಮಿನ್ ಬಿ6, ವಿಟಮಿನ್ ಕೆ, ಮ್ಯಾಂಗನೀಸ್, ಪೊಟಾಸಿಯಂ, ಫಾಸ್ಫರಸ್ ಇವುಗಳನ್ನು ಸಹ ಒಳಗೊಂಡಿದ್ದು, ನಮ್ಮ ದೇಹದ ವಿವಿಧ ಕಾರ್ಯ ಚಟುವಟಿಕೆಗಳಿಗೆ ಅನುಕೂಲವಾಗುತ್ತದೆ.
ಮುಖ್ಯವಾಗಿ ರೋಗ ನಿರೋಧಕ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವುದರ ಜೊತೆಗೆ ಜೀವಕೋಶಗಳ ಅಭಿವೃದ್ಧಿ ಮತ್ತು ಬ್ಲಡ್ ಶುಗರ್ ನಿರ್ವಹಣೆ ಮಾಡುತ್ತದೆ.ಹೌದು, ಈರುಳ್ಳಿಯಲ್ಲಿ ಆಂಟಿ ಆಕ್ಸಿಡೆಂಟ್ ಅಂಶಗಳು ಅಪಾರವಾಗಿದೆ. ಇವು ನಮ್ಮ ದೇಹದಲ್ಲಿ ಫ್ರೀ ರಾಡಿಕಲ್ ಅಂಶಗಳ ವಿರುದ್ಧ ಹೋರಾಡು ವುದು ಮಾತ್ರವಲ್ಲದೆ ನಮ್ಮ ಜೀವಕೋಶಗಳನ್ನು ಉರಿಯುತದಿಂದ ರಕ್ಷಣೆ ಮಾಡುತ್ತವೆ. ಮುಖ್ಯವಾಗಿ ಹೃದಯದ ಕಾಯಿಲೆ ಕ್ಯಾನ್ಸರ್ ಮತ್ತು ಆಲ್ಜಿ ಮರ್ ಕಾಯಿಲೆಯ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.