ಮುಂಬೈ: ಮಕ್ಕಳು ಚಿಕನ್ ಬೇಕು ಎಂದು ಕೇಳಿದ್ದಕ್ಕೆ ತಾಯಿಯೇ ಕೋಪದಿಂದ ಹೊಡೆದು ಕೊಂದ ಘಟನೆ ಮಹಾರಾಷ್ಟ್ರದ ಪಾಲ್ಟರ್‌ನಲ್ಲಿ ನಡೆದಿದೆ.
ಚಿನ್ಮಯ್ ಧುಮ್ಮೆ (7) ಮೃತ ಬಾಲಕ. ಅಲ್ಲದೇ ತನ್ನ 10 ವರ್ಷದ ಮಗಳ ಮೇಲೂ ಗಾಯಗಳಾಗಿವೆ. ತಾಯಿ ಪಲ್ಲವಿ ಬಳಿ ಮಕ್ಕಳು ಬಂದು ಚಿಕನ್ ಬೇಕು ಎಂದು ಕೇಳಿದ್ದರು.
ಇದರಿಂದ ಕೋಪಗೊಂಡ ಆಕೆ ಆತನನ್ನು ಹೊಡೆದು ಹತ್ಯೆಗೈದಿದ್ದಾಳೆ. ಇದೀಗ ಮಗಳನ್ನು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.ಕಿರುಚಾಟ ಕೇಳಿ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ನಂತರ ಪಾಲ್ವರ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ಮಹಿಳೆಯನ್ನು ಬಂಧಿಸಿದ್ದಾರೆ.