ದಾವಣಗೆರೆ : ನವರಾತ್ರಿ ಪ್ರಯುಕ್ತ ನಗರದ ಕಾಳಿಕಾದೇವಿ ರಸ್ತೆಯಲ್ಲಿರುವ ಶ್ರೀ ಕಾಳಿಕಾ ದೇವಿ ವಿಶ್ವಕರ್ಮ ದೇವಸ್ಥಾನದಲ್ಲಿ ಇಂದು ಅ.1ರ ಬುಧವಾರ ಆಯುಧ ಪೂಜೆ, ಸಂಜೆ 6 ಲಲಿತಾ ಸಹಸ್ರನಾಮ ಪಾರಾಯಣ ಮತ್ತು ಸಂಜೆ 7 ರಿಂದ ಶ್ರೀ ದೇವಿಯ ಪಾರಾಯಣ ನಡೆಯಲಿದೆ. ನಂತರ ರಾತ್ರಿ 8 ಗಂಟೆಗೆ ಅನ್ನ ಸಂತರ್ಪಣೆ ಪ್ರಸಾದ ವಿನಿಯೋಗ ಏರ್ಪಡಿಸಲಾಗಿದೆ,
ನಾಳೆ ಅ. 2ರ ಗುರುವಾರ ವಿಜಯದಶಮಿ ಹಾಗೂ ಸಂಜೆ 6.30ಕ್ಕೆ ಪಾಲಕಿ ಉತ್ಸವದೊಂದಿಗೆ ಬನ್ನಿ ಮುಡಿಯುವುದು ನಂತರ ಪ್ರಸಾದ ವಿನಿಯೋಗವಿರುತ್ತದೆ ಎಂದು ಶ್ರೀ ಕಾಳಿಕಾದೇವಿ ವಿಶ್ವಕರ್ಮ ದೇವಸ್ಥಾನ ಆಡಳಿತ ಸಮಿತಿ ಟ್ರಸ್ಟ್ ತಿಳಿಸಿದೆ