ಉಡುಪಿ: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ನಡೆಯುವ ರಾಜ್ಯದ ನಾಗರೀಕರ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಗಣತಿದಾರರಾಗಿ ಭಾಗವಹಿಸದೇ ನಿರ್ಲಕ್ಷ್ಯ ತೋರಿದ ಮೂವರು ಶಿಕ್ಷಕರನ್ನು ಅಮಾನತು ಮಾಡಲಾಗಿದೆ.
ಒಳಕಾಡು ಸರ್ಕಾರಿ ಶಾಲಾ ಸಹ ಶಿಕ್ಷಕಿಯರಾದ ಸುರೇಖ ಮತ್ತು ರತ್ನ ಹಾಗೂ ಉದ್ಯಾವರ ಸರ್ಕಾರಿ ಶಾಲಾ ಸಹ ಶಿಕ್ಷಕಿ ಪ್ರಭಾ ಅವರನ್ನು ಅಮಾನತು ಮಾಡಿ ಜಿಲ್ಲಾಧಿಕಾರಿ ಸ್ವರೂಪ ಆದೇಶಿಸಿದ್ದಾರೆ.
ಈ ಮೂವರು ಶಿಕ್ಷಕಿಯರು ಕೂಡಾ ಸಮೀಕ್ಷೆ ಕಾರ್ಯದಲ್ಲಿ ಭಾಗವಹಿಸದೇ, ನೇಮಕಾತಿ ಆದೇಶವನ್ನು ಸ್ವೀಕರಿಸಿರುವುದಿಲ್ಲ, ಹಲವು ಬಾರಿ ದೂರವಾಣಿ ಮೂಲಕ ಸಂಪರ್ಕಿಸಿದರೂ ನೇಮಕಾತಿ ಆದೇಶ ಪ್ರತಿಯನ್ನು ಸ್ವೀಕರಿಸಲು ನಿರಾಕರಿಸಿರುತ್ತಾರೆ. ಹೀಗಾಗಿ ಕಾರಣ ಕೇಳಿ ನೋಟಿಸ್ ನೀಡಲಾಗಿದ್ದು ಈವರೆಗೂ ನೋಟಿಸ್ ಗೆ ಸಮಜಾಯಿಷಿ ನೀಡಿರುವುದಿಲ್ಲ.
ಈ ಕಾರಣದಿಂದಾಗಿ ಸಮೀಕ್ಷೆದಾರರನ್ನು ಅಮಾನತು ಮಾಡಲಾಗಿದೆ.