ಬಿಗ್ ಬಾಸ್ ಸೀಸನ್ 12 ರ ಮೊದಲನೇ ದಿನವೇ ಎಲಿಮಿನೇಟ್ ಆಗಿ ನಿರಾಸೆ ಮೂಡಿಸಿದ್ದ ಕರಾವಳಿಯ ಹುಡುಗಿ ರಕ್ಷಿತ ಈಗ ಮತ್ತೆ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡುವ ಸಾಧ್ಯತೆ ಇದೆ.
ಶನಿವಾರದ ಕಿಚ್ಚನ ಪಂಚಾಯ್ತಿ ವೇದಿಕೆಯಲ್ಲಿ ರಕ್ಷಿತಾ ಕಾಣಿಸಿ ಕೊಂಡಿದ್ದು ವೈಲ್ಡ್ ಕಾರ್ಡ್ ಮೂಲಕ ಮತ್ತೆ ದೊಡ್ಮನೆಗೆ ಎಂಟ್ರಿ ಕೊಡುವ ಸಾಧ್ಯತೆ ಇದೆ.
ಮನೆಯಿಂದ ಹೊರ ಹೋಗುವಾಗ ಯಾರೂ ನನ್ನ ಸಪೋರ್ಟ್ ಮಾಡಲಿಲ್ಲ, ನನ್ನ ಬಗ್ಗೆ ಏನೂ ಗೊತ್ತಿಲ್ಲದವರು ನನ್ನ ಹೊರಗೆ ಕಳುಹಿಸಿದ್ದಾರೆ. ಈಗ ಒಳಗೆ ಹೋಗಿ ಕಾರಣ ಕೇಳುತ್ತೇನೆ ಎಂದು ಕಿಚ್ಚನ ಬಳಿ ಹೇಳಿಕೊಂಡಿದ್ದಾರೆ.