ಅಬುಧಾಬಿಯ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಇಲಾಖೆಯ ಅಡಿಯಲ್ಲಿರುವ ಎಕ್ಸ್ಪೀರಿಯೆನ್ಸ್ ಅಬುಧಾಬಿಯ ಜಾಹೀರಾತಿನಲ್ಲಿ ಬಾಲಿವುಡ್ ತಾರೆ ದೀಪಿಕಾ ಪಡುಕೋಣೆ ‘ಹಿಜಾಬ್’ ಧರಿಸಿದ್ದಕ್ಕಾಗಿ ಸಾಮಾಜಿಕ ಮಾಧ್ಯಮದಲ್ಲಿ ಪರ ವಿರೋಧ ಚರ್ಚೆ ಆರಂಭವಾಗಿದೆ.
ದೀಪಿಕಾ ಪಡುಕೋಣೆ ಇತ್ತೀಚೆಗೆ ತಮ್ಮ ಪತಿ ಮತ್ತು ನಟ ರಣವೀರ್ ಸಿಂಗ್ ಅವರೊಂದಿಗೆ ಎಕ್ಸ್ಪೀರಿಯೆನ್ಸ್ ಅಬುಧಾಬಿಯ ಪ್ರಾದೇಶಿಕ ಬ್ರಾಂಡ್ ರಾಯಭಾರಿಯಾಗಿ ಸೇರಿಕೊಂಡಿದ್ದರು.
ಪ್ರಕಟಣೆಯಂತೆ, ಅಬುಧಾಬಿ ಪ್ರವಾಸೋದ್ಯಮ ಅಧಿಕಾರಿಗಳು ಒಂದು ಜಾಹೀರಾತನ್ನು ಬಿಡುಗಡೆ ಮಾಡಿದ್ದು ಅದರಲ್ಲಿ ದೀಪಿಕಾ ಪಡುಕೋಣೆ ಅವರ ಮುಖ ಮತ್ತು ಕೈಗಳನ್ನು ಹೊರತುಪಡಿಸಿ ಇಡೀ ದೇಹವನ್ನು ಆವರಿಸುವ ಕೆಂಪು ಬಣ್ಣದ ಉಡುಪನ್ನು ಧರಿಸಿರುವುದು ಕಂಡುಬಂದಿದೆ.
ಆದರೆ ಇದೀಗ ಭಾರತದಲ್ಲಿ ಇದು ಕೆಲವರ ಕಣ್ಣು ಕೆಂಪಾಗಾಗಿಸಿದ್ದು ದೀಪಿಕಾ ವಿರುದ್ಧ ಪ್ರತಿಕ್ರಿಯೆ ಬರುತ್ತಿದೆ. ಇನ್ನು ಕೆಲವರು ಇದನ್ನು ಸ್ವಾಗತಿಸಿರುವುದು ಗಮನಾರ್ಹ!