ಚಿತ್ರದುರ್ಗ : ರಾಜ್ಯ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಹೆಸರು ಕಾಳು ಖರೀದಿಸಲು ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳ ನಿಯಮಿತದಿಂದ ರೈತ ಉತ್ಪಾದಕ ಸಹಕಾರಿ ಸಂಘಗಳನ್ನು ಗುರುತಿಸಲಾಗಿದೆ.
ಹೊಸದುರ್ಗ ತಾಲ್ಲೂಕಿನಲ್ಲಿ ಶ್ರೀರಾಂಪುರ ಪಿ.ಎ.ಸಿ.ಎಸ್ ಹಾಗೂ ಕಂಗುವಳ್ಳಿ ಎಫ್.ಪಿ.ಓ, ಹಿರಿಯೂರು ತಾಲ್ಲೂಕಿನಲ್ಲಿ ಐಮಂಗಲ ಪಿ.ಎ.ಸಿ.ಎಸ್, ಚಿತ್ರದುರ್ಗ ತಾಲ್ಲೂಕಿನಲ್ಲಿ ತುರವನೂರು ಎಫ್.ಪಿ.ಓ, ಮೊಳಕಾಲ್ಮೂರಿನಲ್ಲಿ ಟಿ.ಎ.ಪಿ.ಸಿ.ಎಂ.ಸ್ ರಾಂಪುರ ಕೇಂದ್ರಗಳಲ್ಲಿ ಹೆಸರು ಕಾಳು ಖರೀದಿ ನೊಂದಣಿಗೆ ಅವಕಾಶವಿದೆ. ಪ್ರತಿ ರೈತರಿಂದ ಎಕರೆಗೆ 3 ಕ್ವಿಂಟಾಲ್‌ಗಳಂತೆ ಗರಿಷ್ಟ 15 ಕ್ವಿಂಟಾಲ್ ಹೆಸರು ಕಾಳು ಖರೀದಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ಸಹಕಾರ ಸಂಘಗಳ ಕಾರ್ಯದರ್ಶಿಗಳ ಮೊಬೈಲ್ ಸಂಖ್ಯೆ ಕಂಗುವಳ್ಳಿ 9108134058, ಶ್ರೀರಾಂಪುರ 9844820821, ಐಮಂಗಲ 9986182809, ತುರವನೂರು 9620266826, ರಾಂಪುರ 9886452622 ಕರೆ ಮಾಡುವಂತೆ ಪ್ರಕಟಣೆ ತಿಳಿಸಿದೆ.