ಬಿಗ್ಬಾಸ್ ಕನ್ನಡ ಸೀಸನ್ 12 ಪ್ರಾರಂಭವಾಗಿ ಎರಡು ವಾರಗಳಾಗಿವೆ.. ಕೋವಿಡ್ ಹೊರತಾಗಿ ಇದೇ ಮೊದಲ ಬಾರಿಗೆ ಬಿಗ್ಬಾಸ್ ಬಿಗ್ ಕಂಟಕ ಎದುರಾಗಿ ಶೋ ಸ್ಟಾಪ್ ಆಗಿತ್ತು. ಬಿಗ್ ಮನೆಯ ಸ್ಪರ್ಧಿಗಳು ರೆಸಾರ್ಟ್ಗೆ ಶಿಫ್ಟ್ ಬಳಿಕ ಸುದೀಪ್ ಮಧ್ಯಸ್ಥಿಕೆಯಲ್ಲಿ ಕವಿದಿದ್ದ ಗ್ರಹಣ ಮೋಕ್ಷ ಕಂಡಿದೆ.
ಆ ಘಟನೆಯ ಬಳಿಕ ಮೊದಲ ಬಾರಿಗೆ ಸುದೀಪ್, ವಾರದ ಪಂಚಾಯಿತಿಯಲ್ಲಿ ಪ್ರಸ್ತಾಪಿಸಿದ್ದಾರೆ. ಇದೀಗ ವಾರದ ಕೊನೆಯಲ್ಲಿ ಕಿಚ್ಚನ ಪಂಚಾಯ್ತಿಗೆ ಎದುರು ನೋಡ್ತಿದ್ದು , ಸ್ಪರ್ಧಿಗಳ ನಟ್ಟು ಬೋಲ್ಡ್ ಸರಿ ಮಾಡೋದರ ಜೊತೆಗೆ ಬಿಗ್ ಬಾಸ್ ಮನೆ ಕ್ಲೋಸ್ ಆಗೋದಕ್ಕೆ ಡಿಕೆಶಿ ಕಾರಣ ಅಂತಿದ್ದಕ್ಕೆ ಕಿಚ್ಚ ಕ್ಲಾರಿಟಿ ಕೊಟ್ಟಿದ್ದಾರೆ. ಬಿಗ್ಬಾಸ್ ಕನ್ನಡಿಗರ ಹೆಮ್ಮೆಯ ಶೋ, 12 ಸೀಸನ್ಗಳಿಂದಲೂ ಇದನ್ನು ಕನ್ನಡಿಗರು ಬೆಳೆಸಿದ್ದಾರೆ.
ಇದನ್ನು ಹಾಳು ಮಾಡುವುದು ಸುಲಭದ ಕೆಲಸವಲ್ಲ. ಕನ್ನಡಿಗರ ಪ್ರೀತಿ ಇರುವವರೆಗೆ ನಾವು ಅಂದರೆ ಬಿಗ್ಬಾಸ್ ಮುನ್ನುಗ್ಗುತ್ತಲೇ ಇರುತ್ತೆ ಅಂತ ಹೇಳ್ಕೊಂಡ್ರು. ಇತ್ತೀಚೆಗೆ ಎದುರಾದ ಸಮಸ್ಯೆಯ ಸಮಯದಲ್ಲಿ ಬಿಗ್ಬಾಸ್ ಜ್ಯೋತಿ ಆರದಂತೆ ಕಾಪಾಡಿದ ಎಲ್ಲರಿಗೂ ಧನ್ಯವಾದ ತಿಳಿಸಿದರು. ಇಂತಹ ಸಂದರ್ಭದಲ್ಲಿ ಶೋ ಮತ್ತೆ ಶುರುವಾಗಲು ಕಾರಣರಾದ ಡಿಕೆ ಸಾಹೇಬ್ರಿಗೆ ಹಾಗೂ ನನ್ನ ಸ್ನೇಹಿತ ನಲಪಾಡ್ ಅವರಿಗೆ ಧನ್ಯವಾದ ಹೇಳಲೇಬೇಕು.
ಹಾಗೆಯೇ ಸಪೋರ್ಟ್ ಮಾಡಿದ ಆಡಳಿತ ಮಂಡಳಿಯ ಎಲ್ಲರಿಗೂ ಧನ್ಯವಾದ ಅರ್ಪಿಸುವುದಾಗಿ ತಿಳಿಸಿದ್ರು. ಬಿಗ್ ಬಾಸ್ಗೆ ಪ್ರಾಬ್ಲಂ ಆದಾಗ.. ನಡೆದ ವಿಚಾರಕ್ಕೂ ‘ಬಿಗ್ ಬಾಸ್’ ಶೋಗೂ, ಕಲರ್ಸ್‌ಗೂ, ನಮಗೂ ಯಾವುದೇ ರೀತಿ ಸಂಬಂಧ ಇಲ್ಲ. ನಮ್ಮಿಂದ ಸಮಸ್ಯೆ ಆಗಿಲ್ಲ. ನಮ್ಮಿಂದ ನಿಯಮಗಳು ಉಲ್ಲಂಘನೆ ಆಗಿಲ್ಲ. ನಾವು ಯಾವ ಜಾಗದಲ್ಲಿ ನಡೆಸುತ್ತಿದ್ದೇವೋ.
ಅವರಿಗೆ ಆಗಿದ್ದು. ಖಾಲಿ ಜಾಗಕ್ಕೆ ಬೆಲೆ ಇರಲ್ಲ. ಅದಕ್ಕೊಂದು ಅಡ್ರೆಸ್ ಬೇಕು. ಆ ಅಡ್ರೆಸ್ ‘ಬಿಗ್ ಬಾಸ್’ ಆಯ್ತು. ಬಿಗ್ ಬಾಸ್ ಅನ್ನೋ ಹೆಸರು ಎಷ್ಟು ಕೇಳಿಬರ್ತಾಯಿತ್ತು ಅಂದ್ರೆ. ತೊಂದರೆ ಇಲ್ಲಿಂದ ಪ್ರಾರಂಭ ಆಯ್ತು ಅಂತ. ಆದರೆ ತಪ್ಪೇನಿಲ್ಲ…ಒಂದು ಶೋ 12ನೇ ಸೀಸನ್‌ನಲ್ಲಿ ಕಾರ್ಯಕ್ರಮ ಆಗಿ ಉಳಿದಿಲ್ಲ. ಎಷ್ಟೋ ಜನರಿಗೆ ಅನ್ನ ಹಾಕಿದೆ, ಕೆಲಸ ಕೊಟ್ಟಿದೆ, ಎಷ್ಟೋ ಜನರಿಗೆ ದಾರಿದೀಪ ಆಗಿದೆ ಅಂದಾಗ ಖಂಡಿತವಾಗಿಯೂ ಎಷ್ಟೋ ಜನರಿಗೆ ಕಣ್ಣು ಕುಕ್ಕಿರುತ್ತೆ. ಅದೂ ತಪ್ಪಲ್ಲ.