ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸಿರುವ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಬಿಡುಗಡೆ ಆಗಿ ದೊಡ್ಡ ಹಿಟ್ ಆಗಿದೆ. ಇದೀಗ ರಿಷಬ್ ತಮ್ಮ ಕಾಲುಗಳ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಅಂದಹಾಗೆ ರಿಷಬ್ ಅವರ ಕಾಲುಗಳೇ ಹೇಳುತ್ತಿವೆ ಕಾಂತಾರ ಶೂಟಿಂಗ್ನ ಶ್ರಮದ ಕತೆಯನ್ನು. ಚಿತ್ರಗಳ ನೋಡಿ. ಕಾಂತಾರ ಚಾಪ್ಟರ್ 1 ಕ್ಲೈಮ್ಯಾಕ್ಸ್ ಶೂಟಿಂಗ್ ವೇಳೆ ರಿಷಭ್ ಶೆಟ್ಟಿ ಕಾಲು ಊದಿಕೊಂಡಿದೆ. ಶ್ರಮ-ಪರಿಶ್ರಮಕ್ಕೆ ತಕ್ಕ ಫಲ ಈಗ ಕಾಂತಾರ 1 ರಿಸಲ್ಟ್ನಲ್ಲಿ ಕಂಡು ಬಂದಿದೆ. ಈ ಫೋಟೋಗಳನ್ನ ಹಂಚಿಕೊಂಡು ಶೂಟಿಂಗ್ ಸಮಯದ ಕಷ್ಟಗಳನ್ನ ಹಂಚಿಕೊಂಡಿರೋ ರಿಷಬ್ ಶೆಟ್ಟಿ ಇದನ್ನು ರಿವೀಲ್ ಮಾಡಿದ್ದಾರೆ.
ಸದ್ಯ ಕಾಂತಾರ 1 ಸಿನಿಮಾ ಬಾಕ್ಸ್ ಆಫೀಸ್ ಚಿಂದಿ ಉಡಾಯಿಸುತ್ತಿದೆ. 600 ಕೋಟಿ ಗಳಿಸಿ ಮುನ್ನುಗ್ಗುತ್ತಿರುವ ಕಾಂತಾರ ಮತ್ತಷ್ಟು ಗಳಿಕೆಯ ಓಟದಲ್ಲಿದೆ. Climax shooting ನ ಸಮಯ… ಊದಿಕೊಂಡಿದ್ದ ಕಾಲು , ನಿತ್ರಾಣವಾಗಿದ್ದ ದೇಹ.. ಇವತ್ತು ಕೋಟ್ಯಂತರ ಜನ ನೋಡಿ ಮೆಚ್ಚುವ ಹಾಗೆ ಆಗಿದೆ.. ಇದು ನಾವು ನಂಬಿರುವ ಶಕ್ತಿಗಳ ಆಶೀರ್ವಾದದಿಂದ ಮಾತ್ರ ಸಾಧ್ಯ .. ಸಿನಿಮಾ ನೋಡಿ ಅಭಿಪ್ರಾಯ ವ್ಯಕ್ತ್ಯಪಡಿಸಿದ ತಮ್ಮೆಲ್ಲರಿಗೂ ಧನ್ಯವಾದಗಳು ಎಂದು ರಿಷಬ್ ಶೆಟ್ಟಿ ಟ್ವೀಟ್ ಮಾಡಿದ್ದಾರೆ. ರಿಷಬ್ ಹಂಚಿಕೊಂಡಿರುವ ಚಿತ್ರಗಳಲ್ಲಿ ರಿಷಬ್ ಕಾಲುಗಳು ಕಪ್ಪೆದ್ದು ಹೋಗಿವೆ. ಬಟ್ಟೆಗಳು ಬಿಗಿಯಾಗಿ ಕಟ್ಟಿದ್ದಕ್ಕೆ ರಕ್ತಚಲನೆ ಇಲ್ಲದೆ ಚರ್ಮ ಮರಗಟ್ಟಿದಂತಾಗಿರುವುದು ಕಾಣುತ್ತಿದೆ. ಕಾಲು ಊದಿಕೊಂಡಿದೆ.