ಹರಿಯಾಣ : ಯುಪಿಎಸ್ಸಿ ಪರೀಕ್ಷೆಯನ್ನ ಪಾಸಾಗಿ ದೊಡ್ಡ ಅಧಿಕಾರಿಯಾಗಬೇಕೆಂಬ ಕನಸನ್ನು ಇಟ್ಟುಕೊಂಡು ಬಂದಿದ್ದ ಗೌರವ್ ಕೌಶಲ್ ಹುದ್ದೆಗೆ ರಾಜೀನಾಮೆ ಕೊಟ್ಟು ಏನು ಮಾಡಿದರು. ಈ ಬಗ್ಗೆ ತಿಳಿಯೋಣ.
ಯುಪಿಎಸ್ಸಿ ಪರೀಕ್ಷೆಯಲ್ಲಿ ಪಾಸಾದ ಅಭ್ಯರ್ಥಿಗಳಲ್ಲಿ ಕೆಲವರು ತಮ್ಮ ನೆಚ್ಚಿನ ಅಧಿಕಾರಿ ಹುದ್ದೆಯನ್ನು ಏರಿ ಚೆನ್ನಾಗಿ ಕೆಲಸ ಮಾಡಿ ಅದೇ ಹುದ್ದೆಯಲ್ಲಿಯೇ ಬಡ್ತಿ ಪಡೆದು ಕೊನೆಗೆ ನಿವೃತ್ತಿಯಾದರೆ, ಇನ್ನೂ ಕೆಲವರು ಅರ್ಧಕ್ಕೆ ಎಂದರೆ 10-12 ವರ್ಷಗಳ ಕಾಲ ಕೆಲಸ ಮಾಡಿ ಕೆಲಸಕ್ಕೆ ರಾಜೀನಾಮೆ ಕೊಡುತ್ತಾರೆ. ಅದೇ ರೀತಿ ಯುಪಿಎಸ್ಸಿ ಪರೀಕ್ಷೆಯನ್ನ ಪಾಸಾಗಿ ದೊಡ್ಡ ಅಧಿಕಾರಿಯಾಗಬೇಕೆಂಬ ಕನಸನ್ನು ಇಟ್ಟುಕೊಂಡು ಬಂದಿದ್ದ ಗೌರವ್ ಕೌಶಲ್ ಅವರ ಬಗ್ಗೆ ಇಲ್ಲಿ ನಾವು ಮಾತನಾಡುತ್ತಿದ್ದೇವೆ. ಇವರು ತಮ್ಮ ಕನಸಿನಂತೆ ಪರೀಕ್ಷೆಯನ್ನು ಒಳ್ಳೆಯ ರ್ಯಾಂಕ್ ಪಡೆಯುವುದರೊಂದಿಗೆ ಪಾಸ್ ಮಾಡಿದರು. ಆದರೆ ನಂತರ ತಮ್ಮ ವೃತ್ತಿಜೀವನದ ಹಾದಿಯನ್ನು ಬದಲಾಯಿಸಿಕೊಂಡು ಪ್ರತಿಷ್ಠಿತ ಐಎಎಸ್ ಹುದ್ದೆಗೆ ಅವರು ರಾಜೀನಾಮೆ ನೀಡಿದರು.
ಗೌರವ್ ಕೌಶಲ್ ಅವರು ಮೂಲತಃ ಹರಿಯಾಣದವರು ಮತ್ತು ಅವರು ಪಂಚಕುಲದಲ್ಲಿ ತಮ್ಮ ಪ್ರಾಥಮಿಕ ಶಾಲಾ ಶಿಕ್ಷಣವನ್ನು ಪಡೆದರು. ನಂತರ ಜೆಇಇ ತೇರ್ಗಡೆಯಾದ ನಂತರ ಐಐಟಿ ದೆಹಲಿಯಲ್ಲಿ ಓದಿದರು. ಅವರು ಒಂದು ವರ್ಷದ ಅಧ್ಯಯನದ ನಂತರ ಐಐಟಿ ದೆಹಲಿಯನ್ನು ತೊರೆಯಲು ನಿರ್ಧರಿಸಿದರು ಮತ್ತು ಬದಲಿಗೆ ಬಿಟ್ಸ್ ಪಿಲಾನಿಯಲ್ಲಿ ಕಂಪ್ಯೂಟರ್ ಸೈನ್ಸ್ ವಿಷಯದಲ್ಲಿ ಬಿ.ಟೆಕ್ ಪದವಿಯನ್ನು ಪಡೆದರು. ಒಂದು ವರ್ಷ ಕಾಲೇಜಿಗೆ ಹೋದ ಮೇಲೆ ಮತ್ತೊಮ್ಮೆ ಮನಸ್ಸು ಬದಲಾಯಿಸಿ, ಅದನ್ನು ಸಹ ಇವರು ಬಿಟ್ಟು ಪಂಜಾಬ್ ಎಂಜಿನಿಯರಿಂಗ್ ಕಾಲೇಜಿಗೆ ಸೇರಿದರು.
ಅದರ ನಂತರ, ಅವರು 2012 ರ ಯುಪಿಎಸ್ಸಿ ಸಿವಿಲ್ ಸರ್ವೀಸಸ್ ಪರೀಕ್ಷೆಯನ್ನು (ಸಿಎಸ್ಇ) 38ನೇ ರ್ಯಾಂಕ್ ಪಡೆಯುವುದರೊಂದಿಗೆ ಪಾಸ್ ಮಾಡಿದರು. ನಂತರ ಅವರನ್ನು ಇಂಡಿಯನ್ ಡಿಫೆನ್ಸ್ ಎಸ್ಟೇಟ್ಸ್ ಸರ್ವಿಸ್ (IDES) ನಲ್ಲಿ ನೇಮಿಸಲಾಯಿತು, ಅಲ್ಲಿ ಅವರು ಕಂಟೋನ್ಮೆಂಟ್ ಬೋರ್ಡ್ನಲ್ಲಿ ಆಡಳಿತಾತ್ಮಕ ಕಾರ್ಯಗಳನ್ನು ನಿರ್ವಹಿಸುತ್ತಿದ್ದರು.
ಆದರೆ ಆ ಕೆಲಸವನ್ನು ಸಹ ಅವರು ಕೆಲವು ವರ್ಷಗಳವರೆಗೆ ಮಾಡಿದ ನಂತರ ಅವರು ಈ ಪ್ರತಿಷ್ಠಿತ ಹುದ್ದೆಗೂ ಸಹ ಗುಡ್ಬೈ ಹೇಳಿ ಯುಪಿಎಸ್ಸಿ ಆಕಾಂಕ್ಷಿಗಳಿಗೆ ಮಾರ್ಗದರ್ಶನ ನೀಡಲು ಶುರು ಮಾಡಿದರು. ಗೌರವ್ ಐಎಎಸ್ ಅಧಿಕಾರಿಯಾಗಿ 12 ವರ್ಷಗಳ ಕೆಲಸ ಮಾಡಿದರು. ಸ್ಟಾಫ್ ಸೆಲೆಕ್ಷನ್ ಕಮಿಷನ್ – ಕಂಬೈನ್ಡ್ ಗ್ರಾಜುಯೇಟ್ ಲೆವೆಲ್ (ಎಸ್ಎಸ್ಸಿ ಸಿಜಿಎಲ್) ಪರೀಕ್ಷೆ ಮತ್ತು ಜೆಇಇ ಎರಡು ಬಾರಿ ಪಾಸ್ ಮಾಡಿದ್ದರು.
ಪ್ರಸ್ತುತ, ಅವರು ಆಕಾಂಕ್ಷಿಗಳಿಗೆ ಮಾರ್ಗದರ್ಶನ ನೀಡುವ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ ಮತ್ತು ಅವರ ಯೂಟ್ಯೂಬ್ ಚಾನಲ್ ಮೂಲಕ ಅಭ್ಯರ್ಥಿಗಳಿಗೆ ಮಾರ್ಗದರ್ಶನವನ್ನು ನೀಡುತ್ತಾರೆ. ಅಲ್ಲದೆ, ಅವರು ಗೌರವ್ ಕೌಶಲ್ ಅಪ್ಲಿಕೇಶನ್ ಅನ್ನು ಸಹ ಪ್ರಾರಂಭಿಸಿದರು.