ಚಿತ್ರದುರ್ಗ : ಮಹಾರಾಷ್ಟ್ರದ ಕೊಲ್ಲಿಪುರ ಹತ್ತಿರದ ಕನೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮಿಜೀಯ ಮಾನಹಾನಿಕರ ಮತ್ತು ಸಮುದಾಯ ಭದ್ರತೆಗೆ ಹಾನಿಕಾರಕಾದ ನೀಡಿರುವ ಹೇಳಿಕೆಯನ್ನು ಜಾಗತಿಕ ಲಿಂಗಾಯಿತ ಮಹಾಸಭಾ ಖಂಡಿಸಿದ್ದು, ಅವರು ಕ್ಷಮೆ ಕೇಳದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದೆ.
ಈ ಬಗ್ಗೆ ಜಿಲ್ಲಾಡಳಿತಕ್ಕೆ ಮನವಿಯನ್ನು ಸಲ್ಲಿಸಿದ ಜಾಗತಿಕ ಲಿಂಗಾಯಿತ ಮಹಾಸಭಾ ದಿನಾಂಕ : 19-10-2025 ರಂದು ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್ ತಾಲ್ಲೂಕಿನ ಬೀರೂರು ಗ್ರಾಮದ ಬಸವಪರಂಪರೆಯ ವಿರಕ್ತಮಠದ ಸಾರ್ವಜನಿಕ ಸಭೆಯಲ್ಲಿ ಮಹಾರಾಷ್ಟ್ರದ ಕೊಲ್ಲಿಪುರ ಹತ್ತಿರದ ಕನೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರಸ್ವಾಮಿ ಕರ್ನಾಟಕದ ಲಿಂಗಾಯಿತ ಮಠಾಧೀಶರ ಒಕ್ಕೂಟದ ಪೂಜ್ಯರ ಕುರಿತು ತೀರ ಅವಮಾನಕಾರಿ ಮಾನಹಾನಿಕರ ಮತ್ತು ಧರ್ಮದ ಹೆಸರಿನಲ್ಲಿ ವಿಭಜನೆ ಮೂಡಿಸಬಹುದಾದ ಶಬ್ದಗಳನ್ನು ಬಳಸಿದ್ದಾರೆ.
ಲಿಂಗಾಯಿತ ಮಠಾಧೀಶರ ಒಕ್ಕೂಟವನ್ನು ಮುಖ್ಯಮಂತ್ರಿಗಳ ಕೃಪಾಪೋಷಿತ ಕಲಾವಿದರೆಂದು ಹೇಳಿಕೆ ನೀಡಿದ್ದಾರೆ. ಮುಂದುವರೆದು ಬಸವ ಸಂಸ್ಕೃತಿ ಅಭಿಯಾನದ ಬಗ್ಗೆ ಹಾಗೂ ಲಿಂಗಾಯಿತ ಮಠಾಧಿಪತಿಗಳಿಗೆ ಅಶ್ಲೀಲ ಅವಾಚ್ಯ ಅಸಂವಿಧಾನಿಕ ಭಾಷೆಯನ್ನು ಬಳಸಿ ಅವರಿಗೆ ಅಪಮಾನ ಮಾಡಿದ್ದಾರೆ. ಒಬ್ಬ ಮಠಾಧಿಪತಿಯಾಗಿ ಅವರ ಬಾಯಿಂದ ಈ ತರಹದ ಆಶ್ಲೀಲ ಅವಾಚ್ಯ ಅಸಂವಿಧಾನಿಕ ಶಬ್ದಗಳು ಬರಬಾರದು ಬಸವ ಸಂಸ್ಕೃತಿ ಅಭಿಯಾನದ ಯಶಸ್ಸನ್ನು ಕಂಡು ಯಾರನ್ನೋ ಮೆಚ್ಚಿಸಲು ಈ ಸ್ವಾಮಿ ಈ ರೀತಿ ಹೇಳಿಕೆ ನೀಡಿದ್ದಾರೆ. ಅವರ ಈ ಹೇಳಿಕೆಯನ್ನು ನಾವು ಖಂಡಿಸುತ್ತೇವೆ ಅವರು ಕ್ಷಮೆ ಕೇಳದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದಿದ್ದಾರೆ.
ಈ ಕನೇರಿಸ್ವಾಮಿ ಲಿಂಗಾಯಿತ ಮಠಾಧೀಶರನ್ನು “ಸೂಳೆಮಕ್ಕಳು” ಎಂದು ನಿಂದಿಸುವುದರೊಂದಿಗೆ ಇಂತಹವರನ್ನು ಚಪ್ಪಲಿಯಿಂದ ಹೊಡೆಯುತ್ತೇನೆ” ಎಂದು ಅತ್ಯಂತ ಅವಾಚ್ಯ ಶಬ್ದ ಬಳಸುವುದರೊಂದಿಗೆ ಪ್ರತಿಷ್ಟಿತ ಒಕ್ಕೂಟದ ಮಠಾಧೀಶರನ್ನು ಹೆದರಿಸುವ ಮತ್ತು ಹಿಂಸಾತ್ಮಕ ಹಲ್ಲೆ ಮಾಡುವ ಉದ್ದೇಶದಿಂದ ಕೀಳುಮಟ್ಟದ ಭಾಷೆಯನ್ನು ಬಳಸಿ ಅವರ ಕೀಳು ವ್ಯಕ್ತಿತ್ವವನ್ನು ಪ್ರದರ್ಶಿಸಿಕೊಳ್ಳುವುದಲ್ಲದೆ ಸಮಸ್ತ ಲಿಂಗಾಯಿತ ವಿರಕ್ತ ಮಠ ಪರಂಪರೆ ಮತ್ತು ಪೀಠಾಧೀಶರುಗಳನ್ನು ಅವಮಾನಿಸಿದ್ದಾರೆ. ಇಂತಹ ಹೇಳಿಕೆಗಳು ಧಾರ್ಮಿಕ ಸಹಿಷ್ಣತೆಗೆ, ಸಾಮೂಹಿಕ ಸಾಮರಸ್ಯದ ಬದುಕಿಗೆ ದಕ್ಕೆ ತರುವುದಲ್ಲದೆ ಸಮಾಜದಲ್ಲಿ ದ್ವೇಷವನ್ನು ಹರಡಲು ಕಾರಣವಾಗುತ್ತದೆ. ಇದು ಲಿಂಗಾಯಿತ ಧರ್ಮದ ಪೀಠಾಧಿಪತಿಗಳ ಅವಹೇಳನವಾಗಿರುವುದರಿಂದ ಲಿಂಗಾಯಿತ ಧರ್ಮೀಯರು ರೊಚ್ಚಿಗೇಳುವ ಸಂಭವವಿರುತ್ತದೆ ಎಂದು ತಿಳಿಸಿದ್ದಾರೆ.
ವಿಶೇಷವಾಗಿ ಭಾರತೀಯ ದಂಡಸಂಹಿತೆ ಕಲಂ 196 ಸಮುದಾಯಗಳ ಮಧ್ಯೆ ಶತೃತ್ವ ಹುಟ್ಟಿಸುವುದು ಕಲಂ 299 ಧಾರ್ಮಿಕ ಭಾವನೆಗಳಿಗೆ ಅಪಮಾನ ಮಾಡುವ ಉದ್ದೇಶದಿಂದ ಮಾಡಿದ ಕೃತ್ಯ ಕಲಂ 356 ಸುಮಾರು ನಾಲ್ಕು ನೂರು ಮಠಾಧೀಶರ ಮಾನಹಾನಿ ಕಲಂ 552 ಉದ್ದೇಶಪುರ್ವಕವಾಗಿ ಶಾಂತಿ ಭಂಗ ಮಾಡುವ ಉದ್ದೇಶದಿಂದ ಮಾಡಿದ ಅವಮಾನದ ಹೇಳಿಕೆಯಾಗಿದೆ. ಈ ಕುರಿತು ಸೂಕ್ತ ತನಿಖೆ ನಡೆಸಿ ಕನೇರಿ ಮಠದಸ್ವಾಮೀಜಿಯವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಜಾಗತಿಕ ಲಿಂಗಾಯಿತ ಮಹಾಸಭಾ ವತಿಯಿಂದ ಜಿಲ್ಲಾಡಳಿತಕ್ಕೆ ಮನವಿಯನ್ನು ಸಲ್ಲಿಸಲಾಯಿತು.
ಕರ್ನಾಟಕದ ಲಿಂಗಾಯಿತ ಮಠಾಧೀಶರ ಒಕ್ಕೂಟದ ಪೂಜ್ಯರ ಕುರಿತು ತೀರ ಅವಮಾನಕಾರಿ ಮಾನಹಾನಿಕರ ಮತ್ತು ಧರ್ಮದ ಹೆಸರಿನಲ್ಲಿ ವಿಭಜನೆ ಮೂಡಿಸಬಹುದಾದ ಶಬ್ದಗಳನ್ನು ಬಳಸಿದ್ದಾರೆ ಇದನ್ನು ಜಾಗತಿಕ ಲಿಂಗಾಯಿತ ಮಹಾಸಭಾ ಖಂಡಿಸಿದ್ದು, ಅವರು ಕ್ಷಮೆ ಕೇಳದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ.
ಇದರ ನೇತೃತ್ವವನ್ನು ಜಾಗತಿಕ ಲಿಂಗಾಯಿತ ಮಹಾಸಭಾದ ಅಧ್ಯಕ್ಷರಾದ ಜಿ.ಡಿ.ಕೆಂಚವೀರಪ್ಪ ವಹಿಸಿದ್ದರು, ಈ ಸಂದರ್ಭದಲ್ಲಿ ಜಾಗತಿಕ ಲಿಂಗಾಯಿತ ಮಹಾಸಭಾದ ಪದಾಧಿಕಾರಿಗಳು, ಸದಸ್ಯರಾದ ಜಿ.ಎನ್, ಮಲ್ಲಿಕಾರ್ಜನಪ್ಪ, ಕೆಇಬಿ ಷಣ್ಮುಖಪ್ಪ, ಬಸವರಾಜು ಕಟ್ಟಿ, ಜೆ.ಮಲ್ಲೇಶ ರೇಷ್ಮರಾಜು, ಎಂ.ರಂಗನಾಥ್ ನಾಯಿಗೆರೆ, ನಾಗರಾಜಪ್ಪ ಆರ್, ಶೈಲಜಾ ಬಾಬು, ಪಾರ್ವತಮ್ಮ ರವೀಂದ್ರ, ಚಂದ್ರುಶೇಖರ ಆರ್, ಮಂಜು ನಾಥ್, ವಾಗೀಶ್ ಬಾಬು, ಧನಂಜಯ ಲಕ್ಷ್ಮೀಸಾಗರ ಸದಾಶಿವಪ್ಪ ಸೇರಿದಂತೆ ಇತರರು ಭಾಗವಹಿಸಿದ್ದರು.