ಬೆಂಗಳೂರು ನಗರದ ಪ್ರತಿಷ್ಟಿತ ಎಂಜಿನಿಯರಿಂಗ್ ಕಾಲೇಜಿನಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿನಿ ಮೇಲೆ ಅದೇ ಕಾಲೇಜಿನ ವಿದ್ಯಾರ್ಥಿ ಅತ್ಯಾಚಾರ ಎಸಗಿದ್ದಾನೆ. ಏಳನೇ ಸೆಮಿಸ್ಟರ್ ನಲ್ಲಿ ವಿದ್ಯಾಭ್ಯಾಸ ಮಾಡುತ್ತಿರೋ ಜೀವನ್ ಗೌಡ ಅದೇ ಕಾಲೇಜಿನಲ್ಲಿ ಓದುತ್ತಿರೋ ಸಿನಿಯರ್ ವಿದ್ಯಾರ್ಥಿನಿಯನ್ನು ಲಂಚ್ ಬ್ರೇಕ್ ನಲ್ಲಿ ಒತ್ತಾಯ ಪೂರ್ವಕವಾಗಿ ಪುರುಷರ ಬಾತ್ ರೂಂಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ.
ನಿನ್ನ ಬಳಿ ಕೆಲವೊಂದು ವಸ್ತು ಪಡೆದುಕೊಳ್ಳಬೇಕು ಎಂದು ಸಂತ್ರಸ್ತ ಯುವತಿಯನ್ನು ಕರೆದು ಬಾತ್ ರೂಂಗೆ ಎಳೆದುಕೊಂಡು ಹೋಗಿ ಕೃತ್ಯ ಎಸಗಿದ್ದಾನೆ ಆರೋಪಿ ಜೀವನ್ ಗೌಡ. ಘಟನೆ ಬಳಿಕ ಅಘಾತಕ್ಕೆ ಒಳಗಾಗಿದ್ದ ಸಂತ್ರಸ್ತೆ ಯಾರಿಗೂ ವಿಷಯ ತಿಳಿಸದೆ ಗೌಪ್ಯವಾಗಿ ಇದ್ದರು.
ಸಂತ್ರಸ್ತೆ ಮಂಕಾಗಿ ಇದ್ದುದ್ದನ್ನು ನೋಡಿ ಯುವತಿ ಸ್ನೇಹಿತರಿಬ್ಬರು ಆಕೆಗೆ ಧೈರ್ಯ ಹೇಳಿ ಕೇಳಿದಾಗ ಆರೋಪಿ ಜೀವನ್ ಗೌಡನಿಂದ ತನಗಾದ ಅನ್ಯಾಯದ ಬಗ್ಗೆ ಸ್ನೇಹಿತರ ಬಳಿ ವಿವರಿಸಿದ್ದಾರೆ. ಘಟನೆ ಬಗ್ಗೆ ಇಬ್ಬರು ಸ್ನೇಹಿತರು ಸಂತ್ರಸ್ತೆಯ ಪೋಷಕರ ಗಮನಕ್ಕೆ ತಂದಿದ್ದಾರೆ. ಸಂತ್ರಸ್ತೆಯ ಸ್ನೇಹಿತೆಯಿಂದ ಮಾಹಿತಿ ಪಡೆದ ಪೋಷಕರು ಜೀವನ್ ಗೌಡ ವಿರುದ್ಧ ಹನುಮಂತನಗರ ಪೊಲೀಸರಿಗೆ ದೂರು ನೀಡಿದ್ದಾರೆ.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಹನುಮಂತ ನಗರ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ತನಿಖೆ ಮಾಡಿದ್ದಾರೆ. ವಿಚಾರಣೆ ವೇಳೆ ಆರೋಪಿ ಜೀವನ್ ಗೌಡ ಕೃತ್ಯ ಎಸಗಿರೋದು ಮೇಲ್ನೋಟಕ್ಕೆ ಪಕ್ಕಾ ಅಂತ ತಿಳಿದ ಬಳಿಕ ಆರೋಪಿಯನ್ನು ಬಂಧಿಸಿ ಪೊಲೀಸರು ಜೈಲಿಗೆ ಕಳುಹಿಸಿದ್ದಾರೆ.