ಚಿತ್ರದುರ್ಗ : ನವೆಂಬರ್ ಡಿಸೆಂಬರ್ನಲ್ಲಿ ಕ್ರಾಂತಿ ಎಂದು ನಾನು ಹೇಳಿದ್ದೆನು.ಕ್ರಾಂತಿ ಇಲ್ಲ ಭ್ರಾಂತಿ ಇಲ್ಲ ಎಂದು ಕಾಂಗ್ರೆಸ್ ನವರು ಹೇಳಿದ್ದರು. ಬೆಳಗಾವಿಗೆ ಹೋಗಿ ಯತೀಂದ್ರರವರು ಹೇಳಿಕೆ ನೀಡುವ ಅಗತ್ಯ ಏನಿತ್ತು.?
ಕಿರಿಕ್ ಶುರುವಾಗುವುದು ಅಲ್ಲಿಂದಲೇ.ಕಳೆದ ಸಲ ಕಾಂಗ್ರೆಸ್ ಸರ್ಕಾರ ಬೀಳುವುದು ಬೆಳಗಾವಿಯಿಂದಲೇ ಶುರುವಾಗಿತ್ತು .ಬೆಳಗಾವಿಯಿಂದಲೇ ಕಾಂಗ್ರೆಸ್ ಸರ್ಕಾರ ಪತನಕ್ಕೆ ಯತೀಂದ್ರ ಗುದ್ದಲಿ ಪೂಜೆ ಹಾಕಿದ್ದಾರೆ. ನಮ್ಮ ಹೇಳಿಕೆ ಸುಳ್ಳು ಅಂದಿದ್ದರು. ಈಗ ನಿಜ ಆಗುತ್ತಿದೆ.ಅಭಿವೃದ್ಧಿ ವಿಚಾರ ಡೈವರ್ಟ್ಗೆ ಯತೀಂದ್ರ ಹುಳ ಬಿಟ್ಟಿದ್ದಾರೆ ಎಂದು ವಿಧಾನ ಸಭೆಯ ವಿರೋದ ಪಕ್ಷದ ನಾಯಕರಾದ ಆರ್.ಆಶೋಕ್ ಆರೋಪಿಸಿದ್ದಾರೆ.
ಚಿತ್ರದುರ್ಗ ನಗರದ ಪ್ರವಾಸಿ ಮಂದಿರದಲ್ಲಿ ಗುರುವಾರ ಅವರನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಆವರು, ವಿಧಾನಪರಿಷತ್ ಸದಸ್ಯರಾದ ಯತೀಂದ್ರ ಸಿದ್ಧರಾಮಯ್ಯರವರ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ ಮುಖ್ಯಮಂತ್ರಿ ಸ್ಥಾನಕ್ಕೆ ಉಪಮುಖ್ಯಮಂತ್ರಿಗಳಾದ ಡಿ.ಕೆ ಶಿವಕುಮಾರ್ರವರು ಟವಲ್ ಹಾಕಿಬಿಟ್ಟಿದ್ದರು.ಆದರೆ ಡಿ.ಕೆ ಶಿವಕುಮಾರ್ಗೆ ಸಿಎಂ ಸ್ಥಾನ ತಪ್ಪಿಸಲು ಕುತಂತ್ರ ನಡೆದಿದೆ.ಕಾಂಗ್ರೆಸ್ ಆಂತರಿಕ ವಿಚಾರದ ಬಗ್ಗೆ ನಾವು ತಲೆ ಕೆಡಿಸಿಕೊಳ್ಳಲ್ಲ.ಸರ್ಕಾರ ಬಿದ್ದರೆ ಹೊಸ ಚುನಾವಣೆಗೆ ನಾವು ಸಿದ್ಧರಿದ್ದೇವೆ ಎಂದು ಆಶೋಕ್ ನುಡಿದರು.
ಸಚಿವರಾದ ಪ್ರಿಯಾಂಕ ಖರ್ಗೆರವರ ಬಗ್ಗೆ ನಾನು ಪ್ರತಿಕ್ರಿಯಿಸಲು ಹೋಗಲ್ಲ.. ದಲಿತ ಸಂಘಟನೆ ಭೀಮ್ ಆರ್ಮಿಗೆ ಪಥಸಂಚಲನ ಅಧಿಕಾರವಿದೆ… ಅವರಿಗೆ ಪಥ ಸಂಚಲನ ಮಾಡಬೇಡಿ ಎಂದು ಯಾರು ಹೇಳಿದ್ದಾರೆ.? ಪ್ರಿಯಾಂಕ ಖರ್ಗೆರವರು ಐಟಿಬಿಟಿ ಇಲಾಖೆಯಲ್ಲಿ ಅಭಿವೃದ್ಧಿ ಮಾಡಿಲ್ಲ.. ಐಟಿಬಿಟಿಯವರು ರಾಜ್ಯ ಬಿಟ್ಟು ಓಡಿ ಹೋಗುತ್ತಿದ್ದಾರೆ.. 1 ಲಕ್ಷ 30 ಸಾವಿರ ಕೋಟಿ ರೂ.. 30 ಸಾವಿರ ಉದ್ಯೋಗ ರಾಜ್ಯ ಬಿಟ್ಟು ಹೋಯಿತು.ಐಟಿಬಿಟಿ, ಇನ್ಫೋಸಿಸ್ ಅವರು ಸಹ ಸರ್ಕಾರಕ್ಕೆ ಬೈಯುತ್ತಿದ್ದಾರೆ.ಈ ರೀತಿ ಚರ್ಚೆಯಿಂದ ಅಭಿವೃದ್ಧಿ ವಿಚಾರ ವಿಷಯಾಂತರ ನಡೆಯುತಿದೆ. ಮಾಧ್ಯಮದಲ್ಲಿ ಕಿತಾಪತಿ ಸುದ್ಧಿ ಬರಬೇಕೆಂಬುದು ಮುಖ್ಯಮಂತ್ರಿಗಳ ತಂತ್ರಗಾರಿಕೆ.ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಗೆ ಗಂಗಾನದಿಯಲ್ಲಿ ಮುಳುಗಿಸಿದಂತಾಯಿತು.. ಡಿಕೆಶಿ ಯಾವತ್ತೂ ಸಿಎಂ ಆಗಬಾರದು ಆರೀತಿ ತಂತ್ರಗಾರಿಕೆ ಮಾಡಿದ್ದಾರೆ ಎಂದು ದೂರಿದರು.
ಮುಖ್ಯಮಂತ್ರಿ ಸಿದ್ಧರಾಮಯ್ಯರವರ ಗುಂಪಿನಿಂದ ತಂತ್ರಗಾರಿಕೆ ನಡೆದಿದೆ.. ಮುಖ್ಯಮಂತ್ರಿ ಸ್ಥಾನದ ಮೇಲೆ ಟವಲ್ ಹಾಕಿದ್ದ ಡಿ.ಕೆ ಶಿವಕುಮಾರ್ ಗೆ ನಿರಾಸೆಯಾಗಿದೆ. ಈ ರಾಜ್ಯ ಕಾಂಗ್ರೆಸ್ ಸರ್ಕಾರ ಬಹಳ ದಿನ ಇರಲ್ಲ..ಕಾಂಗ್ರೆಸ್ ಸರ್ಕಾರ ನೆಗೆದುಬಿದ್ದು ಹೊರಟು ಹೋಗುತ್ತದೆ. ಎಂದ ಅವರು ಚಿತ್ತಾಪುರ ವಿಚಾರಕ್ಕೆ ಪ್ರತಿಕ್ರಿಯಿಸಿ ಆರ್.ಎಸ್.ಎಸ್ ನವರು ಸಮರ್ಥರಿದ್ದು ಉತ್ತರಿಸುತ್ತಾರೆ… ಆರ್.ಎಸ್.ಎಸ್ ಗೂ ನಮಗೂ ರಾಜಕೀಯ ಸಂಬಂಧ ಇಲ್ಲ.ಆರ್.ಎಸ್.ಎಸ್ ರಾಷ್ಟ್ರೀಯತೆಯ ಸಂಸ್ಥೆ, ದೇಶಕ್ಕಾಗಿ ತನು ಮನ ಧನ ತ್ಯಾಗ ಮಾಡುವ ಸಂಸ್ಥೆ.. ಆರ್.ಎಸ್. ಎಸ್ಗೂ ಬಿಜೆಪಿಗೂ ಹೋಲಿಕೆ ಸಲ್ಲದು.ಬಿಜೆಪಿ ರಾಜಕೀಯ ಪಕ್ಷ.. ಆರ್.ಎಸ್.ಎಸ್ ಸಾಮಾಜಿಕ ಸಂಸ್ಥೆ. ಆರ್.ಎಸ್.ಎಸ್ ನಲ್ಲಿ ಜಾತೀಯತೆ ಇಲ್ಲ.. ಮೇಲೂ ಕೀಳು ಎಂಬುದಿಲ್ಲ.. ಆರ್.ಎಸ್.ಎಸ್ ನಲ್ಲಿ ಜಾತಿಯ ಕಾಲಂ ಇಲ್ಲ.. ದೇಶದಲ್ಲಿನ ಎಲ್ಲಾ ಸಮುದಾಯದವರು ಆರ್.ಎಸ್.ಎಸ್ ನಲ್ಲಿದ್ದಾರೆ ಎಂದರು.