ಕರ್ನೂಲ್: ಹೈದರಾಬಾದ್ ನಿಂದ ಬೆಂಗಳೂರಿಗೆ ತೆರಳುತ್ತಿದ್ದ ಖಾಸಗಿ ಬಸ್ ಆಂಧ್ರಪ್ರದೇಶದ ಕರ್ನೂಲು ಬಳಿ ಬೆಂಕಿ ತಗುಲಿದ್ದು, ಹಲವರು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.
ಸುಮಾರು 8 ರಿಂದ 10 ಜನ ಸಜೀವನವಾಗಿರುವ ಶಂಕೆ ಇದೆ. ಬಸ್ ನಲಿದ್ದ ಇಪ್ಪತ್ತು ಜನ ಗಾಯಗೊಂಡಿದ್ದು, ಕರ್ನೂಲು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಕಾವೇರಿ ಟ್ರಾವೆಲ್ಸ್ ಗೆ ಸೇರಿದ ಬಸ್ ಹೊತ್ತಿ ಉರಿದಿದೆ. ಚಿನ್ನಟೇಕೂರು ಗ್ರಾಮದ ಬಳಿ ದುರ್ಘಟನೆ ನಡೆದಿದೆ. ಬಸ್ ನಲ್ಲಿ ಸುಮಾರು 30ಕ್ಕೂ ಅಧಿಕ ಪ್ರಯಾಣಿಕರು ಇದ್ದ ಮಾಹಿತಿ ಗೊತ್ತಾಗಿದೆ. ಮುಂಜಾನೆ 3ರಿಂದ 4 ಗಂಟೆ ನಡುವೆ ಘಟನೆ ನಡೆದಿದೆ.






























