ಚಿತ್ರದುರ್ಗ: ಕಲೆಗೆ ಜೀವವನ್ನು ತುಂಬಿ ಎಲ್ಲರ ಮುಂದೆ ಪ್ರದರ್ಶನ ಮಾಡಿ ಬೇರೆಯವರನ್ನ ಸಂತಸಪಡಿಸುವ ವ್ಯಕ್ತಿ ಯಾರಾದರೂ ಇದ್ದರೆ ಅದು ಕಲಾವಿದರು ಮಾತ್ರ ಎಂದು ಕಬಿರಾನಂದ ಮಠದ ಶ್ರೀಶಿವಲಿಂಗಾನಂದಮಹಾ ಸ್ವಾಮೀಜಿ ತಿಳಿಸಿದರು.
ನಗರದ ರೋಟರಿ ಬಾಲ ಭವನದಲ್ಲಿ ಭಾನುವಾರ ಸಂಜೆ ಜಿಲ್ಲಾ ಸಾಂಸ್ಕೃತಿಕ ಕಲಾವಿದರ ಸಂಘದ ವತಿಯಿಂದ ಕಲಾವಿದರಿಗೆ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು, ದೇವರು ವಿಶೇಷವಾದ ಕಲೆಯನ್ನ ಕಲಾವಿದರಿಗೆ ವರದಾನವಾಗಿ ನೀಡಿದ್ದಾನೆ, ಇಂತಹ ಕಲೆಗಳ ಮೂಲಕ ರಾಜ್ಯ ದೇಶದ ವ್ಯಾಪ್ತಿ ಜಿಲ್ಲೆಯ ಕಲಾವಿದರು ತಮ್ಮ ಕಲೆಯನ್ನು ಪ್ರದರ್ಶಿಸಿ ಜಿಲ್ಲೆಗೆ ಉತ್ತಮ ಹೆಸರನ್ನು ತನ್ನಿ ಎಂದು ಆಶಿಸಿದರು.
ವಿಧಾನಪರಿಷತ್ ಶಾಸಕ ಕೆಎಸ್ ನವೀನ್ ಮಾತನಾಡಿ ಕಲೆ ಎಂಬುದು ಯಾರ ಮನೆಯ ಸ್ವತ್ತಲ್ಲ, ಕಲೆ ಇದ್ದವರು ಜಗತ್ತಿನಲ್ಲಿ ಗುರುತಿಸಿಕೊಳ್ಳುತ್ತಾರೆ, ಚಿತ್ರದುರ್ಗ ಜಿಲ್ಲೆಯಲ್ಲಿ ಸಾಕಷ್ಟು ಕಲಾವಿದರು ವಿಶ್ವಪ್ರಸಿದ್ಧಿಯನ್ನು ಪಡೆದಿದ್ದಾರೆ ನಮ್ಮ ಜಿಲ್ಲೆಯ ಕಲಾವಿದರು ಎಂದು ಹೇಳಿಕೊಳ್ಳುವುದಕ್ಕೂ ನಮಗೂ ಕೂಡ ಹೆಮ್ಮೆ ಅನಿಸುತ್ತಿದೆ ಕಲಾವಿದರು ಯುವ ಕಲಾವಿದರನ್ನು ಬೆಳೆಸುವ ಪ್ರವೃತ್ತಿಯನ್ನ ಬೆಳೆಸಿಕೊಳ್ಳಬೇಕೆಂದು ತಿಳಿಸಿದರು.
ರಾಜರ ಆಳ್ವಿಕೆಯಲ್ಲೂ ಸಹ ಕಲಾವಿದರಿಗೆ ವಿಶೇಷ ಸ್ಥಾನಮಾನಗಳನ್ನು ನೀಡಿ ಗೌರವಿಸಿದ್ದು ಕೂಡ ಇತಿಹಾಸದಲ್ಲಿ ನಾವು ನೋಡಬಹುದು, ಅದೇ ರೀತಿಯಲ್ಲಿ ಚಿತ್ರದುರ್ಗ ಜಿಲ್ಲೆಯಲ್ಲಿ ಜಾನಪದ, ಕೋಲಾಟ, ಬಯಲಾಟ, ಸೋಬಾನೆ ಪದ, ಕರೋಕೆ ಹಾಡುಗಾರರು, ನೃತ್ಯಗಾರರು, ಚಿತ್ರಕಲೆಗಾರರು ಹಾಗೂ ವಿಶೇಷ ಶೈಲಿಯ ಕಲಾವಿದರು ಕೂಡ ನಮ್ಮ ಜಿಲ್ಲೆಯಲ್ಲಿ ಇದ್ದರೆ ಎಂದು ಹೇಳುವುದಕ್ಕೆ ಸಂತಸಾಗುತ್ತದೆ ಎಂದು ತಿಳಿಸಿದರು.
ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ದಿನೇಶ್, ಕಾರ್ಯಕ್ರಮದಲ್ಲಿ ಜಿಲ್ಲೆಯಲ್ಲಿ ಕಲಾವಿದರಾಗಿ ಸೇವೆ ಸಲ್ಲಿಸಿದಂತಹ ಕರ್ನಾಟಕ ಲಲಿತಕಲಾ ಆಕಾಡೆಮಿಯ ಸದಸ್ಯರಾದ ಶ್ರೀಕಣ್ಮೇಶ್.ಸಿ .ತೋಟಪ್ಪ ಉತ್ತಂಗಿ ಹಿರಿಯ ಸಂಗೀತಗಾರರು, ಶ್ರೀಕುಮಾರಸ್ವಾಮಿ ಶ್ರೀಕುಮಾರೇಶ್ವರ ನಾಟಕ ಸಂಘ ಶ್ರೀಎಸ್.ವಿ. ಗುರುಮೂರ್ತಿ ಶಾರದಾ ಬ್ರಾಸ್ಬಂಡ್ ಚಿತ್ರದುರ್ಗಚಿತ್ರದುರ್ಗ,ಶ್ರೀಪ್ಲೂಮಿನ್‌ದಾಸ್, ಸಾಹಿತಿ ಹಾಗೂ ನಾಟಕಕಾರರು ಶ್ರೀ ಭದ್ರಿ, ಚಲನಚಿತ್ರ ನಟರು ಹಾಗೂ ಉಧ್ಯಮಿಗಳು, ಶ್ರೀ ಟಿ, ಎಂವಿರೇಶ್, ಚಿತ್ರಕಲಾವಿದರು, ಚಿತ್ರದುರ್ಗ,ಇವರುಗಳಿಗೆ ಜಿಲ್ಲಾ ಸಾಂಸ್ಕೃತಿಕ ಸಂಘದ ವತಿಯಿಂದ ಸನ್ಮಾನಿಸಿದ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ನಗರಸಭೆ ಮಾಜಿ ಅಧ್ಯಕ್ಷೆ ಸುನಿತಾ ಮಲ್ಲಿಕಾರ್ಜುನ್,ಅಧ್ಯಕ್ಷರಾದ ಕರಿಯಪ್ಪ.ಸಿ. ಗೌರವಾಧ್ಯಕ್ಷ ಗೌಸ್‌ಪೀರ್, ಖಜಾಂಜಿ ಉದಯ ರಾವ್, ಮನು ಮಾರುತಿ, ಪ್ರೇಮಲತಾ, ನಿಂಗರಾಜ್,ನಾಗವೇಣಿ, ನಿಜಲಿಂಗಪ್ಪ, ಹುಲಿಗಪ್ಪ, ಶ್ರೀನಾಥ್, ಶ್ರೀಕಾಂತ್ ಇತರರು ಇದ್ದರು. ಹರೀಶ್, ಸ್ವಾಗತಿಸಿದರು, ಗಂಗಾಧರ್ ನಿರೂಪಿಸಿದರು,
































