ಚಿತ್ರದುರ್ಗ : ಚಿತ್ರದುರ್ಗ ಸರ್ಕಾರಿ ಬಿಎಸ್ಸಿ ನರ್ಸಿಂಗ್ ಕಾಲೇಜಿನಲ್ಲಿ ಭರ್ತಿಯಾಗದೆ ಉಳಿದಿರುವ 28 ಸೀಟುಗಳಿಗೆ, ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ನಲ್ಲಿ ನೋಂದಾಯಸಿದ, ಹಾಗೂ ಸಿ.ಇ.ಟಿ ನೋಂದಣಿ ಸಂಖ್ಯೆ ಹೊಂದಿರುವ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಮೆರಿಟ್ ಆಧಾರದ ಮೇಲೆ ನಿಯಮಾನುಸಾರ ಸೀಟು ಹಂಚಿಕೆ ಮಾಡಲಾಗುವುದು. ದಾಖಲಾತಿ ಪಡೆಯಲು ಇಚ್ಚಿಸುವ ಅರ್ಹ ಅಭ್ಯರ್ಥಿಗಳು ಅಕ್ಟೋಬರ್ 29 ಸಂಜೆ 5 ಗಂಟೆಯ ಒಳಗಾಗಿ, ಜಿಲ್ಲಾ ಆಸ್ಪತ್ರೆ ಆವರಣದಲ್ಲಿರುವ ಹೊಸ ತಾಯಿ ಮಕ್ಕಳ ಆಸ್ಪತ್ರೆ 3 ಮಹಡಿಯಲ್ಲಿರುವ ಬಿ.ಎಸ್ಸಿ. ನರ್ಸಿಂಗ್ ಕಾಲೇಜಿಗೆ ಅರ್ಜಿ ಸಲ್ಲಿಸಬೇಕು.
ಅಕ್ಟೋಬರ್ 30 ರಂದು ಕೌನ್ಸಿಲಿಂಗ್ ನಡೆಸಿ ಮಧ್ಯಾಹ್ನ 1 ಗಂಟೆಯ ನಂತರ ಸೀಟು ಹಂಚಿಕೆ ಮಾಡಲಾಗುವುದು. ಅಭ್ಯರ್ಥಿಗಳು ಸಂಜೆ 5 ಗಂಟೆಯ ಒಳಗಾಗಿ ಕಾಲೇಜಿಗೆ ವರದಿ ಮಾಡಿಕೊಳ್ಳಬೇಕು ಎಂದು ಜಿಲ್ಲಾ ಶಸ್ತçಚಿಕಿತ್ಸಕ ಡಾ.ಎಸ್.ಪಿ.ರವೀಂದ್ರ ತಿಳಿಸಿದ್ದಾರೆ.

































