ಬೆಂಗಳೂರು: ಮನೆಯ ಬಾಲ್ಕನಿಯಿಂದ ಬಿದ್ದು 3 ವರ್ಷದ ಮಗು ಸಾವನ್ನಪ್ಪಿದ ಘಟನೆ ಬೆಂಗಳೂರಿನ ಕೋಣನಕುಂಟೆಯವೀವರ್ಸ್ ಕಾಲನಿಯಲ್ಲಿ ಸಂಭವಿಸಿದೆ.
ಆಟವಾಡುತ್ತಿದ್ದಾಗ ವಸತಿ ಕಟ್ಟಡದ 2ನೇ ಮಹಡಿಯ ಬಾಲ್ಕನಿಯಿಂದ ಆಕಸ್ಮಿಕವಾಗಿ ಬಿದ್ದು ವಿನೋದ್ ಕುಮಾರ್- ಕಾವ್ಯಾ ದಂಪತಿ ಪುತ್ರ ವೇಹಂತ್(3) ಮಗು ಮೃತಪಟ್ಟಿದೆ.
ಆಟವಾಡುತ್ತಿದ್ದ ಮಗು ಬಾಲ್ಕನಿ ಬಳಿ ಬಂದು ಆಯತಪ್ಪಿ ಕೆಳಗೆ ಬಿದ್ದಿದ್ದು ಕೂಡಲೇ ಸ್ಥಳೀಯರು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅದರೆ, ಮಗು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದೆ.

































