ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಮಾಜಾಳಿಯಲ್ಲಿ ಖಾಸಗಿ ಬಸ್ ನಲ್ಲಿ 1 ಕೋಟಿ ರೂಪಾಯಿ ಹಣ ಅಕ್ರಮ ಸಾಗಾಟ ಮಾಡುತ್ತಿದ್ದ ವೇಳೆ ಹಣದ ಸಮೇತ ಇಬ್ಬರನ್ನು ವಶಕ್ಕೆ ಪದೆದಿರುವ ಘಟನೆ ನಡೆದಿದೆ.
ಗೋವಾದಿಂದ ಬೆಂಗಳೂರಿಗೆ 1 ಕೋಟಿ ರೂ ಹಣವನ್ನು ಸಾಗಿಸಲಾಗುತ್ತಿತ್ತು. ಮಾಜಾಳಿ ಚಕ್ ಪೋಸ್ಟ್ ನಲ್ಲಿ ಬಸ್ ಪರಿಶೀಲನೆ ನಡೆಸಿದಾಗ ಈ ಹಣ ಪತ್ತೆಯಾಗಿದೆ. ಕಲ್ಪೇಶಕುಮಾರ್ ಹಾಗೂ ಬೊಂಬ್ರಾ ರಾಮ್ ಎಂಬುವವರ ಬ್ಯಾಗ್ ನಲ್ಲಿ ಹಣ ಪತ್ತೆಯಾಗಿದೆ.
ದಾಖಲೆ ಇಲ್ಲದೇ ಹಣ ಸಾಗಾಟ ಮಾಡಲಾಗುತ್ತಿತ್ತು ಎಂಬುದು ತಿಳಿದುಬಂದಿದೆ. Mxon ಎಲೆಕ್ಟ್ರಿಕ್ ಹಾರ್ಡ್ ವೇರ್ ಕಂಪನಿಗೆ ಸೇರಿದ ಹಣ ಇದಾಗಿದ್ದು, ತೆರಿಗೆ ತಪ್ಪಿಸಲು ಬ್ಯಾಗ್ ನಲ್ಲಿ ಹಣವನ್ನು ಸಾಗಿಸಲಾಗುತ್ತಿತ್ತು. ಇಬ್ಬರನ್ನು ವಶಕ್ಕೆ ಪಡೆದಿರುವ ಪೊಲೀಸರು ಹಣವನ್ನು ಐಟಿ ಅಧಿಕಾರಿಗಳಿಗೆ ಹಸ್ತಾಂತರ ಮಾಡಿದ್ದಾರೆ,!

































