ಮುಂಬೈ : ಕೊಳೆಗೇರಿಯಲ್ಲಿ ಬೆಳೆದ ಹುಡುಗ ದೊಡ್ಡ ಅಧಿಕಾರಿಯಾಗಿದ್ದಾನೆ. ಸತತ ಪ್ರಯತ್ನ ಬಳಿ ಯುಪಿಎಸ್ಸಿ ಪಾಸ್ ಮಾಡಿ IRS ಆಗಿರುವ ಯುವಕನ ಕಥೆ ಇಲ್ಲಿದೆ.
ಮುಂಬೈನ ಕೊಳೆಗೇರಿಯಲ್ಲಿ ಬೆಳೆದ ಸೈಯದ್ ಹುಸೇನ್ ಅವರ ಸಹೋದರ ಮತ್ತು ತಂದೆ ಡಾಕ್ ಯಾರ್ಡ್ ನಲ್ಲಿ ಕೆಲಸಗಾರರಾಗಿದ್ದರು. ಬಡ ಕುಟುಂಬದಿಂದ ಬಂದ ಹುಸೇನ್ UPSC ಪರೀಕ್ಷೆಯಲ್ಲಿ ಉತ್ತೀರ್ಣರಾದ ನಂತರ IRS ಅಧಿಕಾರಿಯಾದರು. ಹುಸೇನ್ ಅವರ ಸ್ಪೂರ್ತಿದಾಯಕ ಕಥೆಯನ್ನು ಇಲ್ಲಿದೆ.
ಮೊಹಮ್ಮದ್ ಹುಸೇನ್ UPSC 2023 ಬ್ಯಾಚ್ ನ IRS ಅಧಿಕಾರಿ. ಮುಂಬೈನ ವಾಡಿ ಬಂದರ್ ಪ್ರದೇಶದ ಧೂಳಿನ ಸೋಲಾಪುರ ಬೀದಿಯಲ್ಲಿ ಹುಸೇನ್ ಅವರ ಮನೆ ಇತ್ತು. ಅವರ ಸಹೋದರ ಮತ್ತು ತಂದೆ ರಂಜಾನ್ ಸೈಯದ್ ಮಜಗಾಂವ್ ಡಾಕ್ ಯಾರ್ಡ್ ನಲ್ಲಿ ಕೆಲಸ ಮಾಡುತ್ತಿದ್ದರು. ಅವರ ಸಹೋದರ ಹಡಗುಕಟ್ಟೆಯಲ್ಲಿ ಕೆಲಸಗಾರರಾಗಿದ್ದರು ಮತ್ತು ಅವರ ತಂದೆ ಮೇಲ್ವಿಚಾರಕರಾಗಿದ್ದರು.
ಹುಸೇನ್ ತಮ್ಮ ಶಾಲಾ ಶಿಕ್ಷಣವನ್ನು ಡೋಂಗ್ರಿಯ ಸೇಂಟ್ ಜೋಸೆಫ್ ಶಾಲೆಯಲ್ಲಿ ಮಾಡಿದರು. ಅವರು 2018 ರಲ್ಲಿ ಮುಂಬೈನ ಎಲ್ಫಿನ್ ಸ್ಟೋನ್ ಕಾಲೇಜಿನಲ್ಲಿ ಪದವಿ ಪಡೆದರು. ಇದರೊಂದಿಗೆ ಯುಪಿಎಸ್ಸಿಗೆ ತರಬೇತಿಯನ್ನೂ ಆರಂಭಿಸಿದರು. ಅವರು ಹಜ್ ಸಮಿತಿಯ ರೆಸಿಡೆನ್ಶಿಯಲ್ ಕೋಚಿಂಗ್ ಇನ್ಸ್ಟಿಟ್ಯೂಟ್ ಕಾರ್ಯಕ್ರಮ, ಪುಣೆ ಅಕಾಡೆಮಿ ಮತ್ತು ಜಾಮಿಯಾ ಮಿಲಿಯಾ ಇಸ್ಲಾಮಿಯಾ ತರಬೇತಿಗೆ ಸೇರಿದರು.
ಹುಸೇನ್ ಅವರು ತಮ್ಮ ತಂದೆಯೊಂದಿಗೆ ಕೆಲಸದ ನಿಮಿತ್ತ ಸರ್ಕಾರಿ ಕಚೇರಿಗೆ ಹೋದಾಗ IAS ಆಗಬೇಕೆಂಬ ಕನಸು ಹುಟ್ಟಿತು. ಇದಾದ ನಂತರ ಆರ್ಥಿಕ ಸ್ಥಿತಿ, ಮನೆಯಲ್ಲಿ ಸ್ಥಳಾವಕಾಶದ ಕೊರತೆ, ಅಧ್ಯಯನಕ್ಕೆ ಪೂರಕವಾದ ವಾತಾವರಣದ ಕೊರತೆ ಮತ್ತು ನಾಗರಿಕ ಸೇವಾ ಪರೀಕ್ಷೆಯ ಬಗ್ಗೆ ಬಹಳ ಕಡಿಮೆ ಮಾಹಿತಿ ಮತ್ತು ಮಾರ್ಗದರ್ಶನದ ಕೊರತೆಯಂತಹ ಸವಾಲುಗಳನ್ನು ಎದುರಿಸುವ ಮೂಲಕ ಹುಸೇನ್ ತಮ್ಮ ಪ್ರಯಾಣವನ್ನು ಯಶಸ್ವಿಯಾಗಿ ಮುಗಿಸಿದ್ದಾರೆ. ಹುಸೇನ್ UPSC 2022 ಪರೀಕ್ಷೆಯಲ್ಲಿ 27 ನೇ ವಯಸ್ಸಿನಲ್ಲಿ ಅಖಿಲ ಭಾರತ 570 ರ್ಯಾಂಕ್ ನೊಂದಿಗೆ ಐದನೇ ಪ್ರಯತ್ನದಲ್ಲಿಉತ್ತೀರ್ಣರಾದರು.
































