ದಾವಣಗೆರೆ: ದಾವಣಗೆರೆ ನಗರದ ಎಮ್. ಸಿ.ಸಿ. ಎ. ಬ್ಲಾಕ್ ನಲ್ಲಿರುವ ನಾಗಮ್ಮ ಕೇಶವಮರ‍್ತಿ ಸಭಾಂಗಣದಲ್ಲಿ ಇತ್ತಿಚಿಗೆ ನಡೆದ ವಿಶ್ವರೂಪಂ ಸ್ಟುಡಿಯೋ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ರಾಜ್ಯಮಟ್ಟದ ನೃತ್ಯ ಪ್ರದರ್ಶನ ವನ್ನು ಆಯೋಜಿಸಲಾಗಿತ್ತು.
ಈ ಸ್ಪರ್ಧೆಗಳಲ್ಲಿ ರಾಜ್ಯದ ಅನೇಕ ಜಿಲ್ಲೆಗಳಿಂದ ವಿವಿಧ ನೃತ್ಯ ಸ್ಪರ್ಧಾಳುಗಳು ಭಾಗವಹಿಸಿದ್ದರು. ಈ ಕರ್ಯಕ್ರಮವನ್ನು ದಾವಣಗೆರೆ ಜಿಲ್ಲಾ ಕನ್ನಡ ಚಳುವಳಿ ನೂತನ ಜಿಲ್ಲಾ ಅಧ್ಯಕ್ಷರಾದ ಶಿವರತನ್ ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಎಲ್ಲಾ ನೃತ್ಯಪಟುಗಳು ತಮ್ಮ ಪ್ರತಿಭೆ ತೋರಿಸಲಿಕ್ಕೆ ಇದು ಒಂದು ಉತ್ತಮ ವೇದಿಕೆಯಾಗಿದೆ ಸ್ಪರ್ಧೆ ಅಂದಮೇಲೆ ಸೋಲು ಗೆಲುವು ಸಾಮಾನ್ಯ ಹಾಗೂ ಈ ಸ್ಪರ್ಧೆಗೆ ಉತ್ತಮವಾದಂತ ತೀರ್ಪುಗಾರರು ಇರುವುದರಿಂದ ಕಾರ್ಯಕ್ರಮ ಉತ್ತಮವಾಗಿ ಯಶಸ್ವಿಯಾಗುತ್ತದೆ ಯಾರಿಗೂ ಸಂದೇಹ ಬೇಡ ನಿಮ್ಮೆಲ್ಲರ ಬಹುಷ್ಯ ಉತ್ತಮವಾಗಲಿ ಒಳ್ಳೆಯ ಪ್ರರ್ಧಶನನೀಡಿ ಈ ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.
ಇವರೊಂದಿಗೆ ವರ‍್ತಾ ಇಲಾಖೆ ನಿವೃತ್ತ ನೌಕರ ರ‍್ವೋತ್ತಮ ಸೇವ ಪ್ರಶಸ್ತಿ ಪುರಸ್ಕೃತರಾದ. ಬಿ. ಎಸ್. ಬಸವರಾಜ್. ದಾ.ಹ. ಶಿವಕುಮಾರ್. ನೃತ್ಯ ಶಿಕ್ಷಕರು. ಹಾಗೂ ನೃತ್ಯ ಕ್ರೀಡಾಪಟುಗಳು ಆಯೋಜಕರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
































