ನವದೆಹಲಿ: ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ ಇಳಿಕೆ ಮಾಡಲಾಗಿದೆ. ಹೊಸ ದರಗಳು ಜಾರಿಗೆ ಬಂದಿವೆ.
ಸರ್ಕಾರಿ ಸ್ವಾಮ್ಯದ ತೈಲ ಮಾರುಕಟ್ಟೆ ಕಂಪನಿಗಳು ಈ ಬೆಲೆ ಕಡಿತ ಘೋಷಿಸಿದ್ದು, ಪ್ರತಿ ಸಿಲಿಂಡರ್ ಬೆಲೆಯಲ್ಲಿ 5 ರೂಪಾಯಿ ಕಡಿತ ಆಗಿದೆ. ಹೊಸ ದರಗಳು ಇಂದಿನಿಂದ ಜಾರಿಗೆ ಬಂದಿದ್ದು, ದೇಶದ ವಿವಿಧ ಭಾಗಗಳಲ್ಲಿ 19 ಕೆಜಿ ತೂಕದ ವಾಣಿಜ್ಯ ಗ್ಯಾಸ್ ಸಿಲಿಂಡರ್‌ಗಳ ಬೆಲೆ ಕಡಿಮೆಯಾಗಿದೆ.
ಇಂಡಿಯನ್ ಆಯಿಲ್ ಕಾರ್ಪೊರೇಷನ್ ಮಾಹಿತಿಯ ಪ್ರಕಾರ, ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ಚಿಲ್ಲರೆ ಬೆಲೆ 1590.50 ರೂ.ಗೆ ಇಳಿದಿದೆ. ಈ ಹಿಂದೆ ಇದರ ಬೆಲೆ 1595.50 ರೂ. ಇತ್ತು.
ಪ್ರತಿ ಸಿಲಿಂಡರ್‌ಗೆ 5 ರೂಪಾಯಿಯಷ್ಟು ಕಡಿತಗೊಂಡಿದೆ. ಕೋಲ್ಕತ್ತಾದಲ್ಲಿ 6.50 ರೂ. ಇಳಿಕೆಯಾಗಿದ್ದು, ಪ್ರತಿ ಸಿಲಿಂಡರ್ ಬೆಲೆ 1,694 ರೂ.ಗೆ ಮಾರಾಟವಾಗ್ತಿದೆ. ಚೆನ್ನೈನಲ್ಲಿ 1,750 ರೂ. (4.50 ರೂ. ಇಳಿಕೆ), ಮುಂಬೈನಲ್ಲಿ 1,542 ರೂ. (5 ರೂ. ಇಳಿಕೆ) ಗಳಿಗೆ ಮಾರಾಟವಾಗುತ್ತಿದೆ.ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ ಮತ್ತು ಹಳೆಯ ದರಗಳೇ ಮುಂದುವರಿಯಲಿವೆ.






























