ಕ್ಯಾನ್ಸರ್ ಅಂದರೆ ಅನೇಕರು ಭಯಗೊಳ್ಳುವ ಕಾಯಿಲೆ. ಆದರೆ ಈಚೆಗೆ ಅಂತಹ ಪ್ರಕರಣಗಳು ಹೆಚ್ಚಾಗುತ್ತಿವೆ, ಹೀಗಾಗಿ ಅದೊಂದು ಸಾಮಾನ್ಯ ಕಾಯಿಲೆ ಎನ್ನುವ ಹಾಗೆ ಆಗಿದೆ. ಈ ರೋಗಕ್ಕೆ ಚಿಕ್ಕ ಮಕ್ಕಳು ಅಥವಾ ವಯಸ್ಸಾದವರು ಗಂಡು ಹೆಣ್ಣು ಎಂಬ ವಿಧವಿಲ್ಲ ಹೆಚ್ಚಿನ ಸಂಖ್ಯೆಯಲ್ಲಿ ಈ ರೋಗ ಕಾಣುತ್ತಿದೆ. ಇದಕ್ಕೆ ಕಾರಣಗಳು ಹಲವಾರು. ಹಾಗಿದ್ದರೆ ಕ್ಯಾನ್ಸರ್ ತಡೆಗೆ ಏನು ಪ್ರಯತ್ನ ನಾವು ಮಾಡಬಹುದು..?
ಹತ್ತು ವರ್ಷಗಳ ಹಿಂದೆ ಒಂದು ಇಬ್ಬರಲ್ಲಿ ಈ ಕಾಯಿಲೆ ಕಂಡರೆ ಸಾವು ಖಚಿತ ಯಾವುದೇ ಔಷಧಗಳಿಲ್ಲ ಎಂದು ವೈದ್ಯರೇ ಹೇಳುತ್ತಿದ್ದರು. ಆದರೆ ಇಂದು ಹಾಗಲ್ಲ ಕಾಲ ಬದಲಾಗಿದೆ. ಮಹಾಮಾರಿ ಕ್ಯಾನ್ಸರ್ ರೋಗ ಬರುವ ಲಕ್ಷಣಗಳನ್ನು ಮುಂಚೆನೇ ಪತ್ತೆಹಚ್ಚಲು ಸಾಧ್ಯವಾಗುತ್ತದೆ. ಕಾಯಿಲೆ ಬರುವ ಮುನ್ನವೇ ನಾವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡರೆ ಉತ್ತಮವಾಗಿರುತ್ತದೆ. ಬ್ಲೂಬೆರ್ರಿಗಳೂ, ಬ್ಲ್ಯಾಕ್ಬೆರ್ರಗಳು ಹಣ್ಣು ಆಂಥೋಸಯಾನೀನ್ಗಳು, ಎಲಾಜಿಕ್ ಆಮ್ಲ ಮತ್ತು ಫ್ಲೇವನಾಯ್ಡ್ ಗಳಂತಹ ಉತ್ಕರ್ಷಣ ನಿರೋಧಕಗಳಲ್ಲಿ ಸಮೃಧವಾಗಿದೆ. ಇದರಿಂದ ಕ್ಯಾನ್ಸರ್ ಬೆಳವಣಿಗೆಯಲ್ಲಿ ಪ್ರಮುಖ ಅಂಶವಾಗಿರುವ ಫ್ರೀ ರಾಡಿಕಲ್ ಗಳಿಂದ ಉಂಟಾಗುವ ಹಾನಿಯಿಂದ ಡಿಎನ್ಎ ಯನ್ನು ರಕ್ಷಿಸುತ್ತವೆ. ಹೊಟ್ಟೆಯ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುವಲ್ಲಿ ಕಿವಿ ಹಣ್ಣು ಮುಖ್ಯ ಪಾತ್ರವಹಿಸುತ್ತದೆ. ಏಕೆಂದರೆ ಇದರಲ್ಲಿ ವಿಟಮಿನ್ ಸಿ, ಪೈಬರ್, ಕ್ಯಾರೊಟಿನಾಯ್ಡ್ಗಳು ಮತ್ತು ಪಾಲಿಫಿನಾಲ್ ಗಳಂತಹ ಉತ್ಕರ್ಷಣ ನಿರೋಧಕಗಳನ್ನು ಹೊಂದಿದ್ದು, ಇದು ಜೀವಕೋಶಗಳನ್ನು ಡಿಎನ್ಎ ಹಾನಿಯಿಂದ ರಕ್ಷಿಸುತ್ತದೆ. ಇನ್ನು ಕಚ್ಚಾ ಸೋಯಾಬೀನ್ ಗಳು ದೇಹದಲ್ಲಿನ ಈಸ್ಟ್ರೋಜೆನ್ ಗ್ರಾಹಕಗಳ ಮೇಳೆ ಪರಿಣಾಮ ಬೀರುತ್ತದೆ. ಸಂಶೋಧನೆಯ ಪ್ರಕಾರ ಈ ಸಂಯುಕ್ತಗಳು ಸ್ತನ ಮತ್ತು ಪ್ರಾಸ್ಟೇಟ್ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡಲು ಸಹಾಯ ಮಾಡುತ್ತದೆ.
ಬೀನ್ಸ್ ಪೈಬರ್ ಪ್ರೋಟೀನ್ ಮತ್ತು ಉತ್ಕರ್ಷಣ ನಿರೋಧಕಗಳ ಅತ್ಯುತ್ತಮ ಮೂಲವಾಗಿದೆ. ಪೈಬರ್ ಸೇವನೆಯು ಸರಿಯಾದ ಜೀರ್ಣಕ್ರಿಯೆಯನ್ನು ಉತ್ತೇಜಿಸುತ್ತದೆ ಮತ್ತು ದೇಹದಿಂದ ವಿಷವನ್ನು ಹೊರಹಾಕುತ್ತದೆ, ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ. ತರಕಾರಿಗಳು ತಿನ್ನಲು ದೂರ ಮಾಡುವವರು ಯೋಚನೆ ಮಾಡಿಕೊಳ್ಳಬೇಕು. ಏಕೆಂದರೆ, ಮಹಾಮಾರಿ ಕ್ಯಾನ್ಸರ್ ಅನ್ನು ತಡೆಯುವ ಶಕ್ತಿಯಿರುವುದೇ ತರಕಾರಿಗಳಿಂದ ಇದರಿಂದ ಅದೇಷ್ಟೋ ಪ್ರೋಟೀನ್ ಗಳು ನಮ್ಮ ದೇಹಕ್ಕೆ ಉಪಯೋಗಳನ್ನು ನೀಡಿದೆ. ಇಷ್ಟು ಮಾತ್ರವಲ್ಲ ಹೂಕೂಸು, ನೇರಳೆ ಬಣ್ಣದ ಸಿಹಿಗೆಣಸು ಸಹ ಕ್ಯಾನ್ಸರ್ ತಡೆಯುವಲ್ಲಿ ಸಹಾಕಾರಿಯಾಗಿದೆ.

































