ಬೆಂಗಳೂರು: ನವೆಂಬರ್ ಆರಂಭದಲ್ಲೇ ರಾಜ್ಯದಲ್ಲಿ ಚಳಿಯು ವಾತಾವರಣ ಕಂಡು ಬಂದಿದೆ. ದಿನೇ ದಿನೇ ಚಳಿಯ ಪ್ರಮಾಣ ಹೆಚ್ಚಾಗತೊಡಗಿದ್ದು, 10ಕ್ಕೂ ಜಿಲ್ಲೆಗಳಲ್ಲಿ ಚಳಿ ಹೆಚ್ಚಾಗಿದೆ.
ಸಾಮಾನ್ಯವಾಗಿ ನವೆಂಬರ್ ಕೊನೆಯ ವಾರ ಇಲ್ಲವೇ ಡಿಸೆಂಬರ್ ಮೊದಲ ವಾರ ಚಳಿಗಾಲ ಶುರುವಾಗುತ್ತದೆ. ಈ ಬಾರಿ ನವೆಂಬರ್ ಮೊದಲ ವಾರವೇ ಚಳಿಯ ತೀವ್ರತೆ ಹೆಚ್ಚಾಗಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಾಗುವ ಸಂಭವ ಇದೆ ಎನ್ನಲಾಗಿದೆ.
ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಮೈಸೂರು, ಮಂಡ್ಯ, ಹಾಸನ, ಚಾಮರಾಜನಗರ, ಶಿವಮೊಗ್ಗ, ಉಡುಪಿ, ದಕ್ಷಿಣ ಕನ್ನಡ, ದಾವಣಗೆರೆ, ಧಾರವಾಡ, ಬೀದರ್, ಬೆಳಗಾವಿ, ತುಮಕೂರು, ಚಾಮರಾಜನಗರ ಮೊದಲಾದ ಕಡೆಗಳಲ್ಲಿ ಬೆಳಗಿನ ಉಷ್ಣಾಂಶ ತೀವ್ರ ಕುಸಿತವಾಗಿದೆ.
ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಶೀತ ಗಾಳಿ ಬೀಸುವ ಸಾಧ್ಯತೆ ಇದೆ. ಈ ಬಾರಿ ವಾಡಿಕೆ ಇಲ್ಲವೇ ವಾಡಿಕೆಗಿಂತ ಹೆಚ್ಚು ಚಳಿಯಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

































