ಪಾಟ್ನಾ : ಬಿಹಾರದ ಮೊದಲ ಹಂತದ ಚುನಾವಣೆ ಇಂದು ನಡೆಯಲಿದೆ. 8 ಜಿಲ್ಲೆಗಳ 121 ಕ್ಷೇತ್ರಗಳ ಮತದಾರರು ಮತದಾನದ ಮಾಡಲಿದ್ದಾರೆ.
ಮಹಾಘಟಬಂಧನದ ಮುಖ್ಯಮಂತ್ರಿ ಅಭ್ಯರ್ಥಿ ತೇಜಸ್ವಿ ಯಾದವ್, ತೇಜಸ್ವಿ ಸಹೋದರ ತೇಜ್ ಪ್ರತಾಪ್ ಯಾದವ್ (ಜನಶಕ್ತಿ ಜನತಾ ದಳ), ಬಿಜೆಪಿಯ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ , ಗಾಯಕಿ ಬಿಜೆಪಿ ಅಭ್ಯರ್ಥಿ ಮೈಥಿಲಿ ಠಾಕೂರ್ ಸೇರಿದಂತೆ 1,314 ಅಭ್ಯರ್ಥಿಗಳ ಭವಿಷ್ಯವನ್ನು 3.75 ಕೋಟಿ ಮತದಾರರು ನಿರ್ಧರಿಸಲಿದ್ದಾರೆ.
ಬಿಹಾರದಲ್ಲಿ ಆಡಳಿತರೂಢ ಎನ್ಡಿಎಗೆ ಮಹಾಘಟಬಂದನ್ ಪ್ರಬಲ ಸ್ಪರ್ಧೆ ನೀಡುವ ಸಾಧ್ಯತೆಯಿದೆ. ಈ ಎರಡೂ ಮೈತ್ರಿಗಳಿಗೆ ಹೊಸ ಪಕ್ಷಗಳು ಪೈಪೋಟಿ ನೀಡಲಿದೆ. ಲಾಲು ಪ್ರಸಾದ್ ಯಾದವ್ ಅವರ ಹಿರಿಯ ಮಗ ತೇಜ್ ಪ್ರತಾಪ್ ಯಾದವ್ ಅವರ ಹೊಸ ಪಕ್ಷ ಜನಶಕ್ತಿ ಜನತಾದಳ ಮತ್ತು ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್ಅವರು ಜನ ಸೂರಜ್ ಪಕ್ಷ ಸವಾಲು ಒಡ್ಡಲಿದೆ.
2020 ರಲ್ಲಿ ನಡೆದ ಚುನಾವಣೆಯಲ್ಲಿ ಆರ್ಜೆಡಿ 42 ಸ್ಥಾನಗಳನ್ನು ಗೆದ್ದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಬಿಜೆಪಿ 32, ಜೆಡಿ (ಯು) ಕೇವಲ 23 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಕಾಂಗ್ರೆಸ್ 8, ಎಡ ಪಕ್ಷಗಳು 11 ಸ್ಥಾನಗಳಲ್ಲಿ ಜಯಗಳಿಸಿದ್ದವು.
ಎರಡನೇ ಹಂತದ ಚುನಾವಣೆ ನ.11 ರಂದು ನಡೆಯಲಿದ್ದು ಮತ ಎಣಿಕೆ ನ.14 ರಂದು ನಡೆಯಲಿದೆ.
































