ಚಿತ್ರದುರ್ಗ : ಸರಸ್ವತಿ ಅವರು ಇತ್ತೀಚಿಗೆ ಕಿಬ್ಬೊಟ್ಟೆಯ ಪ್ಲ್ಯಾಂಕ್ ಸ್ಥಾನದ ವಿಭಾಗದಲ್ಲಿ 10 ಪೌಂಡ್ ತೂಕದ ಬ್ಯಾಗನ್ನು ಹೊತ್ತು 2 ನಿಮಿಷ 12 ಸೆಕೆಂಡುಗಳ ಸ್ಥಿರವಾಗಿ ಹಿಮ್ಮುಖ ಹೊಟ್ಟೆಯ ಮೇಲೆ ಹೆಚ್ಚು ಸಮಯ ಇರಿಸಿಕೊಂಡು ಗಿನ್ನಿಸ್ ವರ್ಡ್ ರೆಕಾರ್ಡ್ ನಿರ್ಮಿಸಿದ್ದಾರೆ.
ಗಿನ್ನಿಸ್ ವರ್ಡ್ ರೆಕಾರ್ಡ್ ಸಂಸ್ಥೆಯು 2025ನೇ ಸಾಲಿನ ಸಾಧಕರನ್ನ ಪಟ್ಟಿಯನ್ನ ಬಿಡುಗಡೆಗೊಳಿಸಿ, ಅಧಿಕೃತ ಪ್ರಮಾಣ ಪತ್ರವನ್ನ ಸರಸ್ವತಿ ಕೆ.ಸಿ ವೀರೇಂದ್ರ ಅವರಿಗೆ ನೀಡಿ ಗೌರವಿಸಿದೆ.
ಕಳೆದ 2024ನೇ ಸಾಲಿನಲ್ಲಿ ಪಾಕಿಸ್ತಾನದ ಇರ್ಫಾನ್ ಮೆಹಸೂದ್ ಅವರು 2024ರಲ್ಲಿ 100 ಪೌಂಡ್ ತೂಕದ ಬ್ಯಾಗ್ ಹೊತ್ತು 2 ನಿಮಿಷ 02 ಸೆಕೆಂಡುಗಳ ಕಾಲ ಸ್ಥಿರವಾಗಿ ಉಳಿದು ವಿಶ್ವದಾಖಲೆ ನಿರ್ಮಿಸಿದ್ದರು ಆದ್ರೆ ಭಾರತದ ಯುವತಿ ಸರಸ್ವತಿ ಕೆ.ಸಿ ವೀರೇಂದ್ರ ಅವರು ಆ ದಾಖಲೆಯನ್ನು 10 ಸೆಕೆಂಡುಗಳ ಕಾಲದ ಅಂತರದಲ್ಲಿ ಮುರಿದು, ಹೊಸ ಇತಿಹಾಸ ಬರೆದಿದ್ದಾರೆ.ಇದರಿಂದ ಭಾರತಕ್ಕೆ ಹೊಸ ಕೀರ್ತಿ, ಕರ್ನಾಟಕಕ್ಕೆ ಹೆಮ್ಮೆ ಮತ್ತು ಚಿತ್ರದುರ್ಗಕ್ಕೆ ಶಾಶ್ವತ ಗೌರವ ಲಂಬಿಸಿದೆ.
ಸರಸ್ವತಿ ಕೆ.ಸಿ ವೀರೇಂದ್ರ ಅವರು ಬೆಂಗಳೂರು ನಗರದ ಜೈನ ಇಂಟನ್ರ್ಯಾಷನಲ್ ರೆಸಿಡೆನ್ಸಿಯಲ್ ಸ್ಕೂಲ್ ನಲ್ಲಿ 9ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ತರಬೇತಿದಾರರಾದ ತುಷಾರ್ ಸೋನಾಲಿಕರ್ ಅವರ ಮಾರ್ಗ ದರ್ಶನದಲ್ಲಿ ಸರಸ್ವತಿ ಕೆ.ಸಿ ವೀರೇಂದ್ರ ತಮ್ಮ ದೈಹಿಕ ಸಾಮಥ್ರ್ಯದ ಮೂಲಕ ವಿಶ್ವ ಮಟ್ಟದಲ್ಲಿ ಗುರುತಿಸಿ ಕೊಂಡಿದ್ದಾರೆ. 2023 ನೇ ಸಾಲಿನ “ಲಾಂಗೆಸ್ಟ್ ಸಿಟ್ ಇನ್ ಥಾ ವಾಲ್ ಪೋಸಿಶನ್ ಆನ್ ಟೋ” ವಿಭಾಗದಲ್ಲಿ 2 ಗಂಟೆ 36 ಸೆಕೆಂಡುಗಳ ಕಾಲ ಸ್ಥಿರವಾಗಿ ಉಳಿದು, `ಇಂಡಿಯಾ ಬುಕ್ ಆಫ್ ರೆಕಾಡ್ರ್ಸ್” ನಲ್ಲಿ ತಮ್ಮ ಹೆಸರು ದಾಖಲಿಸಿಕೊಂಡಿದರು.
ಕಠಿಣ ಪರಿಶ್ರಮ, ಅಚಲ ನಂಬಿಕೆ ಮತ್ತು ನಿರಂತರ ಅಭ್ಯಾಸದ ಮೂಲಕ ಯಾವ ದಾಖಲೆಯಾದರೂ ಕೂಡ ಮಾಡಬಹುದು, ತಂದೆ ತಾಯಿಗಳ ಪ್ರೇರಣೆಯಿಂದ ವಿಶ್ವದ ಮಟ್ಟದಲ್ಲಿ ನನ್ನ ಹೆಸರು ಗುರುತಿಸಿಕೊಂಡಿದೆ ಅದಕ್ಕೆ ತಂದೆ ತಾಯಿಗಳ ಆಶೀರ್ವಾದ ಅತ್ಯಂತ ಮುಖ್ಯವಾಗಿದೆ ಎಂದು ಸರಸ್ವತಿ ಕೆ.ಸಿ ವೀರೇಂದ್ರ ಅವರು ತಿಳಿಸಿದ್ದಾರೆ.

































