ಜಂಕ್ ಫುಡ್ ತಿನ್ನುವವರು ನೋಡಲೇಬೇಕಾದ ಬೆಚ್ಚಿಬೀಳಿಸುವ ಸ್ಟೋರಿ ಇದು..ಜಂಕ್ ಫುಡ್ ಬಗ್ಗೆ ಎಚ್ಚರಿಕೆಯ ಮಾತುಗಳು ಆಗಿಂದಾಗ್ಗೆ ಕೇಳಿ ಬರುತ್ತವೆ. ಇದೀಗ ಅದಕ್ಕೊಂದು ಸೇರ್ಪಡೆ ಎಂಬಂತೆ ಇದೀಗ ಜಂಕ್ ಫುಡ್ ಪೊಟ್ಟಣದಲ್ಲಿ ಸಣ್ಣ ಹಾವಿನ ಮಾದರಿಯ ರೀತಿಯ ವಸ್ತುವೊಂದು ಪತ್ತೆಯಾಗಿದೆ ಎಂಬ ಆರೋಪ ಕೇಳಿ ಬಂದಿದ್ದು, ಈ ಕುರಿತ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮುಂಡಾಜೆಯ ಸೋಮಂತಡ್ಕ ಎಂಬಲ್ಲಿ ಗೂಡಂಗಡಿಯಿಂದ ಖರೀದಿಸಿದ ಹೈದರಾಬಾದ್ ವೆಜ್ ಬಿರಿಯಾನಿ- ಜಂಕ್ ಫುಡ್ ಪೊಟ್ಟಣದಲ್ಲಿ ಇದು ಪತ್ತೆಯಾಗಿದೆ ಎನ್ನಲಾಗಿದೆ. ಅಬ್ದುಲ್ ಮುಸ್ಲಿಯಾರ್ ಎಂಬವರ ಮಗಳು ಖರೀದಿಸಿದ್ದ ಜಂಕ್ ಫುಡ್ ಪೊಟ್ಟಣವನ್ನು ಬಿಡಿಸಿ ತಿನ್ನುವ ವೇಳೆ ಅದರಲ್ಲಿ ಹಾವಿನ ಮಾದರಿಯ ವಸ್ತು ಪತ್ತೆಯಾಗಿದೆ ಎಂದು ಆರೋಪಿಸಲಾಗಿದೆ.
ಅಬ್ದುಲ್ ಮುಸ್ಲಿಯಾರ್ ಅವರು ಈ ಬಗ್ಗೆ ಆರೋಗ್ಯ ಇಲಾಖೆಗೆ ದೂರು ನೀಡಿದ್ದು, ಅರೋಗ್ಯ ಇಲಾಖೆಯ ಅಧಿಕಾರಿಗಳು ಹಾವಿನ ಮಾದರಿಯ ವಸ್ತುವನ್ನು ಪರೀಕ್ಷೆಗೆ ಕಳುಹಿಸಿದ್ದಾರೆ. ತಿಂಡಿ ತಿಂದ ಮಕ್ಕಳ ಆರೋಗ್ಯ ತಪಾಸಣೆಯನ್ನು ವೈದ್ಯರು ನಡೆಸಿದ್ದು, ಸದ್ಯಕ್ಕೆ ಮಕ್ಕಳ ಆರೋಗ್ಯಕ್ಕೆ ಯಾವುದೇ ಸಮಸ್ಯೆಯಿಲ್ಲ ವೈದ್ಯರ ಮಾಹಿತಿ ನೀಡಿದ್ದಾರೆ.
































