ಚಿತ್ರದುರ್ಗ : ಚಿತ್ರದುರ್ಗ ಪಶುಪಾಲನ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ವತಿಯಿಂದ ನವೆಂಬರ್ 12 ಹಾಗೂ 13 ರಂದು ಎರಡು ದಿನಗಳ “ವೈಜ್ಞಾನಿಕ ಕುರಿ ಸಾಕಾಣಿಕೆ” ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ನಗರದ ಪಾಲಿಕ್ಲಿನಿಕ್ ಆವರಣದಲ್ಲಿರುವ ಪಶುಪಾಲನ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರದಲ್ಲಿ ತರಬೇತಿ ನಡೆಯಲಿದ್ದು, 25 ಜನರಿಗೆ ತರಬೇತಿ ನೀಡಲಾಗುವುದು. ಆಸಕ್ತ ರೈತರು ಆಧಾರ್ ಕಾರ್ಡ್ ಪ್ರತಿ, 3 ಪಾಸ್ ಪೋರ್ಟಸೈಜ್ ಪೋಟೋ, ಬ್ಯಾಂಕ್ ಪಾಸ್‌ಬುಕ್ ಪ್ರತಿ, ಪ.ಜಾತಿ ಮತ್ತು ಪ.ಪಂಗಡದವರು ಜಾತಿ ಪ್ರಮಾಣ ಪತ್ರದ ಪ್ರತಿದೊಂದಿಗೆ ನೊಂದಾಯಿಸಿಕೊಳ್ಳಬಹುದು. ತರಬೇತಿ ವೇಳೆ ಯಾವುದೇ ಪ್ರೋತ್ಸಾಹಧನ ನೀಡುವುದಿಲ್ಲ. ಹೆಚ್ಚಿನ ವಿವರಗಳಿಗಾಗಿ ಮೊಬೈಲ್ ಸಂಖ್ಯೆ 9482943111, 9886002248 ಸಂಪರ್ಕಿಸಬಹದು. ವಾಟ್ಸ್ಪ್ ಮೂಲಕವು ನೊಂದಣಿ ಮಾಡಿಕೊಳ್ಳಬಹದು ಪ್ರಕಟಣೆಯಲ್ಲಿ ತಿಳಿಸಿದೆ.

































