ಮುಂಬೈ: ಬಾಲಿವುಡ್ ಶೋ ಮ್ಯಾನ್ ಧರ್ಮೇಂದ್ರ ಅವರು ಇಂದು ಬೆಳಗ್ಗೆ ಉಸಿರಾಟ ಸಮಸ್ಯೆಯಿಂದ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ ಎಂದು ವದಂತಿ ಹಬ್ಬಿ ಮಾಧ್ಯಮಗಳಲ್ಲೆಲ್ಲಾ ಸುದ್ದಿಯಾಗಿತ್ತು.
ಅವರ ಪುತ್ರಿ ನಟಿ ಇಶಾ ಡಿಯೋಲ್ ಸ್ಪಷ್ಟನೆ ನೀಡಿದ್ದು, ನಮ್ಮ ತಂದೆಯ ಆರೋಗ್ಯ ಬಗ್ಗೆ ಮಾಧ್ಯಮಗಳು ಅತಿರೇಕದ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ಅನಿಸುತ್ತಿದೆ. ಅವರನ್ನು ವೆಂಟಿಲೇಟರ್ ನಲ್ಲಿ ಇರಿಸಲಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ































