ಬೆಂಗಳೂರು: ನಟ ಉಪೇಂದ್ರ, ಪತ್ನಿ ಪ್ರಿಯಾಂಕ ಇಬ್ಬರು ಕೊಂಚ ನಿರಾಳಗೊಂಡಿದ್ದಾರೆ. ಏಕೆಂದ್ರೆ ಕೆಲ ದಿನಗಳ ಹಿಂದೆ ನಟ ಉಪೇಂದ್ರ ದಂಪತಿಯ ಫೋನ್ ನಂಬರ್ ಹ್ಯಾಕ್ ಮಾಡಲಾಗಿತ್ತು.
ಈ ಬಗ್ಗೆ ಸ್ವತಃ ಉಪೇಂದ್ರ ಅವರೇ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಂಡು, ನನ್ನ ಹಾಗೂ ಪ್ರಿಯಾಂಕಾ ಮೊಬೈಲ್ ನಂಬರ್ ಹ್ಯಾಕ್ ಆಗಿದೆ ಎಂದು ತಿಳಿಸಿದ್ದರು. ಸಧ್ಯ ಬಿಹಾರ ಮೂಲದ ಆರೋಪಿ ವಿಕಾಸ್ ಕುಮಾರ್ ನನ್ನು ಬೆಂಗಳೂರಿನ ಸದಾಶಿವನಗರ ಪೊಲೀಸರು ಬಂಧಿಸಿದ್ದು, ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.































