ದೆಹಲಿ: ಭಾರತದಲ್ಲಿ ಕಳೆದ 30 ವರ್ಷಗಳಲ್ಲಿ ಪ್ರಕೃತಿ ವಿಕೋಪಗಳಿಂದ 80 ಸಾವಿರ ಜನರು ಮೃತಪಟ್ಟಿದ್ದಾರೆ ಎಂದು ‘ಜರ್ಮನ್ವಾಚ್’ ಕ್ರೈಮೇಟ್ ರಿಸ್ಕ್ ಇಂಡೆಕ್ಸ್ (CRI) ವರದಿ ತಿಳಿಸಿದೆ.
1995 ರಿಂದ ಚಂಡಮಾರುತ, ಪ್ರವಾಹ, ಉಷ್ಣ ಅಲೆಗಳಂತಹ ಒಟ್ಟು 430 ವಿಪತ್ತುಗಳಿಂದ 130 ಹಾಗೂ ಕೋಟಿ ಜನರು (1.3 ಬಿಲಿಯನ್) ಬಾಧಿತರಾಗಿದ್ದಾರೆ.
₹1.5 ಲಕ್ಷ ಕೋಟಿ ನಷ್ಟ ಉಂಟಾಗಿದೆ’ ಎನ್ನಲಾಗಿದೆ. ವಿಶ್ವದ ಅತ್ಯಂತ ಹೆಚ್ಚು ಪೀಡಿತ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ 9ನೇ ಸ್ಥಾನದಲ್ಲಿದೆ. ಡೊಮಿನಿಕಾ ಮೊದಲ ಸ್ಥಾನದಲ್ಲಿದೆ ಎಂದು ತಿಳಿದುಬಂದಿದೆ.































