ನವದೆಹಲಿ: ಕೆಂಪು ಕೋಟೆಯ ಬಳಿ 12 ಜೀವಗಳನ್ನು ಬಲಿ ಪಡೆದ ಭಾರೀ ಸ್ಫೋಟದ ಒಂದು ದಿನದ ಬಳಿಕ ಪ್ರಧಾನಿ ನರೇಂದ್ರ ಮೋದಿ ಬುಧವಾರ (ನ.12) ಸಂಜೆ 5:30ಕ್ಕೆ ಭದ್ರತೆ ಕುರಿತ ಸಂಪುಟ ಸಮಿತಿಯ (ಸಿಸಿಎಸ್) ಸಭೆ ನಡೆಸಲಿದ್ದಾರೆ.
ಭೂತಾನ್ನಿಂದ ಹಿಂತಿರುಗಿದ ನಂತರ ಸಂಜೆ ಪ್ರಧಾನಿ ನರೇಂದ್ರ ಮೋದಿ ಅವರು ಭದ್ರತೆ ಕುರಿತ ಉನ್ನತ ಮಟ್ಟದ ಕ್ಯಾಬಿನೆಟ್ ಸಮಿತಿ (ಸಿಸಿಎಸ್) ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ. ಈ ಮಧ್ಯೆ, ಸ್ಫೋಟದಲ್ಲಿ ಗಾಯಗೊಂಡು LNJP ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರನ್ನು ಪ್ರಧಾನಿ ಭೇಟಿಯಾಗಿ ಆರೋಗ್ಯ ವಿಚಾರಿಸಿದರು. ನವೆಂಬರ್ 10 ರಂದು ದೆಹಲಿಯನ್ನು ಬೆಚ್ಚಿಬೀಳಿಸಿದ ಸ್ಫೋಟದಲ್ಲಿ ಕನಿಷ್ಠ 12 ಜನರು ಸಾವನ್ನಪ್ಪಿದ್ದರು. ಅಪರಾಧದ ರೂವಾರಿಗಳನ್ನು ಶಿಕ್ಷಿಸುವುದಾಗಿ ಸರ್ಕಾರ ಭರವಸೆ ನೀಡಿದೆ































