ಚಿತ್ರದುರ್ಗ: ಸ್ವಾತಂತ್ರ್ಯ ಹೋರಾಟಕ್ಕೆ ಪ್ರಾರಂಭವಾದ ಕಾಂಗ್ರೆಸ್ ಸೇನಾನಿಯ ಸಂಘಟನೆಯಾಗಿತ್ತು.. ಅದು ರಾಜಕೀಯ ಪಕ್ಷವಾಗಿರಲಿಲ್ಲ.ಈ ಮೇಳಕ್ಕೆ ರಾಜಕೀಯ ಅಣೆಪಟ್ಟಿ ಕಟ್ಟಬಾರದು.ಪ್ರತಿಯೊಬ್ಬ ನಾಗರೀಕನ ಹಂತರಂಗದಲ್ಲಿ ಸ್ವದೇಶಿಯ ಭಾವನೆ ಮೂಡಬೇಕು ಎಂದು ಸಿರಿಗೆರೆಯ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದ ಶ್ರೀ 1108 ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಕರೆ ನೀಡಿದರು.
ಚಿತ್ರದುರ್ಗ ನಗರದ ಸರ್ಕಾರಿ ವಿಜ್ಞಾನ ಕಾಲೇಜು ಮೈದಾನದ ಶ್ರೀ ಜಗದ್ಗುರು ಶ್ರೀ ಜಯದೇವ ಮುರುಘಾ ರಾಜೇಂದ್ರ ಕ್ರೀಡಾಂಗಣದಲ್ಲಿ ಇಂದಿನಿಂದ ಆರಂಭವಾದ ಸ್ವದೇಶಿ ಜಾಗರಣ ಮಂಚ್ ಆಯೋಜಿಸಿರುವ ಸ್ವಾವಲಂಬನೆಯ ಪರಿಕಲ್ಪನೆ ಸ್ವದೇಶಿ ಮೇಳದ ಸಾರ್ವಜನಿಕ ಉದ್ಘಾಟನಾ ಸಮಾರಂಭದ ದಿವ್ಯಸಾನ್ನಿಧ್ಯವನ್ನು ವಹಿಸಿ ಮಾತನಾಡಿದ ಶ್ರೀಗಳು, ಈ ಸ್ವದೇಶಿ ಮೇಳ ಕಾರ್ಯಕ್ರಮವು ಕೇವಲ ಬಿಜೆಪಿ ಕಾರ್ಯಕ್ರಮವೋ ಅಥವಾ ಎಲ್ಲರ ಕಾರ್ಯಕ್ರಮವೋ.ಈ ಕಾರ್ಯಕ್ರಮ ಬಿಜೆಪಿ ಪಕ್ಷದ ಕಾರ್ಯಕ್ರಮವಾಗಿದೆ.. ಕಾಂಗ್ರೆಸ್ ಪಕ್ಷದ ಕಾರ್ಯಕ್ರಮವಾಗಿ ಏಕೆ ಉಳಿದಿಲ್ಲ ಎಂದು ಸಾರ್ವಜನಿಕರು ಪ್ರಶ್ನಿಸಿಕೊಳ್ಳಬೇಕು.ಯಾವ ಪಕ್ಷಕ್ಕೆ ಸ್ವದೇಶಿ ಆದರ್ಶ ಸ್ವಾತಂತ್ರ್ಯ ಪೂರ್ವದಲ್ಲಿ ಇತ್ತೋ ಇಂದು ಅದು ಕಾಣೆಯಾಗಿದೆ..ಇಂದು ಉದ್ಘಾಟನೆಗೆ ಚರಕವನ್ನು ಇಟ್ಟಿದ್ದೀರಿ ಅದು ಸ್ವತಂತ್ರ ಭಾವನೆಯ ಸಂಕೇತ.. ಕಾಂಗ್ರೆಸ್ ಸಂಕೇತವಲ್ಲ.ಮುಂಬರುವ ಸ್ವದೇಶಿ ಮೇಳದಲ್ಲಿ ಕಾಂಗ್ರೆಸ್ ಪಕ್ಷದವರು ಸೇರುವಂತಾಗಬೇಕು ಎಂದರು.
ಸ್ವದೇಶಿ ಮೇಳದ ಸಾರ್ವಜನಿಕ ಉದ್ಘಾಟನೆಯನ್ನು ಮಾಡಿದ ಮಾಜಿ ಮುಖ್ಯಮಂತ್ರಿಗಳು ಮತ್ತು ಗದಗ, ಹಾವೇರಿ ಲೋಕಸಭಾ ಕ್ಷೇತ್ರದ ಸದಸ್ಯರಾದ ಬಸವರಾಜ ಎಸ್ ಬೊಮ್ಮಾಯಿ ಮಾತನಾಡಿ, ಸ್ವದೇಶಿ ಭಾವನೆ ಹುಟ್ಟಿದ್ದು ರೈತರಲ್ಲಿ.. ರೈತ ಸ್ವಾಭಿಮಾನಿ ಆಗಿರುತ್ತಾನೋ ಆ ದೇಶ ಸ್ವಾವಲಂಬನೆ ಯಾಗಿರುತ್ತದೆ..ಉದಾರೀಕರಣ, ಜಾಗತೀಕರಣ, ಖಾಸಗಿಕರಣ ಜೊತೆಗೆ ಅಂತರಕರಣ ಸೇರಬೇಕಾಗಿದೆ..ಕೇವಲ ವ್ಯಾಪಾರ ಉದ್ದೇಶ ಇಟ್ಟುಕೊಂಡು ಯಾವ ದೇಶವು ಸಹ ಉದ್ದಾರವಾಗಿಲ್ಲ ಜೊತೆಗೆ ಅಂತರ್ಕರಣ ಬೇಕು.ಹೊಸ ಹೊಸ ತಂತ್ರಜ್ಞಾನವನ್ನು ತಯಾರು ಮಾಡುವ ಶಕ್ತಿ ಭಾರತಕ್ಕಿದೆ ಅದಕ್ಕೆ ಟ್ರಂಪ್ ಗೆ ಭಾರತ ದೇಶದ ಮೇಲೆ ಕಣ್ಣು. ಭಾರತದ ಉತ್ಪನ್ನಗಳಿಗೆ ಭಾರತದ ಮಾರುಕಟ್ಟೆಗಳಷ್ಟೇ ಅಲ್ಲದೇ ವಿದೇಶಿ ಮಾರಕಟ್ಟೆಗಳು ತೆರೆದುಕೊಳ್ಳಬೇಕು ಆವಾಗ ಮಾತ್ರ ಸ್ವದೇಶಿ ಮೇಳ ಯಶಸ್ವಿಯಾಗಲಿದೆ ಎಂದರು.
ಬ್ರಿಟಿಷರು ಸುಮ್ಮನೆ ಭಾರತ ಬಿಟ್ಟು ಹೋಗಲಿಲ್ಲ.. ರೈತರು ಕೂಲಿ ಕಾರ್ಮಿಕರು ಅವರ ಹಿಂದೆ ಬಿದ್ದಿದ್ದರಿಂದ ನಮ್ಮ ಬಟ್ಟೆ, ನಮ್ಮ ವಸ್ತುಗಳನ್ನು ತಯಾರು ಮಾಡಲು ಶುರು ಮಾಡಿದಾಗ ಬ್ರಿಟಿಷರು ಭಾರತ ಬಿಟ್ಟು ಹೋದರು ಮಹಾತ್ಮ ಗಾಂಧೀಜಿಯವರು ಸ್ವದೇಶಿ ವಸ್ತುಗಳನ್ನು ಬಳಸುವ ಮೂಲಕ ವಿದೇಶಿ ವಸ್ತುಗಳನ್ನು ಸುಡುವ ಮೂಲಕ ಸ್ವದೇಶಿ ಚಳುವಳಿಯನ್ನು ಆರಂಭಿಸಿದ್ದರು.ಪ್ರತಿಯೊಬ್ಬ ಭಾರತೀಯನಲ್ಲಿ ಸ್ವದೇಶಿ ಭಾವನೆಯಿದೆ ಅದಕ್ಕೆ ಪೂರಕವಾದ ವಾತಾವರಣವನ್ನು ಸೃಷ್ಟಿ ಮಾಡುವುದು ಸರ್ಕಾರದ ಜವಾಬ್ದಾರಿ ಎಂದು ಬೋಮ್ಮಾಯಿ ತಿಳಿಸಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಮಾಜಿ ಉಪಮುಖ್ಯಮಂತ್ರಿಗಳು ಮತ್ತು ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಸದಸ್ಯರಾದ ಗೋವಿಂದ ಎಂ ಕಾರಜೋಳ ಮಾತನಾಡಿ, ಒಂದು ಕಾಲದಲ್ಲಿ ಆಹಾರಕ್ಕಾಗಿ ಪರದಾಡುತ್ತಿದ್ದ ಭಾರತ ಇದು ಅದರಲ್ಲಿ ಸ್ವಾವಲಂಬಿಯಾಗಿ ಬೇರೆ ದೇಶಗಳಿಗೆ ರಫ್ತು ಮಾಡುವಷ್ಟರ ಮಟ್ಟಿಗೆ ಬೆಳದಿದೆ. ಗಾಂಧಿಜಿಯವರ ರಾಮರಾಜ್ಯ ಗ್ರಾಮ ಸ್ವರಾಜ್ಯದ ಕನಸನ್ನು ಕಂಡಿದ್ದು ಆದರೆ ಇಂದಿನ ದಿನಮಾನದಲ್ಲಿ ಹಳ್ಳಿಗಳು ವಯೋವೃದ್ದರಿಂದ ಮಹಿಳೆಯರಿಂದ ಮಕ್ಕಳಿಂದ ಕೂಡಿದ ಗ್ರಾಮವಾಗಿದೆ ಯುವ ಜನತೆ ತಮ್ಮಲ್ಲಿ ಸಾಕಷ್ಟು ಭೂಮಿ ಇದ್ದರೂ ಸಹಾ ಕನಿಷ್ಠ ವೇತನಕ್ಕಾಗಿ ಪಟ್ಟಣಗಳಿಗೆ ಹೋಗಿ ಅಲ್ಲಿ ಹೊಟೇಲ್ ನಲ್ಲಿ ಕೆಲಸ ಮಾಡುತ್ತಿದ್ದಾರೆ. ಕೃಷಿ ಮಾಡಲು ಯಾರು ಸಹಾ ತಯಾರಿಲ್ಲ, ಕೃಷಿ ಮಾಡದಮತ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವಿಷಾಧಿಸಿದರು.
ಮುಖ್ಯ ಭಾಷಣಕಾರರಾಗಿ ಮಾತನಾಡಿದ ಅರ್ಥಶಾಸ್ತ್ರಜ್ಞರು ಮತ್ತು ಸ್ವದೇಶಿ ಚಿಂತಕರಾದ ಪ್ರೊ. ಬಿ.ಎಂ. ಕುಮಾರಸ್ವಾಮಿ ಸ್ವದೇಶಿ ಮೇಳಗಳು ನಾಲ್ಕು ಹಂತಗಳಲ್ಲಿ ನಿರಂತರವಾಗಿ ನಡೆಯುತ್ತಾ ಬಂದಿವೆ, ಅವುಗಳೆಂದರೆ 1850 ರಿಂದ 1904 ಪ್ರಥಮ, 1905 ರಿಂದ 1917 ಎರಡನೇ ಹಂತ, 1918 ರಿಂದ 1947 ಮೂರನೇ ಹಂತ 1991 ರಿಂದ ನಾಲ್ಕನೇ ಹಂತ ನಡೆಯಿತು. ನಮ್ಮನ್ನಾಳಿದ ಬ್ರಿಟಿಷರ್ ನಮ್ಮ ದೇಶದಲ್ಲಿ ಸಂಪತ್ತನ್ನು ಕೊಳ್ಳೆ ಹೊಡೆಯುವುದರ ಮೂಲಕ ದೇಶವನ್ನು ಬಡ ರಾಷ್ಟ್ರವನ್ನಾಗಿ ಮಾಡಿದರು ಚಳ್ಳಕೆರೆಯಲ್ಲಿ ಒಂದು ಕಾಲದಲ್ಲಿ ಇದ್ದ ಎಣ್ಣೆ ಕೈಗಾರಿಕೆಗಳು ಇಂದು ಮಾಯವಾಗಿದೆ ಇದೆ ರೀತಿ ದಾವಣಗೆರೆಯಲ್ಲಿ ಇದ್ದ ಹತ್ತಿ ಹಾಗೂ ಬಟ್ಟೆ ಕೈಗಾರಿಕೆಗಳು ಸಹಾ ಮಾಯವಾಗಿದೆ ಇದಕ್ಕೆಲ್ಲ ತ್ರಿಕರಣಗಳು ಕಾರಣವಾಗಿವೆ. ಇದರಿಂದ ಅರ್ಥಿಕೆತ ಮೇಲೆ ದೊಡ್ಡದಾದ ಪರಿಣಾಮ ಬೀರಿದೆ, ಈಗ ಜಾಗತೀಕರಣ ಅಂತಿಮ ಹಂತಕ್ಕೆ ಬಂದಿದೆ ಸ್ವದೇಶಿ ವಸ್ತುಗಳ ಬಳಕೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ದೇಶದಲ್ಲಿ ದೊಡ್ಡ ದೊಡ್ಡ ಉದ್ಯಮೆಗಳಿಂದ ನಮ್ಮ ದೇಶದ ಅರ್ಥಿಕತೆ ನಿಂತಿಲ್ಲ ಅದು ನಿಂತಿರುವುದು ಸಣ್ಣ ಸಣ್ಣ ಕೈಗಾರಿಕೆಗಳ ಮೇಲೆ, ಇವುಗಳು ಶೇ50 ರಷ್ಟು ತಮ್ಮ ವಸ್ತುಗಳನ್ನು ಹೂರ ದೇಶಗಳಿಗೆ ರಫ್ತು ಮಾಡುತ್ತಿವೆ, ಇದರಿಂದ ಈ ರೀತಿಯಾದ ಸ್ವದೇಶಿ ಮೇಳಗಳಲ್ಲಿ ಬೇಡಿಕೆ ಹೆಚ್ಚಾಗಿದೆ ಎಂದರು
ಮುಖ್ಯ ಅತಿಥಿಗಳು ನಾ,ತಿಪ್ಪೇಸ್ವಾಮಿ, ಸಂಯೋಜಕರಾದ ಕೆ.ಎಸ್. ನವೀನ್, ಸಂಘಟಕರಾದ ರವೀಂದ್ರ ಎಂ,ಸಹ ಸಂಘಟಕ ರಾದ ಅನಿತ್ಕುಮಾರ್, ಕೆ.ಟಿ.ಕುಮಾರ ಸ್ವಾಮಿ, ಸಂಚಾಲಕರಾದ ಸೌಭಾಗ್ಯ ಬಸವರಾಜ್, ಸಹ ಸಂಚಾಲಕರು ಹನುಮಂತೇಗೌಡ ಭಾಗವಹಿಸಿದ್ದರು. ಪ್ರಜ್ವಲ್ ಪ್ರಾರ್ಥಿಸಿದರೆ, ನವೀನ್ ಸ್ವಾಗತಿಸಿದರು, ಮಹಾಂತೇಶ್ ಪ್ರಸ್ತಾವಿಕವಾಗಿ ಮಾತನಾಡಿದರು, ಜಯವರ್ಧನ್ ಕಾರ್ಯಕ್ರಮ ನಿರೂಪಿಸಿದರು. ರವೀಂದ್ರ ವಂದಿಸಿದರು.
ಇದಕ್ಕೂ ಮುನ್ನಾ ಸಮಾರಂಭಕ್ಕೆ ಅಗಮಿಸಿದ ಗಣ್ಯರನ್ನು ಪಂಚಚಾರ್ಯ ಕಲ್ಯಾಣ ಮಂಟಪದಿಂದ ಸಭಾ ವೇದಿಕೆಯವರೆಗೂ ತಮಟೆ, ವೀರಗಾಸೆ, ನಂದಿ ಕೋಲು, ಕರಿಮಾಳಿ, ಕಹಳೆ ಸೇರಿದಂತೆ ವಿವಿಧ ಜನಪದ ಕಲಾತಂಡಗಳೊಂದಿಗೆ ಮೆರವಣಿಗೆಯ ಮೂಲಕ ಕರೆತರÀಲಾಯಿತು. ಸ್ವದೇಶಿ ಜಾಗರಣ ಮಂಚ್ ಆಯೋಜಿಸಿರುವ ಸ್ವಾವಲಂಬನೆಯ ಪರಿಕಲ್ಪನೆ ಸ್ವದೇಶಿ ಮೇಳದಲ್ಲಿ ಹಾಕಲಾದ ಮಳಿಗೆಗಳನ್ನು ಸಮಾರಂಭದ ಗಣ್ಯರು ವೀಕ್ಷಣೆಯನ್ನು ಮಾಡಿದರು


































