ಉತ್ತರ ಪ್ರದೇಶ : ಹರಿ ಓಂ ಹಾಡುಗಾರ ಸಂಗೀತಗಾರ ಆಗಲು ಹೊರಟವರು ಐಎಎಸ್ ಅಧಿಕಾರಿಯಾದ ಅವರ ಕುತೂಹಲಕಾರಿ ಸ್ಟೋರಿ ಇಲ್ಲಿದೆ.
ಡಾ ಹರಿ ಓಂ ಉತ್ತರ ಪ್ರದೇಶದ ಅಮೆಥಿ ಜಿಲ್ಲೆಯ ಕತಾರಿ ಎಂಬ ಸಣ್ಣ ಹಳ್ಳಿಯಲ್ಲಿ ಜನಿಸಿದವರು. ಅವರ ಬಾಲ್ಯದ ಶಿಕ್ಷಣದ ನಂತರ ಅಲಹಾಬಾದ್ ನಲ್ಲಿ ಪದವಿ ಪಡೆದರು. ಇವರು ಚಿಕ್ಕವರಿದ್ದಾಗ ಹೆಚ್ಚು ಗಜಲ್ಸ್ ಹಾಡುವುದು, ಇತರೆ ಹಾಡುಗಳು ಹಾಗೂ ಭಜನೆಗಳನ್ನು ಹಾಡುವ ಹವ್ಯಾಸ ರೂಢಿಸಿಕೊಂಡಿದ್ದರು. ಹಾಡುವುದು ಎಂದರೆ ಇವರಿಗೆ ಹೆಚ್ಚು ಪ್ರೀತಿ.
ಅಲಹಾಬಾದ್ಗೆ ಪದವಿ ಅಧ್ಯಯನಕ್ಕೆ ಹೊರಟಾಗ ಅಲ್ಲಿನ ವಾತಾವರಣ ಹೆಚ್ಚು ಪರಿಣಾಮ ಬೀರಿತಂತೆ. ಅಲ್ಲಿನ ಮಿತ್ರರು ಹೆಚ್ಚು ಐಎಎಸ್, ಸಿವಿಲ್ ಸರ್ವೀಸ್ ಪರೀಕ್ಷೆ ಬಗ್ಗೆ ಮಾತನಾಡುತ್ತಿದ್ದ ಕಾರಣ, ಅಲ್ಲಿಂದಲೇ ಇವರು ತಾನು ಸಹ ನಾಗರೀಕ ಸೇವೆಗಳ ಪರೀಕ್ಷೆಗೆ ಓದಬೇಕು ಎಂದು ನಿರ್ಧಾರ ಮಾಡಿದರಂತೆ.
ಹರಿ ಓಂ 1992 ರಲ್ಲಿ ತಮ್ಮ ಪದವಿ ಮುಗಿದ ನಂತರ ಜೆಎನ್ಯು ಗೆ ಸ್ನಾತಕೋತ್ತರ ಪದವಿ ಅಧ್ಯಯನಕ್ಕೆ ಹೋದರಂತೆ. ಅಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಐಎಎಸ್ ಬಗ್ಗೆ ಹೆಚ್ಚು ಗಂಭೀರವಾಗಿ ಓದುತ್ತಿದ್ದರಂತೆ. ದೆಹಲಿ ಅಲ್ಲಿಯೇ ಇದ್ದುಕೊಂಡು ಯುಪಿಎಸ್ಸಿ ಪರೀಕ್ಷೆಗೆ ಬೇಕಾದ ಎಲ್ಲಾ ಮಾರ್ಗದರ್ಶನ, ಸಲಹೆಗಳನ್ನು ಪಡೆದುಕೊಂಡು ಯುಪಿಎಸ್ಸಿ ಪರೀಕ್ಷೆ ಬರೆಯಲು ನಿರ್ಧಾರ ಮಾಡಿದರಂತೆ. 1997 ನೇ ಬ್ಯಾಚ್ನಲ್ಲಿ ಸಿಎಸ್ಇ ಪಾಸ್ ಮಾಡುವ ಮೂಲಕ ಐಎಎಸ್ ಅಧಿಕಾರಿಯಾದರು.
ನಂತರದಲ್ಲಿ ಉತ್ತರ ಪ್ರದೇಶದ ಹಲವು ಜಿಲ್ಲೆಗಳಲ್ಲಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಆಗಿ ಕರ್ತವ್ಯ ನಿರ್ವಹಿಸಿದ್ದಾರೆ. ಐಎಎಸ್ ಅಧಿಕಾರಿ ಆದಮೇಲು ಸಹ ಸಂಗೀತ ಆಸಕ್ತಿ, ಬರವಣಿಗೆ ಆಸಕ್ತಿ ಇವರಿಗೆ ಕುಗ್ಗಲಿಲ್ಲ. ಹರಿ ಓಂ ಸಹ ಆಗಾಗ ಗಜಲ್ ಹಾಡುವ ಹವ್ಯಾಸ ಬೆಳೆಸಿಕೊಂಡಿದ್ದಾರೆ. ಇವರೆ ಬರೆದು, ಸಂಯೋಜಿಸಿರುವ ಗಜಲ್ ಗಳು ಇವೆ. ಹಲವು ಪುಸ್ತಕಗಳನ್ನು ಬರೆದಿದ್ದಾರೆ.
2016 ರಲ್ಲಿ ಇವರ ಮೊದಲ ಆಲ್ಬಮ್ ಅನ್ನು ಬಿಡುಗಡೆ ಮಾಡಲಾಗಿದೆ. ಇದು ಅವರು ಬರೆದ ಪದ್ಯಗಳ ಆಧಾರಿತವಾಗಿದ್ದು, ಸೀರೀಸ್ಗಳು ನಿರಂತರವಾಗಿವೆ. ಅವರು ಸಂಗೀತ / ಹಾಡುವುದರದ ಮೇಲಿನ ಪ್ರೀತಿ ಇನ್ನೂ ಬಿಟ್ಟಿಲ್ಲ
ಹರಿ ಓಂ ಸಹ ಆಗಾಗ ಗಜಲ್ ಹಾಡುವ ಹವ್ಯಾಸ ಬೆಳೆಸಿಕೊಂಡಿದ್ದಾರೆ. ಇವರೆ ಬರೆದು, ಸಂಯೋಜಿಸಿರುವ ಗಜಲ್ ಗಳು ಇವೆ. ಹಲವು ಪುಸ್ತಕಗಳನ್ನು ಬರೆದಿದ್ದಾರೆ. 2016 ರಲ್ಲಿ ಇವರ ಮೊದಲ ಆಲ್ಬಮ್ ಅನ್ನು ಬಿಡುಗಡೆ ಮಾಡಲಾಗಿದೆ. ಇದು ಅವರು ಬರೆದ ಪದ್ಯಗಳ ಆಧಾರಿತವಾಗಿದ್ದು, ಸೀರೀಸ್ಗಳು ನಿರಂತರವಾಗಿವೆ. ಅವರು ಸಂಗೀತ, ಹಾಡುವುದರದ ಮೇಲಿನ ಪ್ರೀತಿ ಇನ್ನೂ ಬಿಟ್ಟಿಲ್ಲ, ಎಂಬುದಕ್ಕೆ ಈ ಕೆಳಗೆ ನೀಡಿರುವ ಅವರೇ ಹಾಡಿರುವ ಆಲ್ಬಂ ಸಾಕ್ಷಿ ಆಗಿದೆ.































